ಎಳ್ಳಾರೆ-ಹೊಯ್ಗೆಜಡ್ಡು ಉಳಿದ ರಸ್ತೆ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭ:ಗ್ರಾ.ಪಂ. ಅಧ್ಯಕ್ಷ

ಉಡುಪಿ: ಕಳೆದ ಒಂದು ತಿಂಗಳಿಂದ ಎಳ್ಳಾರೆ ಗ್ರಾಮದಲ್ಲಿ ಬ್ಯಾನರ್ ಗಳನ್ನು ಕಟ್ಟಿ ಗ್ರಾಮದಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ. ಇದು ರಾಜಕೀಯ ಪ್ರೇರಿತವಾದುದು.  ಎಳ್ಳಾರೆ-ಹೊಯ್ಗೆಜಡ್ಡುವಿನಲ್ಲಿ ಈಗಾಗಲೇ 20ಲಕ್ಷದ ಕಾಂಕ್ರೀಟಿಕರಣ ಕಾಮಗಾರಿ ನಡೆದಿದ್ದು, ಇನ್ನುಳಿದ ರಸ್ತೆಗೆ 60ಲಕ್ಷ ಅನುದಾನವು ಸರ್ಕಾರದ ಪ್ರಸ್ತಾವನೆಯಲ್ಲಿ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗುವುದು. ಗ್ರಾಮ ಪಂಚಾಯತಿಯ ಅನುಮತಿಯಿಲ್ಲದೆ ರಾತ್ರಿವೇಳೆ ಬ್ಯಾನರ್ ಕಟ್ಟುವುದು, ಹಾಗೂ ಚುನಾವಣೆ ಹತ್ತಿರದಲ್ಲಿ ಸಂವಿಧಾನದಾನದ ವಿರುದ್ಧವಾಗಿ ಮತದಾನ ಬಹಿಷ್ಕಾರ ಮಾಡಬೇಕು ಎಂದು ಗ್ರಾಮಸ್ಥರನ್ನು ಪ್ರೇರೇಪಿಸುವುದನ್ನು ನಾವು ಖಂಡಿಸುತ್ತೇವೆ ಎಂದು ಗ್ರಾ.ಪಂ. ಕಡ್ತಲ ನಿಕಟಪೂರ್ವ […]

ಕಾರ್ಕಳದ ಖ್ಯಾತ ವಕೀಲ ಎಂ.ಕೆ. ವಿಜಯಕುಮಾರ್ ಸೇರಿದಂತೆ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

  ಎಂ.ಕೆ. ವಿಜಯ ಕುಮಾರ್ ಕಾರ್ಕಳ ಬೆಂಗಳೂರು: ಖ್ಯಾತ ವಕೀಲ ಕಾರ್ಕಳದ ಎಂ.ಕೆ. ವಿಜಯ ಕುಮಾರ್ ಹಾಗೂ ಅನಿವಾಸಿ ಉದ್ಯಮಿ ಮಣೆಗಾರ್ ಮೀರಾನ್ ಸಾಹೇಬ್ ಶಿರೂರು ಸೇರಿದಂತೆ 65 ಮಂದಿಗೆ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ. ಮಣೆಗಾರ್ ಮೀರಾನ್ ಸಾಹೇಬ್ ಶಿರೂರು ಪ್ರಶಸ್ತಿ ಪಡೆದ ಪ್ರಮುಖರು: ಸಾಹಿತ್ಯ: ಪ್ರೊ.ಸಿ.ಪಿ.ಸಿದ್ಧಾಶ್ರಮ (ಧಾರವಾಡ), ವಿ.ಮುನಿವೆಂಕಟಪ್ಪ (ಕೋಲಾರ), ರಾಮಣ್ಣ ಬ್ಯಾಟಿ (ಗದಗ), ವಲೇರಿಯನ್ ಡಿಸೋಜ (ವಲ್ಲಿವಗ್ಗ), ಡಿ.ಎನ್.ಅಕ್ಕಿ (ಯಾದಗಿರಿ). ಸಂಗೀತ: ಹಂಬಯ್ಯ ನೂಲಿ (ರಾಯಚೂರು), ಅನಂತ ತೇರದಾಳ (ಬೆಳಗಾವಿ), ಬಿ.ವಿ.ಶ್ರೀನಿವಾಸ್ […]

ಉಡುಪಿ: ಚಂದ್ರನ ಮೇಲೆ ಹಾದುಹೋದ ವಿಮಾನ

ಉಡುಪಿ: ಕುಂಭರಾಶಿಯ τ-Aqr (ಟೌ – ಎಕ್ವೆರೀ) ನಕ್ಷತ್ರವನ್ನು ಮುಚ್ಚುವ ಆಚ್ಛಾದನೆ (ಒಕಲ್ಟೇಷನ್ ) ಪ್ರಕ್ರಿಯೆ ಸಂದರ್ಭದಲ್ಲಿ ಚಂದ್ರನ ಮುಂದೆ ವಿಮಾನವೊಂದು ಹಾದುಹೋದ ದೃಶ್ಯವನ್ನು ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ಸೆರೆ ಹಿಡಿದ್ದಾರೆ.   ಅ.26ರ ಸಂಜೆ 7.29ರ ಹೊತ್ತಿಗೆ ಚಂದ್ರ ಕುಂಭರಾಶಿಯ ನಕ್ಷತ್ರವನ್ನು ಮುಚ್ಚುವ ಆಚ್ಛಾದನೆ (ಒಕಲ್ಟೇಷನ್ ) ಪ್ರಕ್ರುಯೆ ನಡೆಯಿತು. 317 ಜ್ಯೋತಿರ್ವರ್ಷ ದೂರದಲ್ಲಿ ಇರುವ, ನಮ್ಮ ಸೂರ್ಯನ ವ್ಯಾಸಕ್ಕಿಂತ 4 ಪಟ್ಟು ಹೆಚ್ಚಿನ ಈ ನಕ್ಷತ್ರ ಬಹಳ […]

ತನ್ನ ಎಮೋಷನಲ್ ಕತೆ ಹೇಳಿ ಕುಡ್ಲ ಕಾಡಿಸಿದ ಮದ್ವೆ ಹುಡ್ಗಿ:ಎಲ್ಲೆಲ್ಲೂ ವೈರಲ್ ಆಯ್ತು”ಎನ್ನ ಕುಡ್ಲ”

ಯಾವುದೇ ಊರಿನ ಹುಡುಗಿಯಾಗಲಿ, ಮದುವೆಯ ಸಂದರ್ಭದಲ್ಲಿ ಒಂದೂರನ್ನು ಬಿಟ್ಟು ಗಂಡನ ಊರನ್ನು ಹಿಡಿಯುವ ಪ್ರಸಂಗ ಬರುತ್ತದೆ.ತಾವು ಹುಟ್ಟಿ ಬೆಳೆದ, ಆಟವಾಡಿ ಸಂಭ್ರಮಪಟ್ಟ,ಮೋಜು ಮಸ್ತಿ ಮಾಡಿದ ಊರನ್ನು ಬಿಟ್ಟು ಮತ್ತೊಂದು ಊರಿನ ದಾರಿ ಹಿಡಿಯುವಾಗ ಆಗುವ ನೋವು, ಬೇಸರ ವರ್ಣಿಸಲು ಸಾಧ್ಯವಿಲ್ಲ. ಇಲ್ಲೊಂದು ಎಮೋಷನಲ್ ವಿಡಿಯೋ ಇದೆ ನೋಡಿ. ಈ ವಿಡಿಯೋದಲ್ಲಿ ಮದುವೆಯಾಗುವ ಹುಡುಗಿ ತಾನು ಹುಟ್ಟಿ ಬೆಳೆದ ಮಂಗಳೂರನ್ನು ಬಿಟ್ಟು ಬೇರೆ ಊರಿಗೆ ಹೋಗುವ ಮೊದಲು, ತನ್ನನ್ನು ಬೆಳೆಸಿದ ಮಂಗಳೂರು ಹೇಗಿತ್ತು? ಮಂಗಳೂರು ತನ್ನ ಬದುಕಿಗೆ ಏನೇನೆಲ್ಲ […]

ಮಂಗಳೂರು: ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ; ₹32.96 ಲಕ್ಷ ಮೌಲ್ಯದ ಚಿನ್ನ ವಶ

ಮಂಗಳೂರು: ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ಪ್ರಯಾಣಿಕನೊಬ್ಬನನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆತನಿಂದ ₹32,96,800 ಮೌಲ್ಯದ 634 ಗ್ರಾಂ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನ ಅಬೂಬಕರ್ ಸಿದ್ದೀಕ್ ಬಂಧಿತ ಆರೋಪಿ. ಈತ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದನು ಎಂದು ತಿಳಿದುಬಂದಿದೆ. ಆರೋಪಿ ಪೌಡರ್ ರೂಪದ ಚಿನ್ನವನ್ನು ದೇಹಕ್ಕೆ ಅಂಟಿಸಿಕೊಂಡು ಅಕ್ರಮ ಸಾಗಾಟಕ್ಕೆ‌ ಮುಂದಾಗಿದ್ದನು ಎಂದು ತಪಾಸಣೆ ವೇಳೆ ಗೊತ್ತಾಗಿದೆ.