ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆ
ಕೋಲ್ಕತ್ತ: ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಭಾನುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ರ್‍ಯಾಲಿಯಲ್ಲಿ ಮಿಥುನ್ ಚಕ್ರವರ್ತಿ ಭಾಗವಹಿಸಲಿದ್ದಾರೆ. ಕೋಲ್ಕತ್ತದ ಮೈದಾನ್ ಪ್ರದೇಶದ ಬ್ರಿಗೇಡ್ ಪರೇಡ್ ಗ್ರೌಂಡ್ಸ್‌ನಲ್ಲಿ ಮೋದಿ ರ‍್ಯಾಲಿ ನಡೆಯಲಿದ್ದು, 10 ಲಕ್ಷ ಜನ ಸೇರಲಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ತಿಳಿಸಿದ್ದಾರೆ.
ಉಡುಪಿ: ಪೇಜಾವರ ಮಠದಲ್ಲಿ ಅಗ್ನಿ ಅವಘಡ
ಉಡುಪಿ: ಇಲ್ಲಿನ ಪೇಜಾವರ ಮಠದಲ್ಲಿ ಎಸಿಯ ವಿದ್ಯುತ್ ಶಾಕ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಹಾನಿ ಆಗಿಲ್ಲ ಎಂದು ತಿಳಿದುಬಂದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಉಡುಪಿ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಠದಲ್ಲಿ ಸ್ವಾಮಿಜಿಗಳು ಇರಲಿಲ್ಲ. ಅಲ್ಲದೆ, ಅವಘಡದಿಂದ ಮಠದ ಪೀಠೋಪಕರಣಗಳಿಗೆ ಹಾನಿಯಾಗಿಲ್ಲ ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.
ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದೊಳಗೆ ಯುವಕ ನೇಣಿಗೆ ಶರಣು
ಕೋಟ: ದೇವಸ್ಥಾನದೊಳಗೆ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟದ ತೆಕ್ಕಟ್ಟೆ ಮಹಾಲಿಂಗೇಶ್ವರ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತನನ್ನು ತೆಕ್ಕಟ್ಟೆ ಬಾರಾಳಿಬೆಟ್ಟು ನಿವಾಸಿ ಚಂದ್ರ ಪೂಜಾರಿ (35 ) ಎಂದು ಗುರುತಿಸಲಾಗಿದೆ. ಈತ ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ದೇಗುಲದ ಕೆಲಸ ಕಾರ್ಯಗಳಿಗೆ ನೆರವಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಚಂದ್ರ ಪೂಜಾರಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಚಂದ್ರ ಪೂಜಾರಿ ದೇವಸ್ಥಾನದ ಬಾವಿಯ ಹಗ್ಗವನ್ನು ಗುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ದೇಗುಲಕ್ಕೆ ಕಸ […]
ಬ್ರಹ್ಮಾವರ: ನೂತನ ‘ಸತ್ಯನಾಥ ಸ್ಟೋರ‍್ಸ್’ ಬೃಹತ್ ವಸ್ತ್ರಮಳಿಗೆ ಶುಭಾರಂಭ
ಬ್ರಹ್ಮಾವರ: ಕರಾವಳಿ ಹಾಗೂ ಮಲೆನಾಡಿನಾದ್ಯಂತ ಸಾಕಷ್ಟು ಜನಮನ್ನಣೆ ಗಳಿಸಿರುವ ‘ಸತ್ಯನಾಥ ಸ್ಟೋರ‍್ಸ್’ ಬೃಹತ್ ವಸ್ತ್ರಮಳಿಗೆ ಬ್ರಹ್ಮಾವರ ಮಾರಿಗುಡಿ ರಸ್ತೆ ಹಳೆ ಪೊಲೀಸ್ ಸ್ಟೇಶನ್ ಮುಂಭಾಗ ವಿಶಾಲವಾದ ಪುರುಷೋತ್ತಮ ಮಂದಿರ ನೂತನ ಕಟ್ಟಡದಲ್ಲಿ ಭಾನುವಾರ ಶುಭಾರಂಭಗೊಂಡಿತು. ಸಾಬರಕಟ್ಟೆ ಗರಿಕೆಮಠ ಶ್ರೀಅರ್ಕ ಮಹಾಗಣಪತಿ ದೇವಸ್ಥಾನದ ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸತ್ಯನಾಥ ಸ್ಟೋರ್ಸ್ ಎನ್ನುವುದು ಕೇವಲ ಸಂಸ್ಥೆಯಲ್ಲ, ಅದೊಂದು ಆಲೋಚನೆ. ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಸತ್ಯನಾಥ ಪುರುಷೋತ್ತಮ ಪೈಗಳ ಆಲೋಚನೆ, ಅವರ […]