ಹುಡುಗಿಯರೇ ನೀವು ಹೈ ಹೀಲ್ಸ್ ಪ್ರಿಯರೇ? ಹಾಗಾದ್ರೆ ಜಾಗ್ರತೆ ಮಾಡಿ, ಯಾಕಂದ್ರೆ!

ಹೈ ಹೀಲ್ಸ್ ಎಂದರೆ ಬಹುತೇಕ ಹುಡುಗಿಯರಿಗೆ ಅಚ್ಚುಮೆಚ್ಚು.ಹೈಟ್ ಆಗಿ ಕಾಣಬೇಕು,ಸ್ಟೈಲಿಶ್ ಆಗಿ ಕಾಣಬೇಕು ಎನ್ನುವ ಕಾರಣಗಳಿಗೆ ಹೈ ಹೀಲ್ಸ್ ಧರಿಸುವವರು ಜಾಸ್ತಿ.ಆದರೆ  ಯಾವಾಗಲು ಹೈ ಹೀಲ್ಸ್ ಹಾಕುವುದರಿಂದ ಮಾಸಖಂಡಗಳಿಗೆ ಅಧಿಕ ಒತ್ತಡ ಬಿದ್ದು ಗಾಯಗಳಾಗುವ ಸಾಧ್ಯತೆಯಿದೆ.  ಹೈ ಹೀಲ್ಸ್ ಧರಿಸುವುದರಿಂದ ನಿಮ್ಮ ಪಾದ ಮತ್ತು ಸುತ್ತಮುತ್ತಲಿನ ಸ್ನಾಯುಗಳು ಘಾಸಿಕೊಳ್ಳುವ ಸಾಧ್ಯತೆಯಿದೆ, ಇದರಿಂದ ಸ್ನಾಯುಗಳಲ್ಲಿ ಊರಿಯೂತ ಸಮಸ್ಯೆ ಆರಂಭವಾಗುತ್ತದೆ ಎಂದು ಹಾರ್ವರ್ಡ್ ಅಧ್ಯಯನ ತಿಳಿಸಿದೆ. ಹೈ ಹೀಲ್ಸ್ ಹಾಕುವುದರಿಂದ ಪ್ಲಾಟ್ ಶೂ ಧರಿಸಿದಾಗ ಆಗುವ ಶೇ.23 ರಷ್ಟು ಹೆಚ್ಚಿನ […]

ಜಾಗ ಮಾರಬೇಕಾ? ನಿಮ್ಮ ಕನಸಿನ ಜಾಗ ಕೊಳ್ಳಬೇಕಾ?: ಇಲ್ಲಿದೆ ನೋಡಿ ಒಂದು ಭರ್ಜರಿ ಅವಕಾಶ !

ಜಾಗ, ನಿವೇಶನ, ಸಂಕೀರ್ಣಗಳನ್ನು ಮಾರಲು ಅಥವಾ ಕೊಳ್ಳುವ ಪ್ಲಾನ್ ನಲ್ಲಿದ್ದೀರಾ? ಆದರೆ ಪ್ಲಾನ್ ಅನ್ನು ಹೇಗೆ ಸಾಕಾರಗೊಳಿಸೋದು ಅಂತೇನಾದ್ರೂ ತಲೆಕೆಡಿಸಿಕೊಳ್ಳುತ್ತಿದ್ದೀರಾ? ಹಾಗಾದ್ರೆ ಇಲ್ಲಿ ಕೇಳಿ. ನಿಮ್ಮ ಯೋಜನೆ ಮತ್ತು ಯೋಚನೆಗಳನ್ನು ಉಡುಪಿಯ ತುಳುನಾಡು ಪ್ರಾಪಟೀಸ್ ಸಿಂಪಲ್ಲಾಗಿ ಪರಿಹರಿಸಿಬಿಡುತ್ತೆ. ಅದೆಷ್ಟೋ ಪ್ರಾಪರ್ಟೀಸ್ ಸರಿಯಾದ ಗ್ರಾಹಕರಿಲ್ಲದೇ ಅಥವಾ ಸರಿಯಾದ ಗ್ರಾಹಕರಿಗೆ ತಲುಪದೇ ಮಾರಾಟವಾಗದೇ ಉಳಿದಿವೆ.‌ ಮತ್ತು ಅದೆಷ್ಟೋ ಆಸ್ತಿ ಖರೀದಿದಾರರಿಗೆ ಸರಿಯಾದ ಪ್ರಾಪಟೀಸ್ ಸಿಗದೇ ಇನ್ನೂ ಆಸ್ತಿಯ ಹುಡುಕಾಟದಲ್ಲಿದ್ದಾರೆ. ಮನೆ ಬಾಡಿಗಿನಿಡಲು ಅಥವಾ ಪಡೆಯಲು, ವ್ಯವಹಾರಿಕೆ ಸ್ಥಳ ಮಾರಾಟ ಮಾಡಲು […]

ಕರ್ನಾಟಕದಲ್ಲಿ ಪವರ್ ಟಿವಿಯನ್ನು ಎರಡು ವಾರ ಮುಚ್ಚಿಸಿದ್ದು ಪತ್ರಿಕಾ ಸ್ವಾತಂತ್ರ್ಯದ ಘನತೆ ಕಾಪಾಡಿದ ಕಾರ್ಯವೇ?.: ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗನ ಭ್ರಷ್ಟಾಚಾರ ಬಿಚ್ಚಿಟ್ಟ ಪವರ್ ಟಿವಿ ಅನ್ನು ಪೊಲೀಸ್ ಬಲ ಪ್ರಯೋಗಿಸಿ ಎರಡು ವಾರ ಮುಚ್ಚಿಸಿದ್ದು ಪತ್ರಿಕಾ ಸ್ವಾತಂತ್ರ್ಯದ ಘನತೆ ಕಾಪಾಡಿದ ಕೆಲಸವೆ? ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಮುಂಬೈ ಪೊಲೀಸರು ಬುಧವಾರ ಬೆಳಗ್ಗೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿದ್ದನ್ನು ಬಿಜೆಪಿ ನಾಯಕರು ಖಂಡಿಸಿದ್ದು, ಇದಕ್ಕೆ ದಿನೇಶ್ ಗುಂಡೂರಾವ್ ಟ್ವಿಟ್ ಮೂಲಕ ತಿರುಗೇಟು ನೀಡಿದ್ದಾರೆ.

ಕಾರ್ಕಳ: ಬಾವಿಗೆ ಬಿದ್ದ ಲಾರಿ; ಚಾಲಕ ಪವಾಡ ಸದೃಶವಾಗಿ ಪಾರು

ಕಾರ್ಕಳ: ರಿವರ್ಸ್ ತೆಗೆಯುವ ವೇಳೆ ಲಾರಿಯೊಂದು ಬಾವಿಗೆ ಬಿದ್ದ ಘಟನೆ ಕಾರ್ಕಳ-ಮಂಗಳೂರು ರಸ್ತೆಯ ಭಾರತೀಯ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ಸಂಜೆ ಸಂಭವಿಸಿದೆ. ಇದು ಕಾರ್ಕಳದ ಕೃಷಿ ಉತ್ಪನ್ನ ಮಾರುಕಟ್ಟೆಯ ಲಾರಿಯಾಗಿದೆ. ಮಂಗಳೂರಿನಿಂದ ಕಾರ್ಕಳಕ್ಕೆ ಗೊಬ್ಬರ ಹೇರಿಕೊಂಡು ಬಂದಿದ್ದು, ಈ ಸಂದರ್ಭದಲ್ಲಿ ಲಾರಿ ಚಾಲಕ ಹಿಂದೆ ತೆಗೆಯುವ ವೇಳೆ ಈ ದುರ್ಘಟನೆ ನಡೆದಿದೆ. ಕೂಡಲೇ ಸ್ಥಳೀಯರು ಲಾರಿಯೊಳಗಿದ್ದ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಮಣಿಪಾಲ: ದುಷ್ಕರ್ಮಿಗಳ ತಂಡದಿಂದ ಎಕೆಎಂಎಸ್ ಬಸ್ ಮಾಲೀಕನ ಹತ್ಯೆಗೆ ವಿಫಲ ಯತ್ನ

ಮಣಿಪಾಲ: ಎಕೆಎಂಎಸ್ ಬಸ್ ಮಾಲೀಕ ಸೈಪುದ್ದೀನ್ ಹತ್ಯೆಗೆ ದುಷ್ಕರ್ಮಿಗಳ ತಂಡವೊಂದು ವಿಫಲ ಯತ್ನ ನಡೆಸಿದ ಘಟನೆ ಇಂದು ಮಣಿಪಾಲ ಲಕ್ಷ್ಮೀಂದ್ರ ನಗರದಲ್ಲಿರುವ ಎಕೆಎಂಎಸ್ ಕಚೇರಿಯಲ್ಲಿ ನಡೆದಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಕಚೇರಿಯೊಳಗೆ ಏಕಾಏಕಿಯಾಗಿ ನುಗ್ಗಿದೆ. ಈ ವೇಳೆ ಸೈಫುದ್ದೀನ್ ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ. ಆದರೆ ಅಲ್ಲಿಂದ ಆತನ ಆರೇಳು ಮಂದಿ ಸಹವರ್ತಿಗಳಿಗೆ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸೈಪುದ್ದೀನ್ ವಿರುದ್ಧ ಕೊಲೆ, ಕೊಲೆಯತ್ನ, ಜೀವಬೆದರಿಕೆ ಸಹಿತ ಹಲವಾರು ಪ್ರಕರಣಗಳು ವಿವಿಧ ಠಾಣೆಗಳಲ್ಲಿ […]