ಕಂಬಳದಲ್ಲಿ ನೂತನ ಅಮೋಘ ದಾಖಲೆ ಬರೆದ ಶ್ರೀನಿವಾಸ್ ಗೌಡ; ಕೇವಲ 8.96 ಸೆಕೆಂಡ್ 100 ಮೀ. ಓಟ

ಬೆಳ್ತಂಗಡಿ: ಇಲ್ಲಿನ ವೇಣೂರಿನಲ್ಲಿ ಶನಿವಾರ ಪ್ರಾರಂಭಗೊಂಡ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ನೂತನ‌ ಸರ್ವ ಶ್ರೇಷ್ಠ ದಾಖಲೆ ನಿರ್ಮಾಣವಾಗಿದೆ. ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರು 100 ಮೀ. ಉದ್ದದವನ್ನು  ಕೇವಲ 8.96 ಸೆಕಂಡ್ ನಲ್ಲಿ ಕ್ರಮಿಸಿ ಈ ಹಿಂದಿನ‌ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದ್ದಾರೆ. ಕಳೆದ ವರ್ಷ ಐಕಳ ಕಂಬಳದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಓಡಿಸುವ ಮೂಲಕ ಸಾಧನೆ ಮಾಡಿದ್ದ ಶ್ರೀನಿವಾಸ ಗೌಡರು ಇಂದು ಅವರದ್ದೇ ಕೋಣಗಳನ್ನು ಓಡಿಸುವ ಮೂಲಕ ಈ ವಿನೂತನ ದಾಖಲೆಯನ್ನು […]

ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ

ನವದೆಹಲಿ: ಬ್ಯಾಂಕಿಗ್‌ ವ್ಯವಸ್ಥೆ ಹಾಗೂ ಗಾತ್ರದ ದೃಷ್ಟಿಯಿಂದ ಮಹತ್ವದ್ದಾಗಿರುವ ಅಗ್ರ ಬ್ಯಾಂಕುಗಳ ಪಟ್ಟಿಯಲ್ಲಿ ಕೆನರಾ ಬ್ಯಾಂಕ್‌ ಕೂಡ ಸೇರ್ಪಡೆ ಆಗುವ ಸಾಧ್ಯತೆ ಇದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನದಿಂದಾಗಿ ಬ್ಯಾಂಕ್‌ ಆಫ್‌ ಬರೋಡಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕುಗಳು ಗಾತ್ರದಲ್ಲಿ ಕ್ರಮವಾಗಿ 3,4, ಮತ್ತು 5ನೇ ಸ್ಥಾನವನ್ನು ಅಲಂಕರಿಸಿದ್ದು, ಐಸಿಐಸಿಐ ಬ್ಯಾಂಕ್‌ನ್ನು 6ನೇ ಸ್ಥಾನಕ್ಕೆ ತಳ್ಳಿವೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ವ್ಯವಸ್ಥಿತ ಬ್ಯಾಂಕುಗಳ ಪಟ್ಟಿಯನ್ನು ಪರಿಷ್ಕೃರಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಈ ಪಟ್ಟಿ […]

ಶೀಂಬ್ರ ಕೃಷ್ಣಾಂಗಾರಕ ಸ್ನಾನಘಟ್ಟಕ್ಕೆ ಶಿಲಾನ್ಯಾಸ: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮಹತ್ವದ ಹೆಜ್ಜೆ; ಸೋದೆ ಶ್ರೀ

ಉಡುಪಿ: ಶ್ರೀ ವಾದಿರಾಜ ಗುರುಸಾರ್ವಭೌಮರು ತಮ್ಮ ‘ತೀರ್ಥಪ್ರಬಂಧ’ ಪ್ರವಾಸಕಥನದಲ್ಲಿ ಉಲ್ಲೇಖಿಸಿದ ಉಡುಪಿಯ ಜೀವನದಿ ಸ್ವರ್ಣೆಯ ತೀರದಲ್ಲಿರುವ ಪುರಾಣ ಪ್ರಸಿದ್ಧ ಕೃಷ್ಣಾಂಗಾರಕ ಸ್ನಾನ ಘಟ್ಟದಲ್ಲಿ ಸುಸಜ್ಜಿತ ಸ್ನಾನಘಟ್ಟಕ್ಕೆ ಚಾಲನೆ ದೊರೆತಿರುವುದು ಉಡುಪಿಯ ಧಾರ್ಮಿಕ ಪ್ರವಾಸೋದ್ಯಮದ ಪ್ರಗತಿಗೆ ಒಂದು ಮಹತ್ವದ ಹೆಜ್ಜೆ ಎಂದು ಸೋದೆ ಮಠಾಧೀಶ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದ್ದಾರೆ. ಪೆರಂಪಳ್ಳಿ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಸಮೀಪ ಸ್ವರ್ಣಾನದೀ ತೀರದಲ್ಲಿ ನೂತನ ಕೃಷ್ಣಾಂಗಾರಕ ಸ್ನಾನಘಟ್ಟ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿದರು. ಪವಿತ್ರವಾದ ಈ ಸ್ಥಳಕ್ಕೆ ವರ್ಷಂಪ್ರತಿ ತೀರ್ಥ […]

ನಿಂಬೂ ಜ್ಯೂಸ್ ಕುಡಿಯೋದ್ರಿಂದ ಏನೆನೆಲ್ಲಾ ಲಾಭವಿದೆ?ಒಮ್ಮೆ ಓದಿದ್ರೆ ಇಂದೇ ಜ್ಯೂಸ್ ಕುಡಿತೀರಿ

ನಿಂಬೆ ಹಣ್ಣಿನ ರಸ ಬೇಸಗೆಯಲ್ಲಿ ನೀವೆಲ್ಲಾ ಕುಡಿಯುವ ಹಾಟ್ ಫೆವರೇಟ್ ಜ್ಯೂಸ್ ಗಳಲ್ಲೊಂದು.ಮನೆಲೇ ಸುಲಭವಾಗಿ ಮಾಡಿ ಕುಡಿಯಬಹುದಾದ ನಿಂಬೆ ಹಣ್ಣಿನ ಜ್ಯೂಸ್ ಗೆ ಪುದೀನಾ, ಮಸಾಲ, ಕೋಕಂ, ಸೋಡಾ ಮೊದಲಾದವುಗಳನ್ನು ಬೆರೆಸಿ ಕುಡಿಯೋದು ಬಹುತೇಕ ಮಂದಿಯ ಕ್ರಮ. ಇಲ್ಲಿ ನಿಂಬು ಜ್ಯೂಸ್ ಕುಡಿಯೋದ್ರಿಂದ ಆಗುವ ಆರೋಗ್ಯ ಲಾಭಗಳು ಯಾವುದು ಅಂತ ನಾವ್ ಹೇಳ್ತೇವೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅತ್ಯಧಿಕವಾಗಿದ್ದು ಇದು ನಮ್ಮ ದೇಹದ ತೂಕವನ್ನು ಹಟೋಟಿಯಲ್ಲಿಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತದೆ ದೇಹದ ತೂಕ ಕಡಿಮೆ ಮಾಡುವಲ್ಲಿಯೂ […]

ರಾಜೀವನಗರ ಕ್ರಿಕೆಟರ್ಸ್: ಎರಡು ದಿನಗಳ ‘ಆರ್ ಸಿ ಟ್ರೋಫಿ-2021’ ಚಾಲನೆ

ಮಣಿಪಾಲ: ರಾಜೀವನಗರ ಕ್ರಿಕೆಟರ್ಸ್ ರಾಜೀವನಗರ ಸಂಸ್ಥೆಯ ಆಶ್ರಯದಲ್ಲಿ ಅಂಗವಿಕಲ ಹಾಗೂ ಬಡಜನರ ಸಹಾಯಾರ್ಥವಾಗಿ ರಾಜೀವನಗರ ಆರ್ ಸಿ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ 9ನೇ ವರ್ಷದ ಕ್ರಿಕೆಟ್ ಪಂದ್ಯಕೂಟ ‘ಆರ್ ಸಿ ಟ್ರೋಫಿ-2021’ ಶನಿವಾರ ಉದ್ಘಾಟನೆಗೊಂಡಿತು. ಟೂರ್ನಿಗೆ ಚಾಲನೆ ನೀಡಿ 80ಬಡಗಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶಾಂತಾರಾಮ ಶೆಟ್ಟಿ ಮಾತನಾಡಿ, ಆರ್ ಸಿ ತಂಡ ಕ್ರೀಡಾಕೂಟ ಆಯೋಜನೆಗೆ ಮಾತ್ರ ಸೀಮಿತವಾಗಿಲ್ಲ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ […]