ದೀಪಾವಳಿಯನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ ‘ಸ್ಮರಣಿಕಾ’: ಗ್ರಾಹಕರನ್ನು ಸೆಳೆಯುತ್ತಿದೆ ಆಕರ್ಷಕ ಗೂಡುದೀಪ, ಗಿಫ್ಟ್, ಸ್ವೀಟ್ಸ್

ಉಡುಪಿ:‌ ಮೊಮೆಂಟೊ ಮತ್ತು ಗಿಫ್ಟ್ ವಸ್ತುಗಳಿಗೆ ಹೆಸರುವಾಸಿ ಆದ ಉಡುಪಿಯ ಪ್ರತಿಷ್ಠಿತ ಸ್ಮರಣಿಕಾ ಸಂಸ್ಥೆಯು ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ. ದೀಪಾವಳಿ ಪ್ರಯುಕ್ತ ವಿಶೇಷ ಹಾಗೂ ಆಕರ್ಷಕ ಉಡುಗೊರೆಯ ಮಾರಾಟ ಮೇಳವನ್ನು ಆಯೋಜಿಸಿದೆ.

ಉಡುಪಿ ರೆಸಿಡೆನ್ಸಿ ಸಮೀಪದ ಅಫನ್ ಕಾಂಪ್ಲೆಕ್ಸ್ ನಲ್ಲಿ ಮತ್ತು ಕಲ್ಸಂಕ ವೃತ್ತದ ಬಳಿಯ ಸ್ಮರಣಿಕಾ ರೋಯಲೆ ಕಟ್ಟಡದಲ್ಲಿರುವ ಸ್ಮರಣಿಕಾ ಮೊಮೆಂಟೊ, ಗಿಫ್ಟ್ ಸೆಂಟರ್ ಹಾಗೂ ಬಾಂಬೆ ಸ್ವೀಟ್ಸ್ ನಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ವಿಶೇಷ ಆಕರ್ಷಕ ಉಡುಗೊರೆಯೊಂದಿಗೆ ಗ್ರಾಹಕರಿಗೆ ಲಭ್ಯವಿದೆ.

ಈ ಸಂಸ್ಥೆಯಲ್ಲಿ ಎಲ್ಲ ಬಗೆಯ ಸಾಮಾಗ್ರಿಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಹ್ಯಾಂಡಿಕ್ರಾಫ್ಟ್, ಸ್ಪೋರ್ಟ್ಸ್, ಡೈರಿ, ಗಡಿಯಾರ, ಪೆನ್, ಪರ್ಸ್, ಕೀ ಚೈನ್ ಮೊದಲಾದ ಗುಣಮಟ್ಟದ ವಸ್ತುಗಳ ಸಂಗ್ರಹವಿದೆ.

 

ಪರಿಸರ ಸ್ನೇಹಿ ಗೂಡುದೀಪ:
ಸಂಸ್ಥೆಯ ಮಳಿಗೆಗಳಲ್ಲಿ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಾದೇಶಿಕ ಪಾರಂಪರಿಕ ಶೈಲಿಯ ಪರಿಸರಸ್ನೇಹಿ ಗೂಡುದೀಪಗಳ ಬೃಹತ್ ಸಂಗ್ರಹವಿದೆ. ವಾರ್ಷಿಕೋತ್ಸವದ ಪ್ರಯುಕ್ತ ಪುರುಷರ ಶರ್ಟ್ ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಏನಿದೆ ಸ್ಪೆಷಲ್:
ಸವಿರುಚಿಯದ ಬಗೆಬಗೆಯ ಸ್ವೀಟ್ಸ್ ಗಳು, ಬಾಂಬೆಯ ಸ್ಪೆಷಲ್ ಸ್ವೀಟ್ಸ್ ಗಳು, ಡ್ರೈಫ್ರೂಟ್ಸ್, ಶುಗರ್ ಫ್ರೀ ಸ್ವೀಟ್ಸ್ ಗಳು, ರಾಜ್ ಕಚೋರಿ, ಸಮೋಸ, ಪಾನಿಪುರಿ, ವಡಾಪಾವ್, ಮಸಾಲಾಪುರಿ ಸೇರಿದಂತೆ ಇತರೆ ಚಾಟ್ಸ್ ಗಳ ರುಚಿಯನ್ನು ಗ್ರಾಹಕರು ಸವಿಯಬಹುದು. ಗ್ರಾಹಕರು ಬಲ್ಕ್ ಬುಕಿಂಗ್ ಮಾಡಿದಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಮಾಲೀಕ ದಿವಾಕರ್ ಸನಿಲ್ ತಿಳಿಸಿದ್ದಾರೆ.