ಪ್ರಗ್ನೆಂಟ್ ಆದ್ರೆ ಮುಟ್ಟಾಗಲ್ವಂತೆ ಅಂತ ಯಾರೋ ಹೇಳಿದಾಗ ಅಳುಕು ಕಾಡಿತ್ತು: ಹುಡುಗಿಯೊಬ್ಬಳ ಪಿಸುಮಾತು

ನಾನಿನ್ನೂ ಪುಟ್ಟ ಹುಡುಗಿಯಾಗಿದ್ದೆ. ಅಪ್ಪನ ಜೊತೆ ನೆಂಟರೊಬ್ಬರ ಮನೆಗೆ ಹೋಗಿದ್ದೆ. ಆ ಮನೆ ಯಜಮಾನರು, “ಇವತ್ತು ನನ್ನದೇ ಅಡಿಗೆ ಮಾರ್ರೆ, ನಮ್ಮವರು ಒಳಗಿಲ್ಲ” ಎನ್ನುತ್ತಾ ನಕ್ಕರು. ಮನೆಯೊಡತಿ ಮನೆಯ ಜಗುಲಿಯಲ್ಲೇ ಒಂದು ಮೂಲೆಯಲ್ಲಿ ಕೂತಿದ್ದರೂ, ಇವರು ಯಾಕೆ ಹೀಗೆ ಹೇಳಿದರು ಎಂದು ನನಗೆ ಅರ್ಥವಾಗದೇ ತಲೆಯೊಳಗೆ ಪ್ರಶ್ನೆಗಳ ಸರಮಾಲೆಯೇ ಉದ್ಭವಿಸಿತು. ನಾವು ಇಡೀ ದಿನ ಅಲ್ಲೇ ಇದ್ದರೂ ಅವರು ಮಾತ್ರ ಒಂದು ಮೂಲೆಯಲ್ಲೇ ಕೂತು ನಮ್ಮೊಂದಿಗೆ ಮಾತನಾಡುತ್ತಿದ್ದರು, ಯಾರನ್ನೂ ಮುಟ್ಟದೇ ದೂರದಿಂದಲೇ ಎಲ್ಲವನ್ನೂ ತೆಗೆದುಕೊಳ್ಳುತ್ತಿದ್ದರು. ನಂಗಂತೂ ಎಲ್ಲವೂ […]

ಕೋವಿಡ್ ಹೊಸ ಮಾರ್ಗಸೂಚಿ ಪ್ರಕಟ: ದ.ಕ., ಉಡುಪಿ ಸಹಿತ 8 ಜಿಲ್ಲೆಗಳಲ್ಲಿ‌ ಧಾರ್ಮಿಕ ಆಚರಣೆ, ಜಾತ್ರೆ ನಿಷೇಧ; ಬಾರ್, ಥಿಯೇಟರ್ ನಲ್ಲಿ‌ ಶೇ. 50 ಮಂದಿಗೆ ಅವಕಾಶ

ಬೆಂಗಳೂರು: ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೆ, ಪಬ್‌ಗಳು, ಬಾರ್‌ಗಳು, ಕ್ಲಬ್‌ಗಳು, ರೆಸ್ಟೋರೆಂಟ್‌ಗಳಲ್ಲಿನ ಗ್ರಾಹಕರ ಸಂಖ್ಯೆ ಶೇ.50 ಮೀರಬಾರದು ಎಂದು ಆದೇಶಿಸಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಲಸಿಕೆ ಅಭಿಯಾನ ಚುರುಕುಗೊಳಿಸಲು ಸರ್ಕಾರ ತಿರ್ಮಾನಿಸಿದ್ದು, ರಾಜ್ಯದಲ್ಲಿ ಲಾಕ್ ಡೌನ್, ಸೆಮಿ ಲಾಕ್ ಡೌನ್, ನೈಟ್ ಕರ್ಫ್ಯೂ […]

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಗೆ ಕೊರೊನಾ ಪಾಸಿಟಿವ್

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಅವರಿಗೆ ಇಂದು ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಅವರು ಸಾಮಾಜಿಕ ಜಾಲತಾಣದ ಮೂಲಕ‌ ಮಾಹಿತಿ‌ ನೀಡಿದ್ದಾರೆ. ಶಾಸಕರು ಕಳೆದ ಮೂರು ತಿಂಗಳಿನಿಂದ ಕೇರಳದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಸದ್ಯ ಶಾಸಕರು ಕ್ವಾರಂಟೈನ್‌ ಗೆ ಒಳಗಾಗಿದ್ದು, ತಮ್ಮ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕೋವಿಡ್‌ ಟೆಸ್ಟ್‌ ಮಾಡಿಸುವಂತೆ ವಿನಂತಿಸಿದ್ದಾರೆ.

ಉಡುಪಿ ಜಿಲ್ಲೆಯಾದ್ಯಂತ ಶುಭ ಶುಕ್ರವಾರ ಆಚರಣೆ

ಉಡುಪಿ: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು(ಗುಡ್ ಫ್ರೈಡೆ) ಉಡುಪಿ ಜಿಲ್ಲೆಯಾದ್ಯಂತ ಉಪವಾಸ ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ಚರ್ಚುಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ಜರುಗಿತು. ಧರ್ಮ ಪ್ರಾಂತ್ಯದ ಪ್ರಧಾನ ದೇವಾಲಯವಾದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಢ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರುಗಳಾದ ಕೆನ್ಯೂಟ್, ಕಲ್ಯಾಣಪುರ ಪಿಲಾರ್ ಸಭೆಯ ಬ್ರಾಯನ್ ಸಿಕ್ವೇರಾ […]

ಯಕ್ಷಗಾನ ಕಲಿಕಾ ತರಗತಿ ಉದ್ಘಾಟನೆ

ಉಡುಪಿ: ಯಕ್ಷಗಾನ ನೃತ್ಯ ಕಲಿಕೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಬದುಕಿನಲ್ಲಿ ಶಿಸ್ತು ಕಲಿಸುತ್ತದೆ ಎಂದು ಅಂಬಲಪಾಡಿ ಲಕ್ಷ್ಮೀ ಜನಾರ್ದನ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಅಭಿಪ್ರಾಯಪಟ್ಟರು. ಅವರು ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ ನೂತನ ಕಟ್ಟಡ ‘ಶ್ರೀ ಜನಾರ್ದನ ಮಂಟಪ’ದಲ್ಲಿ ಜ್ಯೋತಿ ಬೆಳಗಿಸಿ ಯಕ್ಷಗಾನ ಕಲಿಕಾ ತರಗತಿ ಉದ್ಘಾಟಿಸಿ ಮಾತನಾಡಿದರು. ನೂತನ ಕಟ್ಟಡಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಮತ್ತು ಪೀಠೋಪಕರಣಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಯಕ್ಷಗಾನ ಕಲಾರಂಗದ […]