ಉಡುಪಿ: ಆರೋಗ್ಯ ಇಲಾಖೆಯ ವಿವಿಧ ಹುದ್ದೆಗೆ ನೇರ ಸಂದರ್ಶನ

ಉಡುಪಿ: ಜಿಲ್ಲೆಯಲ್ಲಿ 6 ತಿಂಗಳ ಅವಧಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲು ಪ್ರಯೋಗಶಾಲಾ ತಂತ್ರಜ್ಞರ -2 ಹುದ್ದೆ (ವೇತನ-20,000) ಮತ್ತು ಪ್ರಯೋಗ ಶಾಲಾ ತಂತ್ರಜ್ಞರ -27 ಹುದ್ದೆ (ವೇತನ 10,000 ಮತ್ತು ₹15 per swab collection) ಅರ್ಜಿ‌ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಡಿ.ಎಮ್.ಎಲ್.ಟಿ/ ಬಿ.ಎಮ್.ಎಲ್.ಟಿ ಅಥವಾ ಬಿಎಸ್.ಸಿ ಎಮ್.ಎಸ್.ಸಿ ನರ್ಸಿಂಗ್, ಬಿ.ಎಸ್.ಸಿ ನರ್ಸಿಂಗ್, ಜಿ.ಎನ್.ಎಂ. ಡಿಪ್ಲೋಮಾ ಆಪರೇಷನ್ ಟಿಟರ್ ಟೆಕ್ನಾಲಜಿಸ್ಟ್ ತರಬೇತಿ ಪ್ಯಾರಾ ಮೆಡಿಕಲ್ ಬೋರ್ಡ್ನಲ್ಲಿ ನೋಂದಣಿ ಮಾಡಿರಬೇಕು, ನರ್ಸಿಂಗ್ ನೋಂದಣಿ ಆಗಿರಬೇಕು ಮತ್ತು ನರ್ಸಿಂಗ್ ಮತ್ತು ಅರೆ ವೈದ್ಯಕೀಯ ಪದವೀಧರರು, ಡಿಪ್ಲೊಮೋ ಮತ್ತು ವಿಜ್ಞಾನ ಪದವೀಧರರು ಅರ್ಜಿ ಸಲ್ಲಿಸಬಹುದು.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ – 89 ಹುದ್ದೆ (ವೇತನ-15,000). ವಿದ್ಯಾರ್ಹತೆ: ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತರಬೇತಿ ಹೊಂದಿ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಕಡ್ಡಾಯ. ಫಾರ್ಮಾಸಿಸ್ಟ್ -19 ಹುದ್ದೆ (ವೇತನ-20,000) ವಿದ್ಯಾರ್ಹತೆ: ಕರ್ನಾಟಕ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೋಮೊ ಇನ್ ಫಾರ್ಮಸಿ ಹೊಂದಿರಬೇಕು ಹಾಗೂ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು.

ಈ ಮೇಲಿನ ಎಲ್ಲಾ ಹುದ್ದೆಗಳಿಗೆ ಏಪ್ರಿಲ್ 12ರಂದು ಬೆಳಗ್ಗೆ 10.30ಕ್ಕೆ ಅಜ್ಜರಕಾಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ಈ ಮೇಲ್ಕಂಡ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಮೂಲ ದಾಖಲೆ, ದೃಢೀಕೃತ ದಾಖಲೆ ಮತ್ತು ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.