ಹೆಬ್ರಿ: ಉಪನ್ಯಾಸಕ ನೇಣಿಗೆ ಶರಣು
ಹೆಬ್ರಿ: ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿಯ ಬಡಗುಡ್ಡೆ ಎಂಬಲ್ಲಿ ನಡೆದಿದೆ. ಮೂಡುಬಿದಿರೆಯ ಖಾಸಗಿ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡವರು. ವೆಂಕಟೇಶ್ ಪತ್ನಿಯೊಂದಿಗೆ ಹೆಬ್ರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪತ್ನಿ ಕೂಡ ಹೆಬ್ರಿಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು. ಇವರಿಬ್ಬರು ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಈ ವಿಷಯ ಇಬ್ಬರ ಮನೆಯವರಿಗೂ ತಿಳಿದಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಲಾಕ್ ಡೌನ್ ನಿಂದಾಗಿ ಕೆಲಸ ವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು […]
ಮಣಿಪಾಲ ಮಹಿಳಾ ಸಮಾಜ ಸಂಸ್ಥೆಯಿಂದ ಇಬ್ಬರು ಮಹಿಳೆಯರಿಗೆ ಹೊಲಿಗೆಯಂತ್ರ ಹಸ್ತಾಂತರ
ಉಡುಪಿ: ಮಣಿಪಾಲ ಮಹಿಳಾ ಸಮಾಜ ಸಂಸ್ಥೆಯ ವತಿಯಿಂದ ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಉಡುಪಿ ಮೂಡುಬೆಟ್ಟುವಿನ ವಿಜಯಲಕ್ಷ್ಮಿ ಹಾಗೂ ಎರ್ಮಾಲ್ ನಿವಾಸಿ ಪೂಜಾ ಎಸ್. ಅವರಿಗೆ ಹೊಲಿಗೆ ಯಂತ್ರವನ್ನು ಹಸ್ತಾಂತರಿಸಲಾಯಿತು. ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ದೀಪಾ ಭಂಡಾರಿ ಹಾಗೂ ಕೋಶಾಧಿಕಾರಿ ಪೂರ್ಣಿಮಾ ಶೆಟ್ಟಿ ಅವರು ಉಡುಪಿ ರಾಜ್ ಟವರ್ ನಲ್ಲಿರುವ ಮೇಘ ಎಂಟರ್ಪ್ರೈಸಸ್ ನಲ್ಲಿ ಸಾಂಕೇತಿಕವಾಗಿ ಹೊಲಿಗೆ ಯಂತ್ರವನ್ನು ಹಸ್ತಾಂತರ ಮಾಡಿದರು. ಸಂಸ್ಥೆಯು ಹಲವಾರು ವರ್ಷಗಳಿಂದ ನಿರುದ್ಯೋಗಿ ಮಹಿಳೆಯರಿಗೆ […]
ಫೇಸ್ ಕ್ರೀಂ ತಿಂದು ಎರಡು ವರ್ಷದ ಮಗು ಮೃತ್ಯು
ಮೈಸೂರು: ಫೇಸ್ ಕ್ರೀಂ ತಿಂದು ಎರಡು ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ಮೈಸೂರು ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಎಂಬಲ್ಲಿ ನಡೆದಿದೆ. ಬೆಳಗನಹಳ್ಳಿ ಗ್ರಾಮದ ಮಹೇಶ್-ಕನ್ಯಾ ದಂಪತಿಯ ಪುತ್ರ ಮನ್ವಿಷ್ (2) ಮೃತಪಟ್ಟ ಮಗು. ಮನ್ವಿಷ್ ಬುಧವಾರ ಮನೆಯಲ್ಲಿ ಆಟವಾಡುತ್ತಿದ್ದಾಗ ಮುಖಕ್ಕೆ ಹಚ್ಚುವ ಕ್ರೀಂ ತಿಂದಿದ್ದು, ಇದು ಪೋಷಕರ ಗಮನಕ್ಕೆ ಬಂದಿರಲಿಲ್ಲ. ಬಳಿಕ ಅಂದು ರಾತ್ರಿ 10ಗಂಟೆ ಸುಮಾರಿಗೆ ವಾಂತಿ ಮಾಡಿಕೊಂಡಿದ್ದಳು. ಆಗ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಿದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎಂದು […]
ಉಡುಪಿ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಐದು ಟಿಪ್ಪರ್ ವಶ
ಉಡುಪಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಮಿನಿ ಟಿಪ್ಪರ್ ಸಹಿತ ಒಟ್ಟು ಐದು ಟಿಪ್ಪರ್ ಗಳನ್ನು ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಗಣಿ ಅಧಿಕಾರಿಗಳಾದ ಸಂದೀಪ್ ಪಾಟೀಲ್ ಹಾಗೂ ಮಹೇಶ್ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ಪೆರಂಪಳ್ಳಿ ಜಂಕ್ಷನ್ ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಮಿನಿ ಟಿಪ್ಪರ್ ಅಡ್ಡಹಾಕಿ ನಿಲ್ಲಿಸಿ, ಟಿಪ್ಪರ್ […]
ಕಾರ್ಕಳ: ರಸ್ತೆಯಲ್ಲಿ ಹೊಸವರ್ಷ ಸಂಭ್ರಮಾಚರಣೆ; ಕಾರು ಡಿಕ್ಕಿ ಹೊಡೆದು ಯುವಕರಿಬ್ಬರು ಮೃತ್ಯು
ಕಾರ್ಕಳ: ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದು ಯುವಕರಿಬ್ಬರು ಮೃತಪಟ್ಟ ದಾರುಣ ಘಟನೆ ಗುರುವಾರ ತಡರಾತ್ರಿ ಕಾರ್ಕಳದ ಮಿಯಾರು ಕಾಜರಬೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಬಿಜಾಪುರ ಮೂಲದ ಶರಣು ಹಾಗೂ ಸಿದ್ದು ಮೃತ ಯುವಕರು. ಇವರು ಸ್ನೇಹಿತರಾದ ತೌಸಿಫ್ ಹಾಗೂ ಬಸವರಾಜು ಅವರೊಂದಿಗೆ ಸೇರಿಸಿಕೊಂಡು ರಸ್ತೆಯಲ್ಲಿ ಹ್ಯಾಪಿ ನ್ಯೂಯರ್ ಎಂದು ಬರೆಯಲು ಹೋಗಿದ್ದಾರೆ. ಈ ವೇಳೆ ಬಜಗೋಳಿ ಕಡೆಯಿಂದ ಪುಲ್ಕೇರಿ ಕಡೆಗೆ ಸಾಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಶರಣು […]