ಏ.15ರಂದು ಮೀನು ಮಾರಾಟ ಫೆಡರೇಶನ್ ನಿಂದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ ತರಬೇತಿ ಶಿಬಿರ: ಯಶ್‍ಪಾಲ್ ಸುವರ್ಣ

ಉಡುಪಿ: ಭಾರತ ಸರಕಾರದ ಪ್ರಾದೇಶಿಕ ತರಬೇತಿ ಕೇಂದ್ರ ಬೆಂಗಳೂರು, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಓಅಆಅ), ಮೀನುಗಾರಿಕಾ ಇಲಾಖೆ, ಮೀನುಗಾರಿಕಾ ಸಚಿವಾಲಯ, ಪಶುಸಂಗೋಪನೆ ಮತ್ತು ಡೈರಿ ಹಾಗೂ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು ಜಂಟಿಯಾಗಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಬಗ್ಗೆ ಫೆಡರೇಶನಿನ ಮಂಗಳೂರಿನ ಮುಳಿಹಿತ್ಲುವಿನಲ್ಲಿರುವ ಪ್ರಧಾನ ಕಚೇರಿಯಲ್ಲಿ ಏ.15ರಂದು ಬೆಳಿಗ್ಗೆ 10 ಗಂಟೆಗೆ ಒಂದು ದಿನದ ತರಬೇತಿ ಶಿಬಿರವನ್ನು ಆಯೋಜಿಸಿರುವುದಾಗಿ ಫೆಡರೇಷನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ ತಿಳಿಸಿದ್ದಾರೆ. […]

ಯುಗಾದಿ ಹಬ್ಬಕ್ಕೆ ಗಣ್ಯರ ಶುಭಾಶಯ..

ಯುಗಾದಿ ಹಬ್ಬ ಮತ್ತೆ ಬದುಕಿಗೆ ಹೊಸತನ್ನು ಕೊಡಲು ಬಂದಿದೆ. ಬೇವು ಬೆಲ್ಲದ ಈ ಹಬ್ಬಕ್ಕೆ ಕರಾವಳಿಯ ಗಣ್ಯರು ಉಡುಪಿxpress ಮೂಲಕ ಶುಭಹಾರೈಸಿದ್ದಾರೆ.        

ಮಂಗಳವಾರದಿಂದ ರಂಜಾನ್ ಉಪವಾಸ ಆರಂಭ

ಉಡುಪಿ: ಸೋಮವಾರ ಸಂಜೆ ರಂಝಾನ್ ತಿಂಗಳ ಪ್ರಥಮ ಚಂದ್ರದರ್ಶನ ಆಗಿರುವುದರಿಂದ ನಾಳೆ (ಏ.13) ರಂಝಾನ್ ತಿಂಗಳ ಉಪವಾಸ ಆರಂಭಿಸುವುದಾಗಿ ಉಡುಪಿ, ಹಾಸನ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿರುವುದಾಗಿ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರು ಹಾಗೂ ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಂಧೂರ ಕಲಾವಿದೆರ್ ಕಾರ್ಲ ನಾಟಕ ತಂಡದ 6ನೇ ವರ್ಷಾಚರಣೆ: ಕಾರ್ಕಳ ಸುರಕ್ಷಾ ಸೇವಾಶ್ರಮಕ್ಕೆ ಅಕ್ಕಿ, ದಿನಸಿ ಸಾಮಗ್ರಿ ವಿತರಣೆ

ಕಾರ್ಕಳ: ಸಿಂಧೂರ ಕಲಾವಿದೆರ್ ಕಾರ್ಲ ಇದರ 6ನೇ ವರ್ಷಾಚರಣೆಯ ಪ್ರಯುಕ್ತ ತಂಡದ ಸಾರಥಿ ಲೀಲಾವತಿ ಪೊಸಲಾಯಿ ಅವರ ನೇತೃತ್ವದಲ್ಲಿ ಕಾರ್ಕಳದ ಸುರಕ್ಷಾ ಸೇವಾಶ್ರಮಕ್ಕೆ ನಾಟಕ ತಂಡದ ಸದಸ್ಯರು ಮತ್ತು ದಾನಿಗಳ ಸಹಾಯದಿಂದ ಅಕ್ಕಿ ಮತ್ತು ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಆಶ್ರಮಕ್ಕೆ ಭೇಟಿ ನೀಡಿದ ನಾಟಕ ತಂಡದ ಸದಸ್ಯರು ದಿನಸಿ ಸಾಮಗ್ರಿ ವಿತರಿಸಿದರು. ಬಳಿಕ ಆಶ್ರಮದ ಮುಖ್ಯಸ್ಥೆ ಆಯಿಶಾ ಅವರನ್ನು ತಂಡದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಂಡದ ಹಿರಿಯ ನಟ ರವೀಂದ್ರ ಶಾಂತಿ ಪುಲ್ಕೇರಿ, ಸಂಚಾಲಕ ಜೇರಾಲ್ಡ್ […]

ಸರ್ವಪಕ್ಷ ಸಭೆ ಕರೆದು ಲಾಕ್ ಡೌನ್ ಬಗ್ಗೆ ನಿರ್ಧಾರ: ಸಿಎಂ

ಬೀದರ್: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ, ಜನರು ಸಹಕಾರ ನೀಡದಿದ್ದರೆ ಲಾಕ್​ಡೌನ್ ಮಾಡುವುದು ಅನಿವಾರ್ಯವಾಗುತ್ತೆ. ಹಾಗಾಗಿ ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಬೀದರ್ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್​ಡೌನ್ ಮಾಡಿದರೆ ಜನರಿಗೆ ತೊಂದರೆ ಆಗುತ್ತೆ. ಲಾಕ್​ಡೌನ್​ನಿಂದ ತೊಂದರೆ ಬಗ್ಗೆ ಸರ್ಕಾರಕ್ಕೂ ಗೊತ್ತಿದೆ. ಆದರೆ ಪರಿಸ್ಥಿತಿ ಕೈಮೀರುತ್ತಿದೆ. ಈ ಹಿನ್ನೆಲೆಯಲ್ಲಿ, ವಿಪಕ್ಷದವರು ಯಾವುದೇ ಸಲಹೆ ನೀಡಿದರೂ ಸ್ವೀಕರಿಸ್ತೇವೆ ಎಂದು […]