ಕರಾವಳಿಯ ತಿಂಡಿಪ್ರಿಯರ ಹಾಟ್ ಸ್ಪಾಟ್ “ಬೇಕ್ ಸ್ಟುಡಿಯೋ”:ಸಖತ್ ಟೇಸ್ಟಿ ಇಲ್ಲಿನ ಬೇಕ್ ಖಾದ್ಯಗಳು!
ಸಿಹಿ ತಿಂಡಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ತಾಜಾ ತಾಜಾ ತರಹೇವಾರಿ ಕೇಕ್ ಗಳು, ಬರ್ಗರ್,ಪಪ್ಸ್,ಮೊದಲಾದ ಐಟಂ ಗಳ ಹೆಸರೆತ್ತಿದರೆ ಸಾಕು ಎಲ್ಲರ ಬಾಯಲ್ಲೂ ಆಸೆ ಹುಟ್ಟುತ್ತದೆ. ಕರಾವಳಿಯ ತಿಂಡಿಪ್ರಿಯರಿಗೆ ಇಂತಹ ಬಿಸಿ ಬಿಸಿ ಐಟಂಗಳನ್ನು ಕೊಟ್ಟು ಸಂತೃಪ್ತಪಡಿಸಿದ ದಿ ಬೆಸ್ಟ್ ಬೇಕ್ ಶಾಪ್ ಒಂದಿದೆ. ಈ ಶಾಪ್ ನಲ್ಲಿ ಕೇಕ್ ಮತ್ತು ಸಿಹಿ ತಿಂಡಿಗಳನ್ನು ತಿಂದವರು ಬಾಯಲ್ಲಿ ಆಹಾ ಎನ್ನುವ ಉದ್ಗಾರ ತೆಗೆಯದೇ ಇರಲಾರರು. ಯಾವುದಪ್ಪಾ ಈ ಶಾಪ್ ಅಂತೀರಾ? ಇದೇ ಬೇಕ್ ಸ್ಟುಡಿಯೋ […]
ತೆಂಗಿನ ಸೋಗೆ ಹೆಣೆದು ಗಮನಸೆಳೆದ ಪೇಜಾವರ ಶ್ರೀ
ಉಡುಪಿ: ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರ ವಿಭಿನ್ನ ವ್ಯಕ್ತಿತ್ವದ ಬಗ್ಗೆ ಅನೇಕ ಬಾರಿ ಕೇಳಿದ್ದೇವೆ, ನೋಡಿದ್ದೇವೆ. ಇದೀಗ ಆ ಸರದಿಗೆ ತೆಂಗಿನ ಸೋಗೆ ಹೆಣೆಯುವ ಪ್ರತಿಭೆಯೂ ಸೇರ್ಪಡೆಯಾಗಿದೆ. ಹೌದು, ಕೃಷಿ ಕುಟುಂಬದಿಂದ ಬಂದ ಶ್ರೀಗಳು ಸನ್ಯಾಸ ಸ್ವೀಕಾರದವರೆಗೂ ಆ ತುಂಬು ಸಂಪ್ರದಾಯಸ್ಥ ಮನೆಯ ಎಲ್ಲ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಆ ಬಳಿಕವೂ ಸಂದರ್ಭ ಸಿಕ್ಕಾಗೆಲ್ಲ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಯಾವುದೇ ಬಿಗುಮಾನಗಳಿಲ್ಲದೆ ತೊಡಗಿಸಿಕೊಂಡದ್ದನ್ನು ಕಾಣುತ್ತಿರುತ್ತೇವೆ. ಮಂಗಳವಾರದಂದು ಉಡುಪಿಯ ಮಠದಲ್ಲಿ ಯಾವುದೋ ಕೆಲಸಕ್ಕೆ ಅಗತ್ಯವಿದ್ದ ತೆಂಗಿನ ಸೋಗೆಯನ್ನೂ ತಾವೇ ಸ್ವತಃ ತುಂಬ […]
ಮಾಜಿ ಸಚಿವ ಯುಟಿ ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ದಾವಣಗೆರೆ: ಇಲ್ಲಿನ ದಾವಣಗೆರೆಯ ಅನಗೋಡು ಬಸ್ ನಿಲ್ದಾಣದ ಸಮೀಪ ಮಾಜಿ ಸಚಿವ ಯುಟಿ ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಖಾದರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೋವಾ ಕಾರು ಹಾಗೂ ಕಂಟೈನರ್ ನಡುವೆ ಡಿಕ್ಕಿಯಾಗಿದ್ದು, ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಖಾದರ್ ಅವರು ಬೆಳಗಾವಿ ಲೋಕಸಭೆ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ ಘಟನೆ ಬಳಿಕ ಖಾದರ್ ಬೆಂಗಳೂರಿಗೆ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ.
ಸಂಸ್ಕೃತ ಸಂಭಾಷಣ ಶಿಬಿರ ಸಮಾರೋಪ
ಉಡುಪಿ: ಇಲ್ಲಿನ ತೆಂಕಪೇಟೆಯಲ್ಲಿರುವ ಸಂಸ್ಕೃತ ಭಾರತಿ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಇದೇ ತಿಂಗಳ ನಾಲ್ಕನೇ ತಾರೀಕಿನಂದು ಆರಂಭಗೊಂಡಿದ್ದ ಹತ್ತು ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರ ಮಂಗಳವಾರ ಸಮಾರೋಪಗೊಂಡಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಕೃತ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಶ್ರೀಧರ ಆಚಾರ್ಯ, ಒಂದು ಕಾಲದಲ್ಲಿ ಜನಸಾಮಾನ್ಯರ ಆಡುಭಾಷೆಯಾಗಿದ್ದ ಸಂಸ್ಕೃತವನ್ನು ನಾವು ನಮ್ಮ ಉದಾಸೀನತೆಯಿಂದಾಗಿ ಕಳೆದುಕೊಳ್ಳುತ್ತ ಬಂದೆವು. ಆದರೆ, ಸಂಸ್ಕೃತವನ್ನು ಪುನಃ ಜನಸಾಮಾನ್ಯರ ಆಡುಭಾಷೆ ಆಗುವಂತಾಗಬೇಕೆಂಬ ನಿಟ್ಟಿನಲ್ಲಿ ಸಂಸ್ಕೃತ ಭಾರತಿಯು ಸಂಘಟಿತ ಪ್ರಯತ್ನ ನಡೆಸುತ್ತಿದ್ದು, ದೇಶ-ವಿದೇಶಗಳಲ್ಲಿ ಸಂಸ್ಕೃತ […]