ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾಗೆ ವಿಶ್ರಾಂತಿ, ಕೆ.ಎಲ್. ರಾಹುಲ್ ಗೆ ಉಪನಾಯಕ ಪಟ್ಟ

ಮುಂಬೈ: ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಆಸ್ಟ್ರೇಲಿಯಾ ಪ್ರವಾಸಕ್ಕೆ ಇದೀಗ ಬಿಸಿಸಿಐ ಟೀಂ ಇಂಡಿಯಾ ಪ್ರಕಟಿಸಿದೆ. ಡಿಸೆಂಬರ್ 3 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಬಳಿಕ ಮೂರು ಟಿ ಟ್ವೆಂಟಿ ಹಾಗೂ ಮೂರು ಏಕದಿನ ಪಂದ್ಯಗಳನ್ನು ಭಾರತ ಆಡಲಿದೆ. ಇಂಜುರಿ ಸಮಸ್ಯೆಗೆ ಒಳಗಾಗಿರುವ ರೋಹಿತ್ ಶರ್ಮಾಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಗೆ ಉಪನಾಯಕ ಪಟ್ಟ ನೀಡಲಾಗಿದೆ. ರಾಹುಲ್ ಟಿ20 ಜತೆಗೆ ಏಕದಿನ ತಂಡಕ್ಕೂ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಟೆಸ್ಟ್ ತಂಡದ ಉಪನಾಯಕ ಪಟ್ಟ ಎಂದಿನಂತೆ ಅಜಿಂಕ್ಯ […]

ನಿತೀಶ್ ಕುಮಾರ್ ಗೆ ಜೈಲೇ ಸೂಕ್ತ ಜಾಗ: ಚಿರಾಗ್ ಪಾಸ್ವಾನ್ ಆರೋಪ

ಪಟ್ನಾ: ಐದು ವರ್ಷಗಳ ನಿತೀಶ್ ಕುಮಾರ್ ಆಳ್ವಿಕೆಯಲ್ಲಿ ಬಿಹಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಅವರಿಗೆ ಜೈಲೇ ಸೂಕ್ತವಾದ ಸ್ಥಳ ಎಂದು ಲೋಕ ಜನಶಕ್ತಿ ಪಕ್ಷದ (ಎಲ್‍ಜೆಪಿ) ನಾಯಕ ಚಿರಾಗ್ ಪಾಸ್ವಾನ್ ಆರೋಪ ಮಾಡಿದರು. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮತ್ತೆ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಮೊದಲ ಹಂತದ ಚುನಾವಣೆಗೆ ಕೆಲವೇ ದಿನ ಬಾಕಿ ಇರುವಾಗ ನಿತೀಶ್ ವಿರುದ್ಧ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಚಿರಾಗ್, ನಿತೀಶ್ ಕುಮಾರ್ […]

ಕೆಥೊಲಿಕ್ ಸಭಾ ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಿದೆ: ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಸಂಘಟನೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಕೆಲಸವನ್ನು ಕೆಥೊಲಿಕ್ ಸಭಾ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ  ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಭಾನುವಾರ ಉಡುಪಿ ಶೋಕ ಮಾತಾ ಇಗರ್ಜಿಯ ಸಭಾಂಗಣದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕೆಥೊಲಿಕ್ ಸಭಾ ಸಂಘಟನೆ ಕಳೆದ ಎಂಟು ವರ್ಷಗಳಿಂದ ಸಮಾಜದಲ್ಲಿ ಉತ್ತಮ ಸೇವೆಯನ್ನು ನೀಡಿಕೊಂಡು ಬಂದಿದ್ದು ದೇಶದಲ್ಲಿಯೇ ಮಾದರಿಯಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಂಘಟನೆ ನೀಡಿದ […]

ಎಡನೀರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸನ್ಯಾಸ ದೀಕ್ಷೆ ಸ್ವೀಕಾರ

ಕಾಸರಗೋಡು: ಸುಮಾರು 1300ಕ್ಕೂ ಅಧಿಕ ವರ್ಷಗಳ ಸುದೀರ್ಘ ಇತಿಹಾಸ ಇರುವ ದೇಶದ ಪ್ರಾಚೀನ ಗುರುಪೀಠ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ತೋಟಕಾಚಾರ್ಯ ಪರಂಪರೆಯ ಶ್ರೀ ಎಡನೀರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಜಯರಾಮ ಮಂಜತ್ತಾಯರು (ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು) ಸೋಮವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಉತ್ತರಾಧಿಕಾರಿಯಾಗಿ ಅವರು ಪೀಠಾರೋಹಣಗೈದರು. ತಮಿಳುನಾಡಿನ ಕಾಂಚಿ ಕಾಮಕೋಟಿ ಸನ್ನಿಧಿಯಲ್ಲಿ ಸೋಮವಾರ ಮುಂಜಾನೆ ಕಾಂಚಿ ಕಾಮಕೋಟಿಯ ಪೀಠಾಧಿಪತಿಗಳಾದ ಶ್ರೀ ವಿಜಯೇಂದ್ರ ಸರಸ್ವತೀ […]

ಹಿರಿಯಡಕ: ಇಲಿ ಪಾಷಾಣ ಬೆರೆಸಿಟ್ಟಿದ್ದ ಪಪ್ಪಾಯಿ ಹಣ್ಣುತಿಂದು ಮಹಿಳೆ ಸಾವು

ಉಡುಪಿ: ಇಲಿಗಳ ಹಾವಳಿ ತಡೆಯಲು ಪಪ್ಪಾಯಿ ಹಣ್ಣಿನಲ್ಲಿ ಬೆರೆಸಿಟ್ಟಿದ್ದ ಇಲಿ ಪಾಷಾಣ ತಿಂದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕುದಿ ಗ್ರಾಮದ ದೇವರಗುಂಡದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಉಡುಪಿ ಕುದಿ ಗ್ರಾಮದ ದೇವರಗುಂಡ ನಿವಾಸಿ ಶ್ರೀಮತಿ (43) ಎಂದು ಗುರುತಿಸಲಾಗಿದೆ. ಮಹಿಳೆಯ ಮನೆಯ ಹಿಂಬದಿಯಲ್ಲಿ ಗೇರುಬೀಜ ಕಾರ್ಖಾನೆ ಇದ್ದು, ಅಲ್ಲಿ ಇಲಿಯ ನಿಯಂತ್ರಣಕ್ಕಾಗಿ ಪಪ್ಪಾಯಿ ಹಣ್ಣಿನಲ್ಲಿ ಇಲಿ ಪಾಷಾಣ ಇಟ್ಟಿದ್ದರು. ಅ. 19ರಂದು ಶ್ರೀಮತಿ ಅವರು ಕಣ್ತಪ್ಪಿನಿಂದ ಈ ಹಣ್ಣನ್ನು ತಿಂದಿದ್ದು, ಮರುದಿನ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಹೀಗಾಗಿ […]