ಯಾರು ಏನಂದ್ರೂ ಡೋಂಟ್ ವರಿ: ಇಲ್ಲಿದೆ ಸಿಂಪಲ್ಲಾಗಿ ಬದುಕುವ ದಾರಿ

ಯಾರು ಏನನ್ನುತ್ತಾರೋ? ನಾನು ಹೀಗೆ ಮಾಡಿದರೆ ಎಲ್ಲರ ಮುಂದೆ ಏನು ಅನ್ನಿಸಿಕೊಳ್ಳಬೇಕೋ ಎಂದೆಲ್ಲಾ ಯೋಚನೆ ಮಾಡುತ್ತಲೇ ಬದುಕಿನ ಅರ್ಧ ಆಯುಷ್ಯ ಕಳೆದುಬಿಡುತ್ತೇವೆ. ಅವರಿವರು ಏನು ಅಂದುಕೊಳ್ಳುತ್ತಾರೆಂದು ನಮಗೆ ಬೇಕಾದ ಹಾಗೇ ನಾವು ಕೊನೆಗೂ ಬದುಕುವುದೇ ಇಲ್ಲ.ಯಾರು ಏನೆಂದುಕೊಳ್ಳುತ್ತಾರೆ ಎನ್ನುವುದು ಮುಖ್ಯವಲ್ಲ.ನಾವು ಹೇಗೆ ಬದುಕಬೇಕು ಅಂದುಕೊಂಡಿದ್ದೇವೋ ಅದರಂತೆ ಬದುಕುವುದೇ ಮುಖ್ಯ. ನಾವು ಹೇಗೆ ಬದುಕಬಹುದು ಎನ್ನುವುದಕ್ಕೆ ಇಲ್ಲಿ ಕೆಲವೊಂದು ಸೂತ್ರಗಳನ್ನು ನೀಡಿದ್ದೇವೆ. ನೀವಿದ್ದನ್ನು ಪಾಲಿಸಿದರೆ ಚೆಂದದ ಬದುಕು ನಿಮ್ಮದಾಗಬಹುದು.

•ನಿಮ್ಮ ಬದುಕು ಹೀಗೆ ಇರಬೇಕು ಎಂದು ನಿರ್ಧರಿಸುವುದು ನೀವೇ. ನಿಮಗಿಷ್ಟವಿದ್ದಂತೆಯೇ ಬದುಕಿ.ನೀವು ಬದುಕುವ ರೀತಿ ನಿಮಗೆ ಸರಿ ಅನ್ನಿಸಿದರೆ ಸಾಕು.

•   ಇತರರ ವಿಷಯಗಳಿಗೆ ಅತಿಯಾಗಿ ಮೂಗುತೂರಿಸದೇ ಸಮಾಧಾ‌ನದಿಂದ ಬದುಕಬಹುದು.

  • ನಮ್ಮ ಬಗ್ಗೆ ಇತರರು ಏನೆಂದುಕೊಳ್ಳುತ್ತಾರೋ ಎಂಬ ಭಯರಹಿತರಾಗಿ ನೆಮ್ಮದಿಯಿಂದ ಬದುಕಬಹುದು.
  • ಎಂತಹುದೇ ಸಂದರ್ಭ ಬಂದರೂ‌ ನಮ್ಮತನವನ್ನು ಬಿಟ್ಟುಕೊಡದೇ ಸ್ವಾಭಿಮಾನದಿಂದ ಬದುಕಬಹುದು.

  • ನಮಗೆ ಸರಿ ಎನಿಸಿದ ಒಳ್ಳೆಯ ದಾರಿಯಲ್ಲಿ, ಯಾರ ಮಾತುಗಳಿಗೂ ಕಿವಿಗೊಡದೇ ಧೈರ್ಯದಿಂದ ಬದುಕಬಹುದು.
  • ನಕಾರಾತ್ಮಕ ಯೋಚನೆಗಳನ್ನು ಬದಿಗಿಟ್ಟು ಸಕಾರಾತ್ಮಕ ಚಿಂತನೆಗಳನ್ನೇ ತುಂಬಿಕೊಂಡು ಸುಖದಿಂದ ಬದುಕಬಹುದು.
  • ಅಂದುಕೊಂಡಂತಹಾ ಕೆಲಸವನ್ನು/ಇತರರು ನಮಗೆ ವಹಿಸಿದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸುತ್ತಾ ಜವಾಬ್ದಾರಿಯುತವಾಗಿ ಬದುಕಬಹುದು.                                                                                                                
  • ನಿಮ್ಮ ಗುರಿಯನ್ನು ಸ್ಪಷ್ಟ ಮಾಡಿಕೊಂಡು, ಅದರ ಸಾಧನೆಗೆ ಶ್ರಮಿಸುತ್ತಾ ಯಾರಿಗೂ ಹೆದರದೇ ಬದುಕಬಹುದು
  • ಬೇಸರವಾದಾಗ, ದುಃಖ ಬಂದಾಗ ತಡೆಹಿಡಿಯದೇ ಅಳುವಿನ ರೂಪದಲ್ಲಿ ಹೊರಹಾಕಿ ನಿರುಮ್ಮಳರಾಗಿ ಬದುಕಬಹುದು

  • ನಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾ, ದ್ವೇಷಿಸುವವರನ್ನೂ ಪ್ರೀತಿಸುತ್ತಾ ತೃಪ್ತಿಯಿಂದ ಬದುಕಬಹುದು
  • ಸಾಧ್ಯವಾದಷ್ಟು ಸಹಾಯ ಮನೋವೃತ್ತಿ ಬೆಳೆಸಿಕೊಳ್ಳುತ್ತಾ ಖುಷಿಯಿಂದ ಬದುಕಬಹುದು

• ಯಾರು ನಿಮ್ಮ ಬಗ್ಗೆ ಹೇಳಿದರೂ ಅದು ಅವರ ಅಭಿಪ್ರಾಯ, ಅನುಭವವೇ ಹೊರತು ನಿಮ್ಮ ಅಭಿಪ್ರಾಯ, ಅನುಭವವಾಗಿರುವುದಿಲ್ಲ. ನಿಮ್ಮ ಅಭಿಪ್ರಾಯ, ಅನುಭವ ಬೇರೆಯೇ ಆಗಿರುತ್ತದೆ. ಅದನ್ನು ಗೌರವಿಸಿ ಹಾಗೇ ಬದುಕಿ.