ಉಡುಪಿ: ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಥಮ ವಿಶೇಷ ಕಾರ್ಯಕಾರಿಣಿ ಸಭೆ

ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಥಮ ವಿಶೇಷ ಕಾರ್ಯಕಾರಿಣಿ ಸಭೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಇಂದು ನಡೆಯಿತು. ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷ ಗೀತಾ ವಿವೇಕಾನಂದ ಸಭೆಯನ್ನು ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕ ಲಾಲಾಜಿ ಮೆಂಡನ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ. […]

ಪ್ರಶಿಕ್ಷಣ ವರ್ಗದಿಂದ ಮೌಲ್ಯಾಧಾರಿತ ವಿಚಾರಧಾರೆಗಳ ಅನಾವರಣ: ಕುಯಿಲಾಡಿ

ಉಡುಪಿ: ಪ್ರಶಿಕ್ಷಣ ವರ್ಗದ ಮೂಲಕ ಮೌಲ್ಯಾಧಾರಿತ ವಿಚಾರಧಾರೆಗಳ ಅನಾವರಣ ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಬಿಜೆಪಿಯ ಸೂಚನೆಯಂತೆ ನ. 15ರೊಳಗೆ ಜಿಲ್ಲೆಯ ಎಲ್ಲಾ ಮಂಡಲಗಳ ವ್ಯಾಪ್ತಿಯಲ್ಲಿ ಪಕ್ಷದ ಪದಾಧಿಕಾರಿಗಳಿಗೆ ನಡೆಯಲಿರುವ ಪ್ರಶಿಕ್ಷಣ ವರ್ಗದ ಮೂಲಕದ ಹಿರಿಯರ ಮಾರ್ಗದರ್ಶನ, ಪಕ್ಷದ ಇತಿಹಾಸ, ಸಂಘಟನೆ ಮುಂತಾದ ವಿಚಾರವನ್ನು ತಿಳಿಸಬಹುದು ಎಂದರು. ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿರುವ […]

ಮಣಿಪಾಲ: ಸಿಎಂ ಹೆಸರಿನಲ್ಲಿ ಮಾಹೆಗೆ ಸಂದೇಶ ರವಾನೆ

ಮಣಿಪಾಲ: ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ಇಮೇಲ್ ಐಡಿಯನ್ನು ಸೃಷ್ಟಿಸಿ ಮಣಿಪಾಲದ ಮಾಹೆ ವಿದ್ಯಾಸಂಸ್ಥೆಗೆ ಬೆದರಿಕೆ ಸಂದೇಶ ಕಳುಹಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಿಡಿಗೇಡಿಯೊಬ್ಬ cm@karnataka.gov.in ಎಂಬ ನಕಲಿ ಖಾತೆಯನ್ನು ತೆರೆದು ಅದರ ಮೂಲಕ ನವೆಂಬರ್ 1ರಂದು ಬೆಳಿಗ್ಗೆ 4.48ಕ್ಕೆ ಮಾಹೆ ಸಂಸ್ಥೆಗೆ ಮೇಲ್‌ ಸಂದೇಶ ರವಾನಿಸಿದ್ದನು. ಈ ಬಗ್ಗೆ ಮಣಿಪಾಲದ ಮಾಹೆ ನಿರ್ದೇಶಕ ಡಾ. ನಾರಾಯಣ ಸಭಾಯಿತ್ ನೀಡಿದ ದೂರಿನಂತೆ ಸೆನ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆ (ಮಾಹೆ) ಕಾಲೇಜುಗಳನ್ನು ಆರಂಭಿಸುತ್ತಿರುವ ವಿಚಾರಕ್ಕೆ […]

ಉಡುಪಿ XPRESS ಅಮ್ಮ with ಕಂದಮ್ಮ ಫೋಟೋ ಸ್ಪರ್ಧೆ ಸೀಸನ್ 2 : ಫೋಟೋ ಕಳಿಸಿ ಬಹುಮಾನ ಗೆಲ್ಲಿ

ಕರಾವಳಿಯ ವೇಗದ ಸುದ್ದಿ ಜಾಲತಾಣ ಉಡುಪಿ XPRESS, ಕಳೆದ ವರ್ಷದಂತೆ ಈ ಸಲವೂ  ಮಕ್ಕಳ ದಿನಾಚರಣೆ ಪ್ರಯುಕ್ತ “ಅಮ್ಮ with ಕಂದಮ್ಮ” ಅನ್ನೋ ಚಂದದ ಫೋಟೋ ಸ್ಪರ್ಧೆ ಆಯೋಜಿಸಿದೆ.  ಏನ್ ಸ್ಪರ್ಧೆ? ಅಮ್ಮಂದಿರು ತಮ್ಮ ಕಂದಮ್ಮ ನ ಜೊತೆ ಮುದ್ದಾದ ಫೋಟೋ ಸೆರೆಹಿಡಿದು ಸ್ಪರ್ಧೆಗೆ ಕಳಿಸಬೇಕು. ಆಯ್ಕೆಯಾದ ಮೋಹಕ‌ ಅಮ್ಮ-ಮಗುವಿಗೆ ಬಹುಮಾನ ನಾವ್ ಕೊಡ್ತೇವೆ.  ನಿಯಮಗಳೇನು?  *ಸ್ಪರ್ಧೆಯಲ್ಲಿ 6 ವರ್ಷದೊಳಗಿನ ಮಕ್ಕಳ ಜೊತೆ ಅಮ್ಮಂದಿರು ಭಾಗವಹಿಸಬಹುದು. *ಪೋಟೋದಲ್ಲಿ ಅಮ್ಮ-ಮಗು ಮಾತ್ರವಿರಬೇಕು. ಮಗುವಿನ ಸಿಂಗಲ್ ಫೋಟೋ, ಫ್ಯಾಮಿಲಿ ಫೋಟೋ […]

ಕರ್ನಾಟಕದಲ್ಲಿ ‘ಲವ್ ಜಿಹಾದ್’ ತಡೆಗೆ ಶೀಘ್ರ ಕಾನೂನು ಜಾರಿಗೆ ತರಲಾಗುವುದು: ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ‘ಲವ್ ಜಿಹಾದ್’ ಗೆ ಕಡಿವಾಣ ಹಾಕಲು ಶೀಘ್ರ ಕಾನೂನು ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ರಾಜ್ಯಗಳಲ್ಲಿ ಲವ್ ಜಿಹಾದ್ ಗೆ ಸಂಬಂಧಿಸಿ ಕೈಗೊಂಡ ನಿರ್ಧಾರಗಳ ಆಧಾರದ ಮೇಲೆ ನಾವು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಇತ್ತೀಚಿನ ದಿನಗಳಲ್ಲಿ ಮತಾಂತರ ಮಾಡಲು ಕೆಲವು ಶಕ್ತಿಗಳು ಸಂಘಟಿತವಾಗಿ ಯುವಕರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಹಾಗಾಗಿ ಈಗಿರುವ ಕಾನೂನು ಅಲ್ಲದೇ, ವಿಶೇಷ ಕಾನೂನು ಜಾರಿಗೆ […]