ಮೇ 2ರ ನಂತರ ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಖಚಿತ: ಯತ್ನಾಳ್
ಬೆಂಗಳೂರು: ಮೇ 2ರ ನಂತರ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವುದು ಖಚಿತ. ಪಕ್ಷ ಉಳಿಯಬೇಕು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಲೇಬೇಕು. ಇಲ್ಲದಿದ್ದರೆ ಪಕ್ಷ ಉಳಿಯಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಅಪ್ಪ (ಯಡಿಯೂರಪ್ಪ), ಮಗನ (ವಿಜಯೇಂದ್ರ) ನಿಜಬಣ್ಣ ಬಯಲಾಗಲಿದೆ. ವಿಜಯೇಂದ್ರ ಎಷ್ಟು ಲೂಟಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಗುಡುಗಿದರು. ಫೆಡರಲ್ ಬ್ಯಾಂಕ್ ವ್ಯವಹಾರದಲ್ಲಿ ವಿಜಯೇಂದ್ರ ಅವರನ್ನು ಜಾರಿ ನಿರ್ದೇಶನಾಲಯದವರು (ಇ.ಡಿ) ಕರೆದುಕೊಂಡು […]
ನೇತ್ರತಜ್ಞ ಡಾ. ಕೆ. ಕೃಷ್ಣಪ್ರಸಾದ್, ಉದ್ಯಮಿ ಜಗದೀಶ ಎಸ್. ಗುಡಗುಂಟಿಗೆ ಹಂಪಿ ವಿವಿಯ ನಾಡೋಜ ಗೌರವ
ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯ ಈ ಬಾರಿಯ ನುಡಿಹಬ್ಬದ ಪ್ರಯುಕ್ತ ಕೊಡಮಾಡುವ ನಾಡೋಜ ಗೌರವ ಪದವಿಗೆ ಉಡುಪಿಯ ಖ್ಯಾತ ನೇತ್ರತಜ್ಞ ಡಾ. ಕೆ. ಕೃಷ್ಣಪ್ರಸಾದ್ ಹಾಗೂ ವಿಜಯಪುರ ಜಿಲ್ಲೆಯ ಉದ್ಯಮಿ ಜಗದೀಶ ಎಸ್. ಗುಡಗುಂಟಿ ಅವರು ಭಾಜನರಾಗಿದ್ದಾರೆ. ಏ. 9ರಂದು ನಡೆಯುವ ವಿ.ವಿ.ಯ 29ನೇ ನುಡಿಹಬ್ಬದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನಾಡೋಜ ಪದವಿ ಪ್ರದಾನ ಮಾಡುವರು. ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ 10 ಮಂದಿಗೆ ಡಿ.ಲಿಟ್ ಪದವಿ ಸೇರಿದಂತೆ ಎಂ.ಎ., ಪಿಎಚ್.ಡಿ., ಡಿಪ್ಲೋಮಾ ಕೋರ್ಸ್ […]
ಮಂಗಳೂರು ವಿವಿಯ ಏ. 8ರಿಂದ 10ರ ವರೆಗಿನ ಪದವಿ ಪರೀಕ್ಷೆಗಳು ಮುಂದೂಡಿಕೆ
ಮಂಗಳೂರು: ರಾಜ್ಯ ಸಾರಿಗೆ ಸಿಬ್ಬಂದಿಯ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಏ. 8ರಿಂದ 10ರ ವರೆಗೆ ನಿಗದಿಪಡಿಸಿದ್ದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದೂಡಿಕೆಯಾದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸಿ ತಿಳಿಸಲಾಗುವುದು ಎಂದು ಮಂಗಳೂರು ವಿವಿಯ ಕುಲಸಚಿವರು ತಿಳಿಸಿದ್ದಾರೆ.
ಉಡುಪಿ: ಆರೋಗ್ಯ ಇಲಾಖೆಯ ವಿವಿಧ ಹುದ್ದೆಗೆ ನೇರ ಸಂದರ್ಶನ
ಉಡುಪಿ: ಜಿಲ್ಲೆಯಲ್ಲಿ 6 ತಿಂಗಳ ಅವಧಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲು ಪ್ರಯೋಗಶಾಲಾ ತಂತ್ರಜ್ಞರ -2 ಹುದ್ದೆ (ವೇತನ-20,000) ಮತ್ತು ಪ್ರಯೋಗ ಶಾಲಾ ತಂತ್ರಜ್ಞರ -27 ಹುದ್ದೆ (ವೇತನ 10,000 ಮತ್ತು ₹15 per swab collection) ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ: ಡಿ.ಎಮ್.ಎಲ್.ಟಿ/ ಬಿ.ಎಮ್.ಎಲ್.ಟಿ ಅಥವಾ ಬಿಎಸ್.ಸಿ ಎಮ್.ಎಸ್.ಸಿ ನರ್ಸಿಂಗ್, ಬಿ.ಎಸ್.ಸಿ ನರ್ಸಿಂಗ್, ಜಿ.ಎನ್.ಎಂ. ಡಿಪ್ಲೋಮಾ ಆಪರೇಷನ್ ಟಿಟರ್ ಟೆಕ್ನಾಲಜಿಸ್ಟ್ ತರಬೇತಿ ಪ್ಯಾರಾ ಮೆಡಿಕಲ್ ಬೋರ್ಡ್ನಲ್ಲಿ ನೋಂದಣಿ ಮಾಡಿರಬೇಕು, ನರ್ಸಿಂಗ್ ನೋಂದಣಿ ಆಗಿರಬೇಕು ಮತ್ತು ನರ್ಸಿಂಗ್ ಮತ್ತು ಅರೆ […]
ಚರ್ಮದ ಮೈಬಣ್ಣ, ಕಾಂತಿ ಹೆಚ್ಚಲು ಈ ಪಲ್ಯ ಮಾಡಿ ತಿಂದ್ರೆ ಸಾಕು: ನಮ್ಮ ಆರೋಗ್ಯ ನಮ್ಮ ಕೈಲಿ ಅಂಕಣ
ಸಾಮಾನ್ಯವಾಗಿ ಅಲಸಂಡೆ ಪಲ್ಯ ಅಥವಾ ಅಲಸಂಡೆ ಬೀಜದ ಸಾರು ಮಾಡುವುದನ್ನು ಕಂಡಿರುತ್ತೇವೆ. ಆದರೆ ಅಲಸಂಡೆ ಸೊಪ್ಪಿನ ಪಲ್ಯ ಕೂಡಾ ಮಾಡಬಹುದು ಎನ್ನುವುದು ನಿಮಗೆ ತಿಳಿದಿದೆಯೇ? ಅಲಸಂಡೆ ಸೊಪ್ಪಿನ ಪಲ್ಯ ತುಂಬಾ ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು .ಅಲಸಂಡೆ ಸೊಪ್ಪು ಹಚ್ಚ-ಹಸಿರಾಗಿರುವುದರಿಂದ ಇದರಲ್ಲಿ ವಿಟಮಿನ್-ಎ ಹೇರಳವಾಗಿದೆ.ಇದರಿಂದ ಚರ್ಮದ ಮೈಬಣ್ಣ ಹಾಗೂ ಕಾಂತಿ ಹೆಚ್ಚುತ್ತದೆ ಹಾಗೂ ರಾತ್ರಿ ದೃಷ್ಟಿಯನ್ನು ಸುಧಾರಿಸುತ್ತದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಸಿಲ್ವಿಯಾ ಕೊಡ್ದೆರೋ ತಿಳಿಸಿದ್ದಾರೆ ಒಂದೊಳ್ಳೆ ಆರೋಗ್ಯಕರ ರೆಸಿಪಿ. ವಿಟಮಿನ್-ಬಿ2 ಹಾಗೂ ವಿಟಮಿನ್-ಸಿ ಪ್ರಮಾಣ […]