ವ್ಹಾವ್ ಎಷ್ಟ್ ಚೆಂದ ಚಿತ್ರ ಬಿಡಿಸ್ತಾಳೆ ಈ ಯುವತಿ: ಬೆರಗಿನ ಕೈಗಳ ಚಿತ್ರಗಾರ್ತಿ ಕಾರ್ಕಳದ ಜ್ಯೋತ್ಸ್ನಾ ಶೆಣೈ
ಕಲ್ಪನೆಗೆ ರಂಗುರಂಗಿನ ಬಣ್ಣ ತುಂಬಿ ಅದ್ಬುತ ಕಲಾಕೃತಿ ಮೂಡಿಸುವ ಯುವ ಕಲಾವಿದೆ ಕಾರ್ಕಳದ ಜ್ಯೋತ್ಸ್ಯಾ ಶೆಣೈ. ಇವರ ಕೈಯಲ್ಲರಳಿದ ಚಿತ್ರದಲ್ಲಿ ಬೆರಗಿದೆ, ವ್ಹಾವ್ ಅಂತ ಅನ್ನಿಸುವ ಸೊಗಸಿದೆ, ಸೃಜನಶೀಲ ಕುಸುರಿ, ಮುಗ್ದತೆ, ಜೀವನಪ್ರೀತಿ ಎಲ್ಲವೂ ಇವರ ಕಲಾಕೃತಿಗಳಲ್ಲಿ ಕಾಡುತ್ತದೆ. ಜ್ಯೋತ್ಸ್ಯಾ ಶೆಣೈ ಮೂಲತಃ ಕಾರ್ಕಳದವರು, ಕಾರ್ಕಳ ಆರ್.ಸುರೇಶ್ ಶೆಣೈ, ಆರ್.ಸುಜಾತಾ ಶೆಣೈ ದಂಪತಿಯ ಪುತ್ರಿ. ಸದ್ಯ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರೋ ಜ್ಯೋತ್ಸ್ಯಾಗೆ ಬಾಲ್ಯದಿಂದಲೂ ಚಿತ್ರ ಬರೆಯೋದು ನೆಚ್ಚಿನ ಆಸಕ್ತಿ. https://m.facebook.com/story.php?story_fbid=750967682370108&id=329044147895799 […]