ಆಟೊ ರಿಕ್ಷಾ ಪಲ್ಟಿ: ಮೂರು ದಿನಗಳ ಹಸುಗೂಸು ಮೃತ್ಯು
ಮಂಗಳೂರು: ಆಟೊ ರಿಕ್ಷಾ ಪಲ್ಟಿಯಾಗಿ ಮೂರು ದಿನಗಳ ಹಸುಗೂಸು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬಿಸಿ ರೋಡ್ ನ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಸಂಭವಿಸಿದೆ. ಗುರುಪುರ-ಕೈಕಂಬ ನಿವಾಸಿ ಉಮೈರಾ ಎಂಬುವರು ಮೂರು ದಿನಗಳ ಹಿಂದೆಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಿ.ಸಿ.ರೋಡ್ ಕಡೆ ಬರುವ ಖಾಲಿ ಆ್ಯಂಬುಲೆನ್ಸ್ ನಲ್ಲಿ ಬಂದು ಕೈಕಂಬದಲ್ಲಿ ಇಳಿದು, ಬಳಿಕ ಅಲ್ಲಿಂದ ಆಟೊ ರಿಕ್ಷಾದಲ್ಲಿ ಮನೆ ಕಡೆಗೆ ತೆರಳುವ ವೇಳೆ ಈ ದುರ್ಘಟನೆ […]
ನೈಟ್ ಕರ್ಪ್ಯೂ ಹೇರಲು ನಿರ್ಧರಿಸಿಲ್ಲ: ಬೊಮ್ಮಾಯಿ
ಉಡುಪಿ: ಹೊಸವರ್ಷ ಆಚರಣೆ ಸಂದರ್ಭದಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಹೇರುವ ಕುರಿತು ಯಾವುದೇ ನಿರ್ಧಾರ ಆಗಿಲ್ಲ. ಆದರೆ ತಜ್ಞರು ಹೆಚ್ಚು ಜನರು ಗುಂಪು ಸೇರಲು ಅವಕಾಶ ನೀಡಬಾರದೆಂದು ಸಲಹೆ ನೀಡಿದ್ದಾರೆ. ಹಾಗಾಗಿ ಇಂದು ಅಥವಾ ನಾಳೆ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸವರ್ಷ ಆಚರಣೆ ಸಂದರ್ಭದಲ್ಲಿ ಜನಸಂದಣಿ ಆಗಬಾರದು. ಅದಕ್ಕೆ ನೈಟ್ ಕರ್ಪ್ಯೂ ಹೊರತುಪಡಿಸಿ ಯಾವುದೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದರ […]
ರಾಜ್ಯದಲ್ಲಿ ಲವ್ ಜಿಹಾದ್ ತಡೆಗೆ ಕಾನೂನು ಜಾರಿಗೊಳಿಸುವುದು ಖಚಿತ: ಬೊಮ್ಮಾಯಿ
ಉಡುಪಿ: ಲವ್ ಜಿಹಾದ್ ವಿರುದ್ಧ ಕರ್ನಾಟಕದಲ್ಲಿ ಆದಷ್ಟು ಬೇಗ ಕಾನೂನು ಜಾರಿಗೊಳಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಳಿಕ ಹರಿಯಾಣ, ಮಧ್ಯಪ್ರದೇಶ ಸರ್ಕಾರ, ಉತ್ತರ ಪ್ರದೇಶ ಸರ್ಕಾರಗಳು ಲವ್ ಜಿಹಾದ್ ಬಗ್ಗೆ ಕಾನೂನು ರೂಪಿಸಲು ನಿರ್ಧರಿಸಿವೆ. ಯುಪಿ ಸರ್ಕಾರ ಕಾನೂನು ಜಾರಿಗೊಳಿಸಿದೆ. ಅದರಂತೆ ಕರ್ನಾಟಕದಲ್ಲೂ ಲವ್ ಜಿಹಾದ್ ತಡೆಗೆ ಕಾನೂನು ತರಲು ತೀರ್ಮಾನಿಸಲಾಗಿದೆ ಎಂದರು. ಕಾನೂನನ್ನು ಯಾವ ರೀತಿ […]
ಮೀನುಗಾರರ ಸಂಕಷ್ಠ ಪರಿಹಾರ ನಿಧಿಯ ಮೊತ್ತ ₹ 10 ಲಕ್ಷಕ್ಕೆ ಏರಿಸಲು ಪ್ರಮೋದ್ ಮಧ್ವರಾಜ್ ಆಗ್ರಹ
ಉಡುಪಿ: ಮೀನುಗಾರರ ಸಂಕಷ್ಠ ಪರಿಹಾರ ನಿಧಿಯ ಮೊತ್ತವನ್ನು ಕನಿಷ್ಠ ₹ 10 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹಿಸಿದ್ದಾರೆ. ಮಂಗಳೂರಿನ ಮೀನುಗಾರಿಕಾ ಬೋಟ್ ದುರಂತದಲ್ಲಿ ಮಡಿದ ಆರು ಮಂದಿ ಮೀನುಗಾರರ ಆತ್ಮಕ್ಕೆ ಶಾಂತಿ ಕೋರಿದ ಅವರು, ಈ ಘಟನೆ ಅತ್ಯಂತ ನೋವಿನ ಸಂಗತಿಯಾಗಿದೆ. ಇನ್ಮುಂದೆ ಇಂತಹ ಘಟನೆ ನಡೆಯದಿರಲಿ ಮತ್ತು ಯಾವ ಮೀನುಗಾರನ ಜೀವಕ್ಕೂ ಪ್ರಾಣಾಪಾಯ ಸಂಭವಿಸದಿರಲಿ ಎಂದು ಸಮುದ್ರ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಅಗಲಿದ ಜೀವಕ್ಕೆ ಬೆಲೆ ಕಟ್ಟಲಾಗದು. ಸಂಕಷ್ಟದಲ್ಲಿ ಹೊಟ್ಟೆಪಾಡಿಗೆ ಸಮುದ್ರದಲ್ಲಿ […]