ಬ್ರಹ್ಮಾವರ: ನೂತನ ‘ಸತ್ಯನಾಥ ಸ್ಟೋರ‍್ಸ್’ ಬೃಹತ್ ವಸ್ತ್ರಮಳಿಗೆ ಶುಭಾರಂಭ

ಬ್ರಹ್ಮಾವರ: ಕರಾವಳಿ ಹಾಗೂ ಮಲೆನಾಡಿನಾದ್ಯಂತ ಸಾಕಷ್ಟು ಜನಮನ್ನಣೆ ಗಳಿಸಿರುವ ‘ಸತ್ಯನಾಥ ಸ್ಟೋರ‍್ಸ್’ ಬೃಹತ್ ವಸ್ತ್ರಮಳಿಗೆ ಬ್ರಹ್ಮಾವರ ಮಾರಿಗುಡಿ ರಸ್ತೆ ಹಳೆ ಪೊಲೀಸ್ ಸ್ಟೇಶನ್ ಮುಂಭಾಗ ವಿಶಾಲವಾದ ಪುರುಷೋತ್ತಮ ಮಂದಿರ ನೂತನ ಕಟ್ಟಡದಲ್ಲಿ ಭಾನುವಾರ ಶುಭಾರಂಭಗೊಂಡಿತು.

ಸಾಬರಕಟ್ಟೆ ಗರಿಕೆಮಠ ಶ್ರೀಅರ್ಕ ಮಹಾಗಣಪತಿ ದೇವಸ್ಥಾನದ ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸತ್ಯನಾಥ ಸ್ಟೋರ್ಸ್ ಎನ್ನುವುದು ಕೇವಲ ಸಂಸ್ಥೆಯಲ್ಲ, ಅದೊಂದು ಆಲೋಚನೆ. ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಸತ್ಯನಾಥ ಪುರುಷೋತ್ತಮ ಪೈಗಳ ಆಲೋಚನೆ, ಅವರ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತಾಗಲಿ ಶುಭಹಾರೈಸಿದರು.

ಒಂದು ಗಿಡ ಮರವಾಗಿ ಬೆಳೆಯಬೇಕಾದರೆ ಸಾಕಷ್ಟು ಸಮಯಬೇಕು. ಒಂದು ನಿಮಿಷದಲ್ಲಿ ಯಾವುದೇ ಒಂದು ಗಿಡ ಮರ ಆಗಲು ಸಾಧ್ಯವಿಲ್ಲ. ಬೀಜ ಬಿತ್ತಿ, ಅದು ಗಿಡವಾಗಿ ಬೆಳೆದು ಮರ ಆಗಬೇಕು. ಹಾಗೆ, ಸತ್ಯನಾಥ ಸ್ಟೋರ್ಸ್ ಸಂಸ್ಥೆ ಹಿರಿಯರು ಕಂಡಂತಹ ಕನಸು. ಸಣ್ಣದಾಗಿ ಆರಂಭಿಸಿದ ಸಂಸ್ಥೆ ಇಂದು ಹೆಮ್ಮಾರವಾಗಿ ಬೆಳೆದು ನಿಂತಿದೆ. ಸತ್ಯನಾಥರ ಕುಟುಂಬದ ಹಿರಿಯರ ಕನಸು, ಸತ್ಯನಾಥರಿಗೆ ದೇವರಲ್ಲಿ ಇರುವ ಭಕ್ತಿ ಹಾಗೂ ಶ್ರದ್ಧೆಯಿಂದ ಸಂಸ್ಥೆ ಎತ್ತರಕ್ಕೆ ಬೆಳೆಯುವಂತಾಗಿದೆ ಎಂದರು.

ಸಣ್ಣ ಪ್ರಮಾಣದ ಲಾಭಾಂಶ ಸಿಕ್ಕರೂ ಸಾಕು. ಆದರೆ ವ್ಯಾಪಾರ, ವ್ಯವಹಾರದಲ್ಲಿ ಯಾವುದೇ ಮೋಸಕ್ಕೆ ಅವಕಾಶ ನೀಡಬಾರದು ಎಂಬುವುದು ಸತ್ಯನಾಥರ ವ್ಯವಹಾರಿಕ ಧರ್ಮ. ಸಂಸ್ಥೆಗೆ ಬರುವ ಗ್ರಾಹಕರಿಗೆ ಆಗುವ ಆತ್ಮತೃಪ್ತಿ. ಕೆಲಸಗಾರರಿಗೆ ಆಗುವ ಸಂತೋಷ. ಇದರೊಂದಿಗೆ ದೇವತಾನುಗ್ರಹದ ಮೂಲಕ ತಮ್ಮ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂಬುವುದೇ ಸತ್ಯನಾಥರ ಆಲೋಚನೆ. ಈ ಆಲೋಚನೆಯೇ ಅವರನ್ನು ಇಷ್ಟು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುದಿದೆ ಎಂದು ಹೇಳಿದರು.

ಸತ್ಯನಾಥ ಅವರು ತಮ್ಮ ಸಂಸ್ಥೆಯಲ್ಲಿ ದುಡಿಯುವ ಕೆಲಸಗಾರರನ್ನು ಕೆಲಸದವರಂತೆ ನೋಡಿಲ್ಲ, ಸ್ವತಃ ತಮ್ಮ ಮನೆಯ ಸದಸ್ಯರಂತೆ ನೋಡಿಕೊಂಡಿದ್ದಾರೆ. ಈ ಸಂಪ್ರದಾಯ ಹಿಂದಿನಿಂದ ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ. ಹಾಗೆ ಸಂಸ್ಥೆಗೆ ಬರುವ ಗ್ರಾಹಕರಿಗೆ ಸಂತೃಪ್ತಿ ಆಗುವಂತಹ ಸೇವೆ ದೊರಕುವಂತಾಗಲಿ ವೇದಮೂರ್ತಿಗಳು ಶುಭಹಾರೈಸಿದರು.

ಸತ್ಯನಾಥ ಸ್ಟೋರ್ಸ್ ಸಂಸ್ಥೆಯ ಮಾಲೀಕ ಸತ್ಯನಾಥ ಪುರುಷೋತ್ತಮ ಪೈ ಮಾತನಾಡಿ, ದೇವರ ಅನುಗ್ರಹ ಜತೆಗೆ ಕರಾವಳಿ ಹಾಗೂ ಮಲೆನಾಡಿನ ಜನತೆ ಸಂಸ್ಥೆಯ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸದಿಂದ ಏಳು ದಶಕಗಳಿಂದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಜನರ ಈ ಪ್ರೀತಿ, ವಿಶ್ವಾಸ ಸಂಸ್ಥೆಯ ಮೇಲೆ ಸದಾ ಇರಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ಸುಪ್ರಭ ಸತ್ಯನಾಥ ಪೈ, ಗಿರಿಧರ ಸತ್ಯನಾಥ ಪೈ, ಗೌತಮಿ ಗಿರಿಧರ ಪೈ, ಧಾತ್ರಿ ಪೈ, ರೋಹಿತ್ ನಾಯಕ್, ಶ್ರೀದೇವಿ ರೋಹಿತ್ ನಾಯಕ್, ಅಮೂಲ್ಯ ನಾಯಕ್, ಕುಂಬ್ಳೆವೆಂಕಟೇಶ್ ಭಟ್, ವಿದ್ಯಾ ವಿ.ಭಟ್, ಬಾಲಕೃಷ್ಣ ನಾಯಕ್, ರಾಧಿಕಾ
ನಾಯಕ್, ಬಂಧುಗಳು, ಸಿಬ್ಬಂದಿ
ವರ್ಗದವರು ಉಪಸ್ಥಿತರಿದ್ದರು.

ಮಳಿಗೆಯ ವಿಶೇಷತೆ:
ಇಪ್ಪತ್ತಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಜವಳಿ ಅಪಾರ ಸಂಗ್ರಹದ ಪರಿಪೂರ್ಣ ಮದುವೆ ಜವಳಿ ಮಳಿಗೆ ಇದಾಗಿದೆ. ಸಂಸ್ಥೆಯು ತೀರ್ಥಹಳ್ಳಿ, ಕೊಪ್ಪದಲ್ಲಿ ಶಾಖೆಯನ್ನು ಹೊಂದಿದ್ದು, ಪರಿಪೂರ್ಣ ಮದುವೆ ಜವಳಿ ಸಹಿತ ಬನಾರಸ್, ಧರ್ಮಾವರಂ, ಕಾಟನ್ ಸಾರಿ, ಕಾಟನ್ ಸಿಲ್ಕ್, ಕೋಲ್ಕತ್ತಾ ಕಾಟನ್, ಕಾಂಜೀವರಂ,ಬಾಂಗ್ಲಾ ಕಾಟನ್, ಫ್ಯಾನ್ಸಿ ಡಿಸೈನರ್ ಸಾರೀಸ್, ಬ್ರೈಡಲ್ ಲೆಹಂಗಾ, ಲಾಂಗ್‌ಟಾಪ್, ಚೂಡಿದಾರ, ಕುರ್ತೀಸ್, ಮಕ್ಕಳ ಉಡುಪುಗಳು, ಮೆನ್ಸ್‌ವೇರ್, ಹ್ಯಾಂಡ್‌ಲೂಮ್ಸ್, ಬ್ರ್ಯಾಂಡೆಡ್ ಡಿಸೈನ್ ಸಾರಿ ಸಹಿತ ವಿವಿಧ ಕಂಪನಿಗಳ ಬಟ್ಟೆಗಳು ಅಪಾರ ಶ್ರೇಣಿ, ನವನವೀನ ವಿನ್ಯಾಸದೊಂದಿಗೆ ಅತ್ಯಾಕರ್ಷಕ ದರದಲ್ಲಿ ಲಭ್ಯವಿದೆ.

ಕಟ್ಟಡದ ವೈಶಿಷ್ಟ್ಯತೆ:
ಬ್ರಹ್ಮಾವರದ ಈ ನೂತನ ಮಳಿಗೆ ವ್ಯವಸ್ಥಿತ ಮತ್ತು ವಿಶಾಲವಾಗಿ ನಿರ್ಮಿಸಲಾಗಿದೆ. 30,000 ಚದರಡಿ ವಿಸ್ತೀರ್ಣದಲ್ಲಿ ನಾಲ್ಕು ಅಂತಸ್ತುಗಳ ಹವಾ ನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. 300ಕ್ಕೂ ಅಧಿಕ ಎಲ್ಲಾ ರೀತಿಯ ವಾಹನ ನಿಲುಗಡೆಗೆ ವ್ಯವಸ್ಥೆ ಜತೆಗೆ ಗ್ರಾಹಕರಿಗೆ ಉಚಿತ ವೈಫೈ ಸೌಲಭ್ಯವನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಫುಡ್‌ಕೋರ್ಟ್ ವ್ಯವಸ್ಥೆಯನ್ನು ರೂಪಿಸಲಾಗಿದೆ.