ದೀಪಾವಳಿಯನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ ‘ಸ್ಮರಣಿಕಾ’: ಗ್ರಾಹಕರನ್ನು ಸೆಳೆಯುತ್ತಿದೆ ಆಕರ್ಷಕ ಗೂಡುದೀಪ, ಗಿಫ್ಟ್, ಸ್ವೀಟ್ಸ್
ಉಡುಪಿ: ಮೊಮೆಂಟೊ ಮತ್ತು ಗಿಫ್ಟ್ ವಸ್ತುಗಳಿಗೆ ಹೆಸರುವಾಸಿ ಆದ ಉಡುಪಿಯ ಪ್ರತಿಷ್ಠಿತ ಸ್ಮರಣಿಕಾ ಸಂಸ್ಥೆಯು ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ. ದೀಪಾವಳಿ ಪ್ರಯುಕ್ತ ವಿಶೇಷ ಹಾಗೂ ಆಕರ್ಷಕ ಉಡುಗೊರೆಯ ಮಾರಾಟ ಮೇಳವನ್ನು ಆಯೋಜಿಸಿದೆ. ಉಡುಪಿ ರೆಸಿಡೆನ್ಸಿ ಸಮೀಪದ ಅಫನ್ ಕಾಂಪ್ಲೆಕ್ಸ್ ನಲ್ಲಿ ಮತ್ತು ಕಲ್ಸಂಕ ವೃತ್ತದ ಬಳಿಯ ಸ್ಮರಣಿಕಾ ರೋಯಲೆ ಕಟ್ಟಡದಲ್ಲಿರುವ ಸ್ಮರಣಿಕಾ ಮೊಮೆಂಟೊ, ಗಿಫ್ಟ್ ಸೆಂಟರ್ ಹಾಗೂ ಬಾಂಬೆ ಸ್ವೀಟ್ಸ್ ನಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ವಿಶೇಷ ಆಕರ್ಷಕ ಉಡುಗೊರೆಯೊಂದಿಗೆ ಗ್ರಾಹಕರಿಗೆ […]
ದೀಪಾವಳಿ ಆಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ: ಉಲ್ಲಂಘಿಸಿದರೆ ಕಠಿಣ ಕ್ರಮ- ಡಿಸಿ
ಉಡುಪಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ. ಸರ್ಕಾರದ ಆದೇಶದಂತೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಹಸಿರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಹಚ್ಚಬೇಕು. ಸುಡುಮದ್ದು ಮಾರಾಟ ಮಾಡುವ ಮಳಿಗೆಯ ಸುತ್ತಮುತ್ತ ಪ್ರತಿನಿತ್ಯ ಸ್ಯಾನಿಟೈಸೇಷನ್ ಮಾಡಬೇಕು ಹಾಗೂ ಪಟಾಕಿ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಬೇಕು. […]
ಕಾರ್ಕಳದ ಶಿವಂ ಇಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರಿಗೆ ಕಾದಿದೆ ಭಾರಿ ದೀಪಾವಳಿ ಆಫರ್.!
ಕಾರ್ಕಳ: ಈ ದೀಪಾವಳಿಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಪ್ಲ್ಯಾನ್ ಮಾಡಿದ್ದೀರಾ. ಹಬ್ಬದ ಸಂಭ್ರಮದ ಜೊತೆಗೆ ಮನೆಯ ಅಂದವನ್ನು ಹೆಚ್ಚಿಸುವ ಕನಸು ಕಾಣುತ್ತಿದ್ದೀರಾ. ಹಾಗಾದ್ರೆ ಈ ಶೋರೂಮ್ ಗೆ ಒಮ್ಮೆ ಭೇಟಿ ಕೊಡಿ, ನಿಮ್ಮ ಕನಸಿನ ವಸ್ತುಗಳನ್ನು ಭಾರೀ ರಿಯಾಯಿತಿ ದರದೊಂದಿಗೆ ಪಡೆದುಕೊಳ್ಳಿ. ಪ್ರತಿ ಖರೀದಿಗೆ ವಿಶೇಷ ಗಿಫ್ಟ್ , ಸ್ವೀಟ್ ಬಾಕ್ಸ್, ಸ್ಕ್ರ್ಯಾಚ್ ಕಾರ್ಡ್, ದೀಪಾವಳಿ ವಿಜಯೋತ್ಸವ ಕೂಪನ್ ಅನ್ನು ಪಡೆದುಕೊಂಡು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿ. ಕಾರ್ಕಳದ ‘ಶಿವಂ ಇಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ಸ್’ ನವೀಕೃತ ಶೋರೂಮ್ ನಲ್ಲಿ […]
ಉಡುಪಿ: ನ.17ರಿಂದ ಸಕಲ ಸುರಕ್ಷತಾ ಕ್ರಮಗಳೊಂದಿಗೆ ಪದವಿ ಕಾಲೇಜು ಶುರು: ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ: ಉಡುಪಿ ಜಿಲ್ಲೆಯಲ್ಲಿ ನವೆಂಬರ್ 17 ರಿಂದ ಅಂತಿಮ ವರ್ಷದ ಪದವಿ ತರಗತಿಗಳನ್ನು, ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಸರ್ಕಾರಿ,ಖಾಸಗಿ, ಅನುದಾನಿತ,ಅನುದಾನ ರಹಿತ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು, ಪ್ರಮಾಣಿತ ಕಾರ್ಯಾಚರಣ ವಿಧಾನ ಮಾರ್ಗಸೂಚಿಯನ್ವಯ ಪ್ರಾರಂಭಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ತಮ್ಮ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಮಾಡಿದ […]
ಟೋಲ್ಗೇಟ್ ಬಳಿ ಬರೋಬ್ಬರಿ ₹ 25 ಲಕ್ಷ ಮೌಲ್ಯದ ಡ್ರಗ್ಸ್ ವಶ: ಮೂವರ ಬಂಧನ
ಬೆಂಗಳೂರು: ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಜಾಲವೊಂದನ್ನು ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ದಳದ (ಎನ್ಸಿಬಿ) ಅಧಿಕಾರಿಗಳು ಬಂಧಿಸಿದ್ದು, ಬಂಧಿತರಿಂದ ಬರೋಬ್ಬರಿ ₹ 25 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಆರ್.ಎಸ್. ರಂಜಿತ್, ಕೆ.ಕೆ. ಸಾರಂಗ್ ಹಾಗೂ ಪಿ.ಡಿ. ಅನೀಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೇರಳ ನೋಂದಣಿ ಸಂಖ್ಯೆ ಕಾರಿನಲ್ಲಿ ಆಂಧ್ರಪ್ರದೇಶದಿಂದ ಬೆಂಗಳೂರು ಹಾಗೂ ಕೇರಳಕ್ಕೆ ಡ್ರಗ್ಸ್ ಸಾಗಿಸುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ದೇವನಹಳ್ಳಿ ಟೋಲ್ಗೇಟ್ ಬಳಿ ನ. 9ರಂದು ಕಾರು ತಡೆದು […]