ಮಣಿಪಾಲ: ‘ಸಲಾಂ ಕಲಾಂ’ ಕಾರ್ಯಕ್ರಮ; ಜಯಪ್ರಕಾಶ್ ರಾವ್ ಕೆ. ಅವರ ‘ಹಮಾರಾ PRO’ ಪುಸ್ತಕ ಬಿಡುಗಡೆ
ಮಣಿಪಾಲ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಡಾ. ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ಮಣಿಪಾಲ ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಂದು ಮಣಿಪಾಲದ ನಿರ್ಮಿತಿ ಕೇಂದ್ರದಲ್ಲಿ ಆಯೋಜಿಸಿದ್ದ ‘ಸಲಾಂ ಕಲಾಂ’ (ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ನೆನಪು) ಕಾರ್ಯಕ್ರಮದಲ್ಲಿ ಡಾ. ಅಬ್ದುಲ್ ಕಲಾಂ ಅವರ ಶಿಷ್ಟಾಚಾರ ಹಾಗೂ ಸಮನ್ವಯ ಅಧಿಕಾರಿಯಾಗಿದ್ದ ಜಯಪ್ರಕಾಶ್ ರಾವ್ ಕೆ. ಅವರ ‘ಹಮಾರಾ PRO’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಉಡುಪಿ ಸುಹಾಸಂ ಅಧ್ಯಕ್ಷ ಶಾಂತರಾಜ್ ಐತಾಳ್ […]
ಫೆ.1ರಿಂದ 9ರಿಂದ 12ನೇ ತರಗತಿಗೆ ಪೂರ್ಣಾವಧಿ ಬೋಧನೆ: ಸುರೇಶ್ ಕುಮಾರ್
ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದ 9 ಮತ್ತು 11ನೇ ತರಗತಿಗಳನ್ನು ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದ ಬೋಧನೆ ಆರಂಭಿಸಲಾಗುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬ ವಿದ್ಯಾರ್ಥಿ ಮತ್ತು ಪೋಷಕ ವಲಯದ ಬೇಡಿಕೆಯ ಹಿನ್ನೆಲೆಯಲ್ಲಿ ಗುರುವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ […]
ಕೊಲ್ಲೂರು ಬೀನಾ ರೆಸಿಡೆನ್ಸಿ, ಅಶ್ವಥಿ ಹೋಟೆಲ್ ಮಾಲೀಕ ಧರ್ಮಬೀರು ಜಯಕೃಷ್ಣನ್ ನಿಧನ
ಅಸ್ಸಾಂ: ಕೇರಳದ ಪ್ರಸಿದ್ಧ ಉದ್ಯಮಿ, ಕೊಲ್ಲೂರಿನ ಬೀನಾ ರೆಸಿಡೆನ್ಸಿ ಮತ್ತು ಅಶ್ವಥಿ ಹೋಟೆಲ್ ಗಳ ಮಾಲೀಕ ಧರ್ಮಬೀರು ಜಯಕೃಷ್ಣನ್ (74 ) ಇಂದು ಅಸ್ಸಾಂನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮಿತ್ರರೊಂದಿಗೆ ಅಸ್ಸಾಂನ ವಿವಿಧ ತೀರ್ಥಕ್ಷೇತ್ರಗಳಿಗೆ ಪ್ರವಾಸ ತೆರಳಿದ್ದರು. ಅವರು ಇಂದು ಕೇರಳಕ್ಕೆ ವಾಪಸಾಗುವವರಿದ್ದರು ಎಂದು ತಿಳಿದುಬಂದಿದೆ. ಇವರು ಕೇರಳದ ಮಾಹೆಯವರಾಗಿದ್ದು, ಪ್ರಸಿದ್ಧ ‘ಕಾಕಟ್ಟೆ’ ಸಮೂಹ ಉದ್ಯಮಗಳ ಮಾಲೀಕರಾಗಿದ್ದಾರೆ. ಕೊಲ್ಲೂರು ಉಡುಪಿ ಸೇರಿದಂತೆ ದಕ್ಷಿಣ ಭಾರತದ ಅನೇಕ ದೇವಾಲಯಗಳಲ್ಲಿ ನಡೆಯುವ ಅನ್ನಾರಾಧನೆಗೆ ಹಾಗೂ ಕೇರಳ ತಮಿಳುನಾಡು ಕರ್ನಾಟಕಗಳಲ್ಲಿ ನಡೆಯುವ […]
ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ
ಬೆಂಗಳೂರು: 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಜೂನ್ 14ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿವೆ. ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವೇಳಾಪಟ್ಟಿ ಘೋಷಣೆ ಮಾಡಿದರು. ಜೂನ್ 14ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಜೂ.14ರಿಂದ ಜೂ.25ರವರೆಗೆ ಪರೀಕ್ಷೆಗಳು ನಡೆಯಲಿದೆ ಎಂದು ತಿಳಿಸಿದರು. ಜೂನ್ 14ರಂದು ಪ್ರಥಮ ಭಾಷೆ, ಜೂ.16 ಗಣಿತ, ಸಮಾಜ ಶಾಸ್ತ್ರ, ಜೂ.18 ದ್ವಿತೀಯ ಭಾಷೆ, ಜೂ. 21 ವಿಜ್ಞಾನ, ಜೂ.23 ತೃತೀಯ ಭಾಷೆ, ಜೂ.25 ಸಮಾಜ ವಿಜ್ಞಾನ […]
ಕೊಡವೂರು: ಶಂಕರನಾರಾಯಣ ದೇವರಿಗೆ ಸಾನಿಧ್ಯ ಕಲಶಾಭಿಷೇಕ
ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇಗುಲದಲ್ಲಿ ಇಂದು ಶಂಕರನಾರಾಯಣ ದೇವರಿಗೆ ಸಾನಿಧ್ಯ ಕಲಶಾಭಿಷೇಕ ನೆರವೇರಿಸಲಾಯಿತು. ಪುತ್ತೂರು ಹಯವದನ ತಂತ್ರಿಗಳ ನೇತ್ರತ್ವದಲ್ಲಿ ಋತ್ವಿಜರಾದ ಪಂಜ ಭಾಸ್ಕರ ಭಟ್, ಮಧುಸೂದನ ಭಟ್, ಪಾಡಿಗಾರು ಶ್ರೀನಿವಾಸ ತಂತ್ರಿ, ವಾದಿರಾಜ ತಂತ್ರಿ ಅವರ ಸಹಕಾರದೊಂದಿಗೆ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸದಸ್ಯರಾದ ಜನಾರ್ದನ್ ಕೊಡವೂರು, ರಾಜ ಎ ಶೇರಿಗಾರ್, ಭಾಸ್ಕರ ಬಾಚನಬೈಲು, ಸುಧಾ ಎನ್ ಶೆಟ್ಟಿ, ಬಾಬ ,ಲಕ್ಷ್ಮೀನಾರಾಯಣ ಭಟ್ , ಶ್ಯಾಮ ಸುಂದರ […]