ಪ್ರಧಾನಿ ಮೋದಿಯನ್ನು ಹೊಗಳಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ

ನವದೆಹಲಿ: ಕೋವಿಡ್-19 ಲಸಿಕೆ ಅಭಿವೃದ್ಧಿ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವುದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಮೆಚ್ಚುಗೆ ಸೂಚಿಸಿ ಹೊಗಳಿದ್ದಾರೆ. ಆದರೆ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಕಾಂಗ್ರೆಸ್ ನಾಯಕ, ವಕ್ತಾರ ರಣದೀಪ್ ಸುರ್ಜೆವಾಲ ಪ್ರಧಾನಿ ನಡೆಯನ್ನು ಟೀಕಿಸಿದ್ದರೆ, ಅದೇ ಪಕ್ಷದ ಮತ್ತೋರ್ವ ನಾಯಕರಾಗಿರುವ ಆನಂದ್ ಶರ್ಮಾ ಪ್ರಧಾನಿ ನಡೆಗೆ ಮೆಚ್ಚುಗೆ ಸೂಚಿಸಿ ಹೊಗಳಿರುವುದು ಸಾಕಷ್ಟು ಚರ್ಚೆ ಗ್ರಾಸವಾಗಿದೆ. ಮೋದಿ ಭೇಟಿ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಆನಂದ್ ಶರ್ಮಾ, ಪ್ರಧಾನಿಯ […]

ಸಮಾಜ ಸೇವಕ ಬಾಬಾ ಅಮ್ಟೆ ಮೊಮ್ಮಗಳು ಆತ್ಮಹತ್ಯೆಗೆ ಶರಣು

ಮುಂಬೈ: ಸಮಾಜ ಸೇವಕ ಬಾಬಾ ಅಮ್ಟೆ ಅವರ ಮೊಮ್ಮಗಳು, ಆನಂದವನ್ ಮಹಾರೋಗಿ ಸೇವಾ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶೀತಲ್ ವಿಕಾಸ್ ಅಮ್ಟೆ ಕಾರಜಿಗಿ ಅವರು ಮಹಾರಾಷ್ಟ್ರದ ವರೋರದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಾ. ಶೀತಲ್ ವಿಕಾಸ್ ಅಮ್ಟೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಡಾ. ಶೀತಲ್ ಇತ್ತೀಚೆಗೆ ಮಹಾರೋಗಿ ಸೇವಾ ಸಮಿತಿಯ ಅಕ್ರಮಗಳ ಬಗ್ಗೆ ಆರೋಪ ಮಾಡಿದ್ದರು. ಟ್ರಸ್ಟ್ ಮ್ಯಾನೇಜ್‌ಮೆಂಟ್ ಮತ್ತು ಅವರ ಕುಟುಂಬವನ್ನು […]

2022-24ರ ಶ್ರೀಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿ ಬಾಳೆ ಮುಹೂರ್ತ ಸಂಪನ್ನ

ಉಡುಪಿ: 2022-24ರ ಶ್ರೀಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಇಂದು ರಥಬೀದಿಯ ಮಠದ ಆವರಣದಲ್ಲಿ ಬಾಳೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಆ ಮೂಲಕ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಸ್ವಾಮೀಜಿಯ ನಾಲ್ಕನೇ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಿದ್ಧತೆಗಳಿಗೆ ಪ್ರಥಮ ಹಂತದಲ್ಲಿ ಚಾಲನೆ ನೀಡಲಾಯಿತು. ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಭಕ್ತರು ಬಾಳೆಗಿಡಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಕೃಷ್ಣಮುಖ್ಯಪ್ರಾಣನ ಜತೆಗೆ ಅನಂತೇಶ್ವರ, ಚಂದ್ರಮೌಳೇಶ್ವರ ಸನ್ನಿದಾನದಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಬಾಳೆ ಮುಹೂರ್ತಕ್ಕೆ ಚಾಲನೆ ನೀಡಲಾಯಿತು. ಬಳಿಕ ಕೃಷ್ಣಾಪುರ ಮಠಕ್ಕೆ ಆಗಮಿಸಿ […]

ಮಾತ್ರೆ ಅದಲು ಬದಲಾದ ಕಾರಣ ಆರೋಗ್ಯದಲ್ಲಿ ಏರುಪೇರು: ಎನ್.ಆರ್. ಸಂತೋಷ್

ಬೆಂಗಳೂರು: ನನಗೆ ಸ್ವಲ್ಪ ಅಜೀರ್ಣವಾಗಿದ್ದ ಹಿನ್ನೆಲೆ ಮಾತ್ರೆ ಸೇವಿಸಿದ್ದೆ. ಅಜೀರ್ಣ ಮಾತ್ರೆಯ ಬದಲಾಗಿ ನಿದ್ರೆಯ ಮಾತ್ರೆ ಸೇವಿಸಿಬಿಟ್ಟಿದ್ದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಹೇಳಿದ್ದಾರೆ. ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನನಗೆ ಯಾವುದೇ ಒತ್ತಡ ಇರಲಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ. ನನಗೆ ನಿದ್ದೆ ಬಾರದಿದ್ದಾಗ ನಿದ್ರೆ ಮಾತ್ರೆ ಸೇವಿಸುವ ಅಭ್ಯಾಸವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಒಂದೆರಡು ದಿನ ವಿಶ್ರಾಂತಿ ಪಡೆದು ಸಿಎಂ ಭೇಟಿಯಾಗುತ್ತೇನೆ ಎಂದರು. ಡಿಕೆಶಿ ಹತಾಶರಾಗಿದ್ದಾರೆ: […]

ಜೆಡಿಎಸ್ ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು ನೇಮಕ

ಉಡುಪಿ: ಜೆಡಿಎಸ್ ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು ಆಯ್ಕೆಯಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಅನುಮೋದನೆಯೊಂದಿಗೆ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬಾಲಕೃಷ್ಣ ಆಚಾರ್ಯ ಉಡುಪಿ ಜಿಲ್ಲಾ ಜೆಡಿಎಸ್ ನಾಯಕರಾಗಿದ್ದಾರೆ. ಉಡುಪಿ ಜಿಲ್ಲೆಯ ಚಿನ್ನ ಬೆಳ್ಳಿ ಕೆಲಸಗಾರರ ಹಿಂದಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದು ಜನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ಪ್ರಕಟಣೆಯಲ್ಲಿ […]