ಗ್ರಾಪಂ ಚುನಾವಣೆ ಪ್ರಜಾಪ್ರಭುತ್ವದ ಹಬ್ಬ: ಪ್ರಮೋದ್ ಮಧ್ವರಾಜ್
ಉಡುಪಿ: ಗ್ರಾಮ ಪಂಚಾಯತ್ ಚುನಾವಣೆ ಅಂದರೆ ಪ್ರಜಾಪ್ರಭುತ್ವದ ಹಬ್ಬ. ದೀಪಾವಳಿ, ಕ್ರಿಸ್ಮಸ್, ರಮ್ಜಾನ್ ಹಬ್ಬದಂತೆ ಚುನಾವಣೆಯಲ್ಲಿ ಸ್ಪರ್ಧೆ ಮುಖ್ಯ. ಸೋಲು ಗೆಲುವು ನಮ್ಮ ಹಣೆಯಲ್ಲಿ ಬರೆದಂತಾಗುತ್ತದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಉಡುಪಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಉಡುಪಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಪಂಚಾಯತ್‍ಗಳ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಹಾಗೂ ವೀಕ್ಷಕರ ಸಭೆಯಲ್ಲಿ ಮಾತನಾಡಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಸಂತೋಷ ತಂದಿದೆ ಎಂದು ಶುಭ ಹಾರೈಸಿದರು. ಜಿಲ್ಲಾ […]
ಕರ್ನಾಟಕ ರಾಜ್ಯಪಾಲರನ್ನು ಭೇಟಿ ಮಾಡಿದ ಪೇಜಾವರ ಶ್ರೀ
ಉಡುಪಿ: ಕರ್ನಾಟಕದ ರಾಜ್ಯಪಾಲ ವಾಜೂಭಾಯಿ ಬಾಯಿವಾಲಾ ಅವರನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ ರಾಜಭವನದಲ್ಲಿ ಭೇಟಿ ಮಾಡಿದರು. ಅಯೋಧ್ಯೆ ರಾಮಮಂದಿರ ಕಾರ್ಯಕ್ಕೆ ಸಮಸ್ತರ ಬೆಂಬಲ ಸಹಕಾರ ಅಪೇಕ್ಷಿಸಿ ದಕ್ಷಿಣ ರಾಜ್ಯಗಳ ಸಂಚಾರದಲ್ಲಿರುವ ಶ್ರೀಗಳು ನಾಡಿನ ಜನತೆಯ ಬೆಂಬಲಕ್ಕಾಗಿ ರಾಜ್ಯಪಾಲರಿಗೆ ಪತ್ರ ಅರ್ಪಿಸಿದರು. ಶ್ರೀಗಳನ್ನು ಶ್ರದ್ಧೆಯಿಂದ ಬರಮಾಡಿಕೊಂಡು ಗೌರವ ಅರ್ಪಿಸಿದ ರಾಜ್ಯಪಾಲರು ಸ್ವಲ್ಪ ಹೊತ್ತು ಸಮಾಲೋಚನೆ ನಡೆಸಿದರು. 1953ರಲ್ಲಿ ಗುರೂಜಿ ಗೋಳ್ವಲ್ಕರ್ ರು ಗೋಹತ್ಯಾ ನಿಷೇಧಕ್ಕೆ ಕರೆ ಕೊಟ್ಟಾಗ ತಾನಿನ್ನೂ ಎಳೆಯ ಯುವಕನಾಗಿದ್ದೆ . ಆಗ ತನ್ನೊಂದಿಗೆ […]
ಖಾಸಗಿ ಶಾಲೆಯ ಶಿಕ್ಷಕಿ ಆತ್ಮಹತ್ಯೆಗೆ ಶರಣು
ಮಂಗಳೂರು: ಖಾಸಗಿ ಶಾಲೆಯೊಂದರ ಶಿಕ್ಷಕಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ನಿವಾಸಿ ಗ್ರೆಟಾ ಡಿಸೋಜಾ(40) ಮೃತ ದುರ್ದೈವಿ. ಈಕೆ ಶಾಲೆಗಳು ಮುಚ್ಚಿದ್ದರಿಂದ ಖಿನ್ನತೆ ಒಳಗಾಗಿದ್ದರು. ನಿದ್ರೆಯ ಸಮಸ್ಯೆಯ ಇತ್ತು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಯಶಸ್ಸಿನ ಹಾದಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: ನಾಳೆ ಉಡುಪಿಯಲ್ಲಿ ಹೊಸ ಶಾಖೆ ಶುಭಾರಂಭ
ಉಡುಪಿ: 2001ರಲ್ಲಿ ಉಡುಪಿ ಜಿಲ್ಲೆಯ ಪರ್ಕಳದ ಸಣ್ಣ ಪರಿಸರದಲ್ಲಿ ಆರಂಭಗೊಂಡ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 19 ಸಂವತ್ಸರಗಳನ್ನು ಪೂರೈಸಿ ವಿಶಂತಿ ವರ್ಷಾಚರಣೆಯ ಹಾದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಕಲ್ಸಂಕದ ಅಜೇಯ್ ಟವರ್ಸ್ ನ ಪ್ರಥಮ ಮಹಡಿಯಲ್ಲಿ ತನ್ನ ಆರನೇ ಶಾಖೆಯನ್ನು ಇದೇ ಡಿಸೆಂಬರ್ 17ರ ಗುರುವಾರದಂದು ಉದ್ಘಾಟನೆಗೊಂಡು ಉಡುಪಿ ಜನತೆಗೆ ಸೇವೆಯನ್ನು ನೀಡಲಿದೆ. ಪರ್ಕಳದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಬಂಟಕಲ್ಲು, ಹಿರಿಯಡಕ, ಮಣಿಪಾಲ, ಕುಕ್ಕೆಹಳ್ಳಿಗಳಲ್ಲಿ ಶಾಖೆಗಳನ್ನು ಒಳಗೊಂಡಿದೆ. ಆ ಪೈಕಿ ಮೂರು ಶಾಖೆಗಳು […]
ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧಿಯ ಜಾಹೀರಾತು ನೀಡುವಂತಿಲ್ಲ; ಆಯುಷ್ ವೈದ್ಯರಿಗೆ ಸುಪ್ರೀಂ ಕೋರ್ಟ್ ಸೂಚನೆ
ನವದೆಹಲಿ: ಆಯುಷ್ ಮತ್ತು ಹೋಮಿಯೋಪಥಿ ವೈದ್ಯರು ಮಾತ್ರೆ ಅಥವಾ ಮಿಶ್ರಣಗಳಿಂದ ಕೋವಿಡ್-19 ನಿಯಂತ್ರಣ ಮಾಡಬಹುದು ಎಂದು ಪ್ರಚಾರ ಮಾಡುವಂತಿಲ್ಲ. ಆದರೆ ಚಿಕಿತ್ಸೆಗಾಗಿ ಸರ್ಕಾರದಿಂದ ಅನುಮೋದಿತ ಮಾತ್ರೆಗಳು ಅಥವಾ ಮಿಶ್ರಣಗಳನ್ನು ರೋಗನಿರೋಧಕ ವರ್ಧಕಗಳಾಗಿ ಸೂಚಿಸಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಆಯುಷ್ ವೈದ್ಯರು ಕೋವಿಡ್‌ಗೆ ಔಷಧಿಗಳನ್ನು ನೀಡುವುದನ್ನು ನಿರ್ಬಂಧಿಸಿ ಕೇರಳ ಹೈಕೋರ್ಟ್ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಡಾ.ಎಕೆಬಿ ಸದ್ಭಾವನ ಮಿಷನ್ ಸ್ಕೂಲ್ ಆಫ್ ಹೋಮಿಯೋ ಫಾರ್ಮಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸುಭಾಷ್ ರೆಡ್ಡಿ […]