ತೈಲ ದರದಲ್ಲಿ ಮತ್ತೆ ಹೆಚ್ಚಳ: ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ.!

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಿದ್ದು, ನಿನ್ನೆಗಿಂತ ಇಂದು ಪೆಟ್ರೋಲ್ ಕೊಂಚ ದುಬಾರಿಯಾಗಿದೆ.

ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರವೆಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 86.93 ರೂ. ಇದೆ. ಮುಂಬೈನಲ್ಲಿ 93.49 ರೂ, ಜೈಪುರದಲ್ಲಿ 93.75 ರೂ, ಬೆಂಗಳೂರಿನಲ್ಲಿ 89.85 ರೂ, ಹೈದರಾಬಾದ್​ನಲ್ಲಿ 90.42 ರೂ, ತಿರುವನಂತಪುರದಲ್ಲಿ 88.66 ರೂ, ಚೆನ್ನೈನಲ್ಲಿ 89.46 ರೂ, ಕೊಲ್ಕತ್ತಾದಲ್ಲಿ 88.30 ರೂ. ಇದೆ.

ಭಾರತದಲ್ಲಿ ಡೀಸೆಲ್ ಬೆಲೆಯಲ್ಲೂ ನಿನ್ನೆಯ ದರವೇ ಮುಂದುವರೆದಿದೆ. ಕೆಲವು ನಗರಗಳಲ್ಲಿ ಮಾತ್ರ ಡೀಸೆಲ್ ಬೆಲೆ ಇಂದು ಕೊಂಚ ಹೆಚ್ಚಾಗಿದೆ. ಚೆನ್ನೈ, ಮುಂಬೈ, ಹೈದರಾಬಾದ್, ಭುವನೇಶ್ವರದಲ್ಲಿ 1 ಲೀಟರ್ ಡೀಸೆಲ್ ಬೆಲೆ 84 ರೂ. ದಾಟಿದೆ.
ವಿವಿಧ ನಗರಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ.

ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್​ಗೆ 77.13 ರೂ. ಇದೆ. ಚೆನ್ನೈನಲ್ಲಿ 82.33 ರೂ, ಮುಂಬೈನಲ್ಲಿ 83.99 ರೂ, ಬೆಂಗಳೂರಿನಲ್ಲಿ 81.76 ರೂ, ಹೈದರಾಬಾದ್​ನಲ್ಲಿ 84.14 ರೂ. ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಏರಿಕೆ ಆಗದಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆಗುತ್ತಿದ್ದರೂ, ಕೊರೊನಾ ಕಾರಣಗಳಿಂದ ಜನಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಲೆಕ್ಕಿಸದ ಸರ್ಕಾರಿ ಒಡೆತನದ ತೈಲ ಕಂಪನಿಗಳು ಸತತವಾಗಿ ಬೆಲೆ ಏರಿಕೆಯಲ್ಲಿ ನಿರತವಾಗಿವೆ.