ದುಷ್ಕರ್ಮಿಗಳಿಂದ ಫೋಟೋಗ್ರಾಫರ್ ಮೇಲೆ ತಲವಾರಿನಿಂದ ದಾಳಿ

ಮಂಗಳೂರು: ಸ್ಟುಡಿಯೋ‌ ಒಂದರೊಳಗೆ ಏಕಾಏಕಿಯಾಗಿ ನುಗ್ಗಿದ ದುಷ್ಕರ್ಮಿಗಳು ಸ್ಟುಡಿಯೋ ಮಾಲೀಕನಿಗೆ ಲಾಂಗ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಎಂಬಲ್ಲಿ ಇಂದು ನಡೆದಿದೆ. ಫರಂಗಿಪೇಟೆಯ ಆಶಾ ಸ್ಟುಡಿಯೋ ಮಾಲೀಕ, ಫೊಟೋಗ್ರಾಫರ್ ದಿನೇಶ್ ಕೊಟ್ಟಿಂಜ ಎಂಬುವವರು ದುಷ್ಕರ್ಮಿಗಳಿಂದ ಹಲ್ಲೆಗೊಳಗಾದವರು. ಇಂದು ರಾತ್ರಿ 8 ಗಂಟೆಯ ಸುಮಾರಿಗೆ ಸ್ಟುಡಿಯೋ ಒಳಗೆ ನುಗ್ಗಿದ ದುಷ್ಕರ್ಮಿಗಳ ತಂಡವು ದಿನೇಶ್ ಅವರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ್ದು, ಇದರಿಂದ ದಿನೇಶ್ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ […]

ಅಮಾಸೆಬೈಲು: ಟಾಟಾ ಸುಮೋದಲ್ಲಿ ಅಕ್ರಮ ಗೋ ಸಾಗಾಟ; ಓರ್ವನ ಬಂಧನ, ನಾಲ್ಕು ಗೋವುಗಳ ರಕ್ಷಣೆ

ಅಮಾಸೆಬೈಲು: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಟಾಟಾ ಸುಮೋ‌ ಕಾರೊಂದನ್ನು ಅಡ್ಡಹಾಕಿದ ಪೊಲೀಸರು ಓರ್ವ ಆರೋಪಿ ಬಂಧಿಸಿ, ನಾಲ್ಕು ಜಾನುವಾರಗಳನ್ನು ರಕ್ಷಣೆ ಮಾಡಿದ ಘಟನೆ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ರಟ್ಟಾಡಿ ರಟ್ಟೇಶ್ವರ ದೇವಸ್ಥಾನದ ಬಳಿ ನಡೆದಿದೆ. ಭಟ್ಕಳ ನಿವಾಸಿ ಜಿಶಾಂತ್ ಬಂಧಿತ ಆರೋಪಿ. ಅಮಾಸೆಬೈಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಿಲ್ ಕುಮಾರ್ ಟಿ.ಎನ್. ಅವರು ಅ. 27 ರಂದು ರಾತ್ರಿ ರೌಂಡ್ಸ್ ನಲ್ಲಿ ಇದ್ದಂತಹ ಸಂದರ್ಭದಲ್ಲಿ ರಟ್ಟಾಡಿ ಕಡೆಯಿಂದ ಅಮಾಸೆಬೈಲು ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ […]

ಕಾಪು ಪುರಸಭೆ: ನೂತನ ಅಧ್ಯಕ್ಷರಾಗಿ ಬಿಜೆಪಿಯ ಅನಿಲ್ ಕುಮಾರ್, ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಮಾಲಿನಿ ಆಯ್ಕೆ

ಕಾಪು: ಕಾಪು ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಅನಿಲ್ ಕುಮಾರ್ ಕಾಪು ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಮಾಲಿನಿ ಅವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಅನಿಲ್ ಕುಮಾರ್, ಕಾಂಗ್ರೆಸ್ ನಿಂದ ಶಾಬು ಸಾಹೇಬ್ ಸ್ಪರ್ಧೆ ನಡೆಸಿದ್ದರು. 23 ಸದಸ್ಯ ಬಲದ ಕಾಪು ಪುರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿಯ 11 ಮಂದಿ ಸದಸ್ಯರಿದ್ದಾರೆ. ಸಂಸದರು ಮತ್ತು ಶಾಸಕರ ಮತ ಸೇರಿ ಬಿಜೆಪಿಗೆ ಬಹುಮತ ಲಭಿಸಿದೆ. ಇಂದು ಪುರಸಭೆಯಲ್ಲಿ ನಡೆದ ಚುನಾವಣೆಯಲ್ಲಿ 13 ಮತಗಳೊಂದಿಗೆ ಅನಿಲ್ ಕುಮಾರ್ ಅಧ್ಯಕ್ಷರಾಗಿ […]

ಎಡನೀರು ಮಠದ ಉತ್ತರಾಧಿಕಾರಿಯಾಗಿ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪೀಠಾರೋಹಣ: ರಾಜ್ಯ ಸರ್ಕಾರದಿಂದ ಗೌರವ ಸಮರ್ಪಣೆ

ಉಡುಪಿ: ಕಾಸರಗೋಡಿನ ಸಮೀಪದ ಪ್ರಾಚೀನ‌ಧರ್ಮಪೀಠ ಶ್ರೀ ಎಡನೀರು ಮಠದ ನೂತನ ಉತ್ತರಾಧಿಕಾರಿಯಾಗಿ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪೀಠಾರೋಹಣ ಸಮಾರಂಭ ಬುಧವಾರ ಮಠದಲ್ಲಿ ವೈಭವದಿಂದ ನೆರವೇರಿತು. ಶ್ರೀಕಂಚಿ ಮಠದ ವೈದಿಕರ ಹಾಗೂ ಶ್ರೀ ಮಠದ ವೈದಿಕರ ನೇತೃತ್ವದಲ್ಲಿ ವಿವಿಧ ಯಾಗ ಹೋಮ ಸಹಿತ ಧಾರ್ಮಿಕ ವಿಧಿವಿಧಾನಗಳು ಜರಗಿತು. ಬಳಿಕ ವೇದಘೋಷ ವಾದ್ಯಗಳ ಸಹಿತ ಶ್ರೀಗಳವರ ಪೀಠಾರೋಹಣ ಪಟ್ಟಾಭಿಷೇಕ ಸಮಾರಂಭ ನೆರವೇರಿತು. ಶ್ರೀಕ್ಷೇತ್ರ ಧರ್ಮಸ್ಥಳ, ಪೇಜಾವರ ಮಠ ಸಹಿತ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ವಿವಿಧ ಮಠ ಸಂಸ್ಥಾನಗಳ ವತಿಯಿಂದ […]

ಉಡುಪಿ: ಗಾಂಜಾ ಸಾಗಾಟ, ಮಾರಾಟ ಆರೋಪಿಗಳ ಪರೇಡ್

ಉಡುಪಿ: ಜಿಲೆಯಲ್ಲಿ ಮಾದಕವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಪರೇಡ್ ಇಂದು ಉಡುಪಿಯ ಚಂದು ಮೈದಾನದಲ್ಲಿ ನಡೆಯಿತು. ಪರೇಡ್ ಉದ್ದೇಶಿಸಿ ಮಾತನಾಡಿದ ಎಸ್ಪಿ ಎನ್. ವಿಷ್ಣುವರ್ಧನ ಅವರು, ಮಾದಕವಸ್ತು ಮಾರಾಟ, ಬಳಕೆಯಂತಹ ಸಮಾಜದ್ರೋಹಿ ಕೃತ್ಯಗಳಲ್ಲಿ ಭಾಗವಹಿಸದೆ, ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಉತ್ತಮವಾಗಿ ಜೀವನ ನಡೆಸಬೇಕೆಂದು ಆರೋಪಿಗಳಿಗೆ ಕರೆ ನೀಡಿದರು. ಇನ್ಮುಂದೆ ಇಂತಹ ಪ್ರವೃತ್ತಿಗಳನ್ನು ಮುಂದುವರಿಸಿಕೊಂಡು ಹೋದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಟಿ.ಆರ್. ಜೈಶಂಕರ್, ಸಶಸ್ತ್ರ […]