ಹುಡುಗಿಯರೇ ನೀವು ಹೈ ಹೀಲ್ಸ್ ಪ್ರಿಯರೇ? ಹಾಗಾದ್ರೆ ಜಾಗ್ರತೆ ಮಾಡಿ, ಯಾಕಂದ್ರೆ!

ಹೈ ಹೀಲ್ಸ್ ಎಂದರೆ ಬಹುತೇಕ ಹುಡುಗಿಯರಿಗೆ ಅಚ್ಚುಮೆಚ್ಚು.ಹೈಟ್ ಆಗಿ ಕಾಣಬೇಕು,ಸ್ಟೈಲಿಶ್ ಆಗಿ ಕಾಣಬೇಕು ಎನ್ನುವ ಕಾರಣಗಳಿಗೆ ಹೈ ಹೀಲ್ಸ್ ಧರಿಸುವವರು ಜಾಸ್ತಿ.ಆದರೆ  ಯಾವಾಗಲು ಹೈ ಹೀಲ್ಸ್ ಹಾಕುವುದರಿಂದ ಮಾಸಖಂಡಗಳಿಗೆ ಅಧಿಕ ಒತ್ತಡ ಬಿದ್ದು ಗಾಯಗಳಾಗುವ ಸಾಧ್ಯತೆಯಿದೆ.  ಹೈ ಹೀಲ್ಸ್ ಧರಿಸುವುದರಿಂದ ನಿಮ್ಮ ಪಾದ ಮತ್ತು ಸುತ್ತಮುತ್ತಲಿನ ಸ್ನಾಯುಗಳು ಘಾಸಿಕೊಳ್ಳುವ ಸಾಧ್ಯತೆಯಿದೆ, ಇದರಿಂದ ಸ್ನಾಯುಗಳಲ್ಲಿ ಊರಿಯೂತ ಸಮಸ್ಯೆ ಆರಂಭವಾಗುತ್ತದೆ ಎಂದು ಹಾರ್ವರ್ಡ್ ಅಧ್ಯಯನ ತಿಳಿಸಿದೆ.

ಹೈ ಹೀಲ್ಸ್ ಹಾಕುವುದರಿಂದ ಪ್ಲಾಟ್ ಶೂ ಧರಿಸಿದಾಗ ಆಗುವ ಶೇ.23 ರಷ್ಟು ಹೆಚ್ಚಿನ ಒತ್ತಡ  ಒಳ ಮೊಣಕಾಲಿನ ಮೇಲೆ ಬೀಳುತ್ತದಂತೆ.

ಹೈ ಹೀಲ್ಸ್ ಧರಿಸುವುದರಿಂದ ಉಂಟಾಗುವ ಸಮಸ್ತೆಗಳನ್ನು ನಿವಾರಿಸಲು ಫಿಸಿಯೋಥೆರಪಿಸ ಅಲ್ಚ್ರಾ ಸೌಂಡ್, ವ್ಯಾಕ್ಸ್ ಬಾತ್  ಲೇಸರ್ ಥೆರಪಿ , ಫುಟ್ ಬಾತ್ ಮುಂತಾದ ಚಿಕಿತ್ಸೆಗಳೊಳಾಗಬೇಕಾಗುತ್ತದೆ ಎಂದು ಅಧ್ಯಯನ ಎಚ್ಚರಿಸಿದೆ.

ಊತ ಕಾಣಿಸಿಕೊಂಡ ಜಾಗದಲ್ಲಿ ಕೋಲ್ಡ್ ಪ್ಯಾಕ್ ಹಾಕಿಕೊಳ್ಳಬೇಕು, ಪಾದಗಳ ಮಸಾಜ್ ಮಾಡಿಸಿಕೊಳ್ಳುವುದರಿಂದ ನೋವಿನಿಂದ ರಿಲೀಫ್ ಪಡೆಯಬಹುದು.