ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾಗಿ ಶ್ರೀಕಾಂತ ಪೂಜಾರಿ ನೇಮಕ
ಕಾರ್ಕಳ: ಜೆಡಿಎಸ್ ಪಕ್ಷದ ಕಾರ್ಕಳ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಶ್ರೀಕಾಂತ ಪೂಜಾರಿ ಕೆ. ಅವರು ಆಯ್ಕೆಯಾಗಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ . ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರ ಶಿಫಾರಸ್ಸಿನ ಮೇರೆಗೆ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಅವರು ಶ್ರೀಕಾಂತ್ ಅವರನ್ನು ನೇಮಕಗೊಳಿಸಿದ್ದಾರೆ. ಶ್ರೀಕಾಂತ್ ಅವರು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕಾರ್ಕಳ ತಾಲ್ಲೂಕು ಕೆಡಿಪಿ ಸದಸ್ಯರಾಗಿದ್ದು, ಜೆಡಿಎಸ್ ಕಾರ್ಕಳ ಕಾರ್ಯಾಧ್ಯಕ್ಷರಾಗಿದ್ದರು. ಅಲ್ಲದೆ, ಹೆಬ್ರಿ ಪರಿಸರದಲ್ಲಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ ಎಂದು […]
ಕಣ್ಣು ಕೊರೈಸುವ ಮೋಹಕ ಚಿತ್ರ ಬಿಡಿಸ್ತಾಳೆ ಉಂಚಳ್ಳಿ ಅನ್ನೋ ಜಲಪಾತದೂರಿನ ಈ ಹುಡುಗಿ:
ಇವರು ಬಿಡಿಸಿದ ಕಲಾಕೃತಿಗಳನ್ನು ನೋಡುತ್ತಿದ್ದರೆ ಬೆರಗಿನಿಂದ ಅಬ್ಬಾ ಎನ್ನುವ ಉದ್ಗಾರ ಮೂಡುತ್ತದೆ. ಪ್ರತಿಭೆ ಇದ್ದರೆ, ಸಾಧಿಸುವ ಮನಸ್ಸಿದ್ದರೆ, ಒಂದು ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಮನುಷ್ಯ ಏನೆನೆಲ್ಲಾ ಸಾಧಿಸಬಹುದಲ್ಲವೇ ಅನ್ನೋ ಅಚ್ಚರಿ ಮೂಡುತ್ತದೆ. ಇವರು ಜಲಪಾತದ ಜಿಲ್ಲೆಯಾದ ಉತ್ತರ ಕನ್ನಡದ ಉಂಚಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಸಿ೦ಧು ಭಟ್. ಗ್ರಾಮೀಣ ಭಾಗದ ಸೊಗಡು, ಶೈಲಿ, ಚೆಂದ, ಬೆರಗು ಎಲ್ಲವೂ ಇವರ ಕಲಾಕೃತಿಯಲ್ಲಿ ಕಾಡುತ್ತದೆ. ಸಿಂಧುಗೆ ಚಿತ್ರಕಲೆಯ ಕುರಿತು ಇಷ್ಟೊಂದು ಆಸಕ್ತಿ ಮೂಡಿದ್ದು ಹೇಗೆ?ಮತ್ತೆ ಬೇರೆ ಯಾವ ಯಾವ ಆಸಕ್ತಿ […]
ಉಡುಪಿ: ನವೆಂಬರ್ 7, 8ರಂದು ‘ಇ ಪವರ್ ಪರ್ಬ-20’
ಉಡುಪಿ: ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿಯ ‘ಪವರ್ ಪರ್ಬ’ವನ್ನು ಆನ್ ಲೈನ್ ಮಾದರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಅದರಂತೆ ಇದೇ ನವೆಂಬರ್ 7 ಮತ್ತು 8ರಂದು (www.powerparba.com) ನಲ್ಲಿ ‘ಇ- ಪವರ್ ಪರ್ಬ-20’ ಅನ್ನು ಆಯೋಜಿಸಲಾಗಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಪುಷ್ಪಾ ಜಿ. ರಾವ್ ತಿಳಿಸಿದ್ದಾರೆ. ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ ಮಹಿಳಾ ಉದ್ಯಮಿಗಳ ಉತ್ಪನ್ನ,ಸೇವೆಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 100 ‘ಇ-ಮಳಿಗೆ’ಗಳ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಉದ್ಯಮಿಗಳು […]
ರಾಜ್ಯದಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧ: ಸಿಎಂ ಯಡಿಯೂರಪ್ಪ
ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ರಾಜ್ಯ ಸರ್ಕಾರ ಆಘಾತ ನೀಡಿದ್ದು, ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯದಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಇಂದು ಸಂಜೆ ವೇಳೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಹೆಜಮಾಡಿ: ಇಬ್ಬರು ಮುಸ್ಲಿಂ ಯುವಕರ ಪ್ರಾಣರಕ್ಷಣೆಗೆ ಒಂದು ಕಿ.ಮೀ ದೂರದಿಂದ ಓಡಿಬಂದ ಹಿಂದೂ ಯುವಕರು
ಪಡುಬಿದ್ರಿ: ಹೆಜಮಾಡಿ ಕಾಮಿನಿ ಹೊಳೆಯಲ್ಲಿ ಮುಳುಗಿದ ಇಬ್ಬರು ಮುಸ್ಲಿಂ ಯುವಕರನ್ನು ಹಿಂದೂ ಯುವಕರು ಜೀವದ ಹಂಗು ತೊರೆದು ರಕ್ಷಿಸಲು ಮುಂದಾಗಿದ್ದ ಘಟನೆ ಗುರುವಾರ ಸಂಜೆ ನಡೆದಿದೆ. ದುರದೃಷ್ಟವಶಾತ್ ಇಬ್ಬರು ಮುಸ್ಲಿಂ ಯುವಕರ ದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದರೂ, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. ವಿಶ್ವ ಹಿಂದೂ ಪರಿಷತ್- ಬಜರಂಗದಳ ಕಾಪು ಪ್ರಖಂಡದ ಸಹಕಾರ್ಯದರ್ಶಿ ನಿತೇಶ್ ಮೊಗವೀರ ಎರ್ಮಾಳ್, ಪಡುಬಿದ್ರಿ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷ ಕಿರಣ್ ಮೊಗವೀರ ಪಡುಬಿದ್ರಿ ಮತ್ತು ರಂಜಿತ್ ಮೊಗವೀರ ಎರ್ಮಾಳ್ ಮುಸ್ಲಿಂ ಯುವಕರ ರಕ್ಷಣೆ […]