ಹಸಿರು ಪಟಾಕಿ ಮಾತ್ರ ಬಳಸಿ ಸರಳ ದೀಪಾವಳಿ‌ ಆಚರಿಸಿ: ಸಿಎಂ ಮನವಿ

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಸಿರು ಪಟಾಕಿ ಮಾತ್ರ ಬಳಸಿ ದೀಪಾವಳಿ ಹಬ್ಬವನ್ನು ಸರಳವಾಗಿ‌, ಭಕ್ತಿಪೂರ್ವಕವಾಗಿ ಆಚರಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ.

ಎಕೆಎಮ್ಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಯತ್ನ ಪ್ರಕರಣ: ಒಂಭತ್ತು ಮಂದಿ ಆರೋಪಿಗಳ ಬಂಧನ

ಮಣಿಪಾಲ: ಎಕೆಎಮ್ಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಮಂದಿ ಆರೋಪಿಗಳನ್ನು ಮಣಿಪಾಲ ಪೊಲೀಸರು ಇಂದು ಬಂಧಿಸಿದ್ದಾರೆ. ಕೊಡಗು ವಿರಾಜಪೇಟೆಯ ದರ್ಶನ್ ದೇವಯ್ಯ ಹಾಗೂ ಆತನ ಪತ್ನಿ ಸೌಭಾಗ್ಯ, ಮೂಡುಬಿದಿರೆ ಮಾರ್ನಾಡು ನಿವಾಸಿ ಸಂತೋಷ್ ಪೂಜಾರಿ, ಸೋಮವಾರ ಪೇಟೆ ನಿವಾಸಿ ಅನಿಲ್ ಕುಮಾರ್, ಬೆಳ್ತಂಗಡಿ ಮಾರೋಡಿಯ ಸುಕೇಶ್ ಪೂಜಾರಿ, ಮೂಡುಬಿದಿರೆ ಮಾರ್ನಾಡುವಿನ ಗೋಪಾಲ, ಬೆಳ್ತಂಗಡಿ ಟಿ.ಬಿ. ಕ್ರಾಸ್ ನ ಮೋಹನ, ಕೆ.ಆರ್.ನಗರದ ಶ್ರೀರಾಂಪುರ ನಿವಾಸಿ ಸೋಮು ಹಾಗೂ ಪಿರಿಯಾಪಟ್ಟಣದ ಮಹೇಶ್ ಬಾಬು ಬಂಧಿತ […]

ಪೆರ್ಡೂರು: ಅಪಹರಣಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿ, ಅನ್ಯಕೋಮಿನ ಯುವಕ ಭಟ್ಕಳದಲ್ಲಿ ಪತ್ತೆ

ಉಡುಪಿ: ಅ. 28ರಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕಾಲೇಜಿಗೆ ತೆರಳಿದ್ದ ಪೆರ್ಡೂರು ಸಮೀಪದ ಅಪ್ರಾಪ್ತ ಬಾಲಕಿ ಬಳಿಕ ಅನ್ಯಕೋಮಿನ ಯುವಕ ಅಪಹರಣ ಮಾಡಿದ್ದ ಎನ್ನಲಾಗಿದ್ದು, ಇದೀಗ ಇಬ್ಬರು ಪತ್ತೆಯಾಗಿದ್ದಾರೆ. ಈ ಇಬ್ಬರನ್ನು ಭಟ್ಕಳದಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಅನ್ಯಕೋಮಿನ ಯುವಕ ಅಪ್ರಾಪ್ತನಾಗಿರುವುದರಿಂದ ಆತನನ್ನು ಬಾಲಭವನಕ್ಕೆ ಹಸ್ತಾಂತರ ಮಾಡಲಾಗಿದೆ. ಅಪ್ರಾಪ್ತ ಬಾಲಕಿ ಅ. 28 ರಂದು ಸ್ಕಾಲರ್ ಶಿಪ್‌ ಗೆ ಅರ್ಜಿ ನೀಡುವುದಕ್ಕಾಗಿ ಕಾಲೇಜಿಗೆ ಹೋಗಿದ್ದಳು. ಬಳಿಕ ಅನ್ಯಕೋಮಿನ ಯುವಕ ಆಕೆಯನ್ನು ತನ್ನ ಬೈಕ್ ನಲ್ಲಿ ಕುರಿಸಿಕೊಂಡು […]

ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲಿಯೂ ಹಣ ಪಾವತಿ ಸಾಧ್ಯ.!

ಉಡುಪಿ: ಭಾರತದಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಹಣ ಪಾವತಿಗೆ ರಾಷ್ಟ್ರೀಯ ಪಾವತಿ ನಿಗಮದಿಂದ (ಎನ್‌ಸಿಪಿಐ) ಅನುಮತಿ ಸಿಕ್ಕಿದ್ದು, ಇಂದಿನಿಂದ (ನ.6) ಸೌಲಭ್ಯ ಜಾರಿಗೆ ಬಂದಿದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್ ವರ್ಷನ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೌಲಭ್ಯ ಲಭ್ಯವಿದೆ’ ಎಂದು ಫೇಸ್‌ಬುಕ್ ತಿಳಿಸಿದೆ. ಕಾರ್ಯನಿರ್ವಹಣೆ ಹೇಗೆ.?: ಗೂಗಲ್ ಪೇ, ಪೇಟಿಎಂ ಹಾಗೂ ಫೋನ್‌ಪೇ ರೀತಿಯಲ್ಲೇ ವಾಟ್ಸ್‌ಆ್ಯಪ್ ಪೇ ಸಹ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಮೂಲಕ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಬ್ಯಾಂಕ್ ಖಾತೆ ಜತೆ ಲಿಂಕ್ ಮಾಡುವ ಮೂಲಕ ಹಣ ವರ್ಗಾವಣೆ ಅಥವಾ […]

ಕೊಡೇರಿ: ಕಾನೂನು ಬಾಹಿರ ಮೀನು ಮಾರಾಟ ವಿರೋಧಿಸಿ ಮೀನುಗಾರರಿಂದ ಪ್ರತಿಭಟನೆ

ಬೈಂದೂರು: ಇಲ್ಲಿನ ಕೊಡೇರಿ ಕಿರು ಬಂದರಿನ ಮೀನುಗಾರಿಕ ಜಟ್ಟಿಯಲ್ಲಿ ಯಾವುದೇ ರೀತಿಯ ಮೂಲಸೌಕರ್ಯ ಕಲ್ಪಿಸದೆ ಕಾನೂನು ಬಾಹಿರವಾಗಿ ಮೀನು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಕೊಡೇರಿಯ ಮೀನುಗಾರರು ಶುಕ್ರವಾರ ಧರಣಿ ನಡೆಸಿದರು. ಮೀನುಗಾರಿಕೆಗೆ ತೆರಳಿದ ನಾಡದೋಣಿ ಅಥವಾ ಇನ್ಯಾವುದೇ ರೀತಿಯ ಮೀನುಗಾರಿಕಾ ದೋಣಿಗಳು ಮೀನು ತೆಗೆದುಕೊಂಡು ಬಂದರೆ ಕೊಡೇರಿ ಶಾಲೆ ಸಮೀಪದಲ್ಲಿ ಮೀನು ಖಾಲಿ ಮಾಡುವ ಪ್ರತ್ಯೇಕ ವ್ಯವಸ್ಥೆ ಇದೆ. ಇದನ್ನು ಬಳಸಿಕೊಳ್ಳದೆ ಮೂಲಸೌಕರ್ಯವೇ ಇಲ್ಲದ ಅವೈಜ್ಞಾನಿಕವಾಗಿ ನಿರ್ಮಿಸಿರುವ ಜಟ್ಟಿಯಲ್ಲಿ ಅಕ್ರಮವಾಗಿ ಮೀನು ಖಾಲಿ ಮಾಡುತ್ತಿದ್ದಾರೆ. ಇದರಿಂದ ಕೊಡೇರಿಯ […]