ಮಂಗಳೂರು: ಧರೆಗುರುಳಿದ ಅಶ್ವಥ ಮರ: ವಾಹನಗಳು ಜಖಂ
ಮಂಗಳೂರು: ಮಂಗಳೂರಿನ ರಥಬೀದಿಯ ವೆಂಕಟರಮಣ ದೇವಾಲಯದ ಬಳಿಯ ಬೃಹತ್ ಅಶ್ವಥ ಮರವೊಂದು ಇಂದು ಬೆಳಿಗ್ಗೆ ಧರೆಗುರುಳಿಬಿದ್ದ ಪರಿಣಾಮ ಜೆಸಿಬಿ, ಕಾರು ಹಾಗೂ ನೀರಿನ ಟ್ಯಾಂಕರ್ ಜಖಂಗೊಂಡಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸುಮಾರು ಇನ್ನೂರು ವರ್ಷಕ್ಕಿಂತಲೂ ಹಳೆಯ ಅಶ್ವತ್ಥ ಮರ ಇದಾಗಿದ್ದು, ಬುಡದಿಂದ ಮುರಿದು ಬಿದ್ದಿದೆ. ಮಂಗಳೂರಿನ ರಥಬೀದಿಯ ಪ್ರಮುಖ ಆಕರ್ಷಣೆ ಹಾಗೂ ಜನರ ಪೂಜ್ಯ ಭಾವನೆಯ ಕೇಂದ್ರವಾಗಿತ್ತು.
ಉಡುಪಿ: ಸಹಕಾರಿ ಭಾರತಿಯ ಸ್ಥಾಪನಾ ದಿನಾಚರಣೆ
ಉಡುಪಿ: ಸಹಕಾರ ಭಾರತಿ ಉಡುಪಿ ತಾಲೂಕು ಇದರ ವತಿಯಿಂದ ಶನಿವಾರ ಸಹಕಾರ ಭಾರತಿಯ ಸ್ಥಾಪನಾ ದಿನಾಚರಣೆ ನಡೆಯಿತು. ಸಂಸ್ಥೆಯ ಅಧ್ಯಕ್ಷ ಆತ್ರಾಡಿ ದಿನೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಮಾತನಾಡಿ, ಸಹಕಾರ ಭಾರತಿಯ ಆರಂಭಿಕ ಹಂತದಲ್ಲಿನ ಘಟನೆಗಳನ್ನು ಹಾಗೂ ಸಂಘಟನಾ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದರು. ದಿನ ವಿಶೇಷವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನ ಮತ್ತು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧವಾಗಿ ಹೋರಾಡಿದ ವೀರ ಸಾವರ್ಕರ್ ರವರ ದೇಶ ಭಕ್ತಿಯ […]