ನೇತ್ರತಜ್ಞ ಡಾ. ಕೆ. ಕೃಷ್ಣಪ್ರಸಾದ್, ಉದ್ಯಮಿ ಜಗದೀಶ ಎಸ್. ಗುಡಗುಂಟಿಗೆ ಹಂಪಿ ವಿವಿಯ ನಾಡೋಜ ಗೌರವ

ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯ ಈ ಬಾರಿಯ ನುಡಿಹಬ್ಬದ ಪ್ರಯುಕ್ತ ಕೊಡಮಾಡುವ ನಾಡೋಜ ಗೌರವ ಪದವಿಗೆ ಉಡುಪಿಯ ಖ್ಯಾತ ನೇತ್ರತಜ್ಞ ಡಾ. ಕೆ. ಕೃಷ್ಣಪ್ರಸಾದ್ ಹಾಗೂ ವಿಜಯಪುರ ಜಿಲ್ಲೆಯ ಉದ್ಯಮಿ ಜಗದೀಶ ಎಸ್. ಗುಡಗುಂಟಿ ಅವರು ಭಾಜನರಾಗಿದ್ದಾರೆ.

ಏ. 9ರಂದು ನಡೆಯುವ ವಿ.ವಿ.ಯ 29ನೇ ನುಡಿಹಬ್ಬದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನಾಡೋಜ ಪದವಿ ಪ್ರದಾನ ಮಾಡುವರು. ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ 10 ಮಂದಿಗೆ ಡಿ.ಲಿಟ್ ಪದವಿ ಸೇರಿದಂತೆ ಎಂ.ಎ., ಪಿಎಚ್.ಡಿ., ಡಿಪ್ಲೋಮಾ ಕೋರ್ಸ್ ಪೂರೈಸಿರುವ ಒಟ್ಟು 365 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ವಿ.ವಿ. ಕುಲಪತಿ ಡಾ. ಸಾ. ಚಿ. ರಮೇಶ್ ತಿಳಿಸಿದ್ದಾರೆ