ರಾಮಮಂದಿರ ನಿರ್ಮಾಣ ವಿಚಾರ: ನ. 10, 11ರಂದು ದೆಹಲಿಯಲ್ಲಿ ಸಂತ ಸಮಾವೇಶ: ಪೇಜಾವರ ಶ್ರೀ

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ರಾಮಮಂದಿರ ನಿರ್ಮಾಣ ಟ್ರಸ್ಟ್ ನ ಜಂಟಿ ನೇತೃತ್ವದಲ್ಲಿ ನವೆಂಬರ್ 10 ಮತ್ತು 11 ರಂದು ಎರಡು ದಿನಗಳ ಕಾಲ ದೆಹಲಿಯಲ್ಲಿ ಸಂತ ಸಮಾವೇಶ ನಡೆಯಲಿದೆ ಎಂದು ರಾಮಮಂದಿರ ನಿರ್ಮಾಣ ಟ್ರಸ್ಟ್ ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ನೀಲಾವರ ಗೋಶಾಲೆಯಲ್ಲಿರುವ ಪೇಜಾವರ ಶಾಖಾ ಮಠದಲ್ಲಿ ಶ್ರೀಪಾದರು ಇಂದು ಸುದ್ದಿಗಾರರಿಗೆ ತಿಳಿಸಿದರು. ಈ ಸಮಾವೇಶದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ಬಗ್ಗೆ […]

ಕೊರೊನಾ ಸಂಹಾರ ಮಾಡುವ ನವದುರ್ಗೆ:ವೈರಲ್ ಆಗ್ತಿದೆ ಈ ಫೋಟೋ

ಎಲ್ಲೆಡೆ ನವರಾತ್ರಿಯ ಸಂಭ್ರಮ ಕಳೆಗಟ್ಟಿದೆ.ಕೊರೋನಾ ಕಾಲದಲ್ಲಿಯೂ ಜನರ ಸಂಭ್ರಮಕ್ಕೆ ತೊಂದರೆಯಾಗದೇ ಎಲ್ಲರೂ ನವರಾತ್ರಿ ಹಬ್ಬವನ್ನು ಆಚರಿಸುತ್ತಲೇ ಇದ್ದಾರೆ. ನವರಾತ್ರಿಯ ನವದುರ್ಗೆಯರ ಕೃಪೆಯಿಂದ, ಆರಾಧನೆಯಿಂದ ಕೊರೋನಾ ಅನ್ನೋ ಭೂತ ತೊಗಲಲಿ ಎನ್ನುವ ಪ್ರಾರ್ಥನೆ ಎಲ್ಲ ಕಡೆ ನಡೆಯುತ್ತಿದೆ.ನವದುರ್ಗೆ ಕೊರೋನಾವನ್ನು ಮಟ್ಟ ಹಾಕುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದ್ದು ಸಖತ್ ಸದ್ದು ಮಾಡ್ತಿದೆ.ಯಸ್ ಬೆಳ್ತಂಗಡಿಯ ಯುವ ಕಲಾವಿದೆ ಪೂರ್ಣಿಮಾ ಪೆರ್ಗಣ್ಣ ಅವರು ಶಕ್ತಿ ಸ್ವರೂಪಿಣಿ ನವದುರ್ಗೆಯ ವೇಷ ಧರಿಸಿ ಕೊರೋನಾ ಸಂಹಾರ ಮಾಡುವ ಮತ್ತು ಕೊರೋನಾಗೆ ವಿದಾಯ […]

ಉಡುಪಿ: ಕೊಳಲಗಿರಿಯ ಯುವತಿ ಅನುಮಾನಸ್ಪದವಾಗಿ ಸಾವು; ಪ್ರಿಯಕರ ನಾಪತ್ತೆ

ಉಡುಪಿ: ಪ್ರಿಯಕರನೊಬ್ಬ ಅಸ್ವಸ್ಥಗೊಂಡ ತನ್ನ ಪ್ರೇಯಸ್ಸಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾಗಿದ್ದು, ಇದೀಗ ಆ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಕೊಳಲಗಿರಿ ನಿವಾಸಿ ರಕ್ಷಿತಾ ನಾಯಕ್ ಮೃತಪಟ್ಟ ಯುವತಿ. ಈಕೆಯನ್ನು ಪ್ರಿಯಕರ ಜಡ್ಕಲ್ ಮೂಲದ ಪ್ರಶಾಂತ್ ಆಸ್ಪತ್ರೆ ತಂದು ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ. ಶನಿವಾರ ತಡರಾತ್ರಿ ಪ್ರಶಾಂತ್ ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಕ್ಷಿತಾಳನ್ನು ನಗರದ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದನು. ಅಲ್ಲದೆ, ಈ ವಿಚಾರವನ್ನು ರಕ್ಷಿತಾಳ ಮನೆಯವರಿಗೂ ತಿಳಿಸಿದ್ದನು. ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಬಳಿಕ ಮೊಬೈಲ್ ಸ್ವಿಚ್ […]

ಗಡಿ ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸುವುದೇ ಭಾರತದ ಆಶಯ: ರಾಜನಾಥ್ ಸಿಂಗ್

ಡಾರ್ಜಿಲಿಂಗ್: ಆಯುಧ ಪೂಜೆಯ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಯುದ್ಧ ಟ್ಯಾಂಕರ್, ಸೇನಾ ವಾಹನ ಸೇರಿದಂತೆ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದರು. ಡಾರ್ಜಿಲಿಂಗ್​ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕ ಬಳಿ ತೆರಳಿ ರಾಜನಾಥ್​ಸಿಂಗ್ ಹುತಾತ್ಮರಿಗೆ  ಗೌರವ ಸಲ್ಲಿಸಿದರು. ಚೀನಾ ಜೊತೆಗಿನ ಗಡಿ ಸಂಘರ್ಷ ಶಾಂತಿಯುತವಾಗಿ ಬಗೆಹರಿಯಬೇಕು ಎಂಬುದು ಭಾರತ ಆಶಯ. ಭಾರತ ಒಂದೇ ಒಂದು ಇಂಚು ಭೂಮಿಯನ್ನೂ ಚೀನಾ ಆಕ್ರಮಿಸಲು ನಾವು  ಬಿಡುವುದಿಲ್ಲ. ನಿಮ್ಮಂತಹ ಧೈರ್ಯಶಾಲಿ ಯೋಧರಿಂದಾಗಿ ನಮ್ಮ ದೇಶದ ಗಡಿ […]

ಕಾಬುಲ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಮಕ್ಕಳು ಸಹಿತ 30 ಮಂದಿ ಸಾವು

ಕಾಬುಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನಲ್ಲಿ ಶಿಕ್ಷಣ ಸಂಸ್ಥೆಯ ಬಳಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಮಕ್ಕಳು ಸೇರಿದಂತೆ 30 ಮಂದಿ ಮೃತಪಟ್ಟಿದ್ದಾರೆ. 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆತ್ಮಾಹುತಿ ದಾಳಿಕೋರರು ಕಾಬೂಲ್‌ನ ಪಶ್ಚಿಮ ದಶ್-ಎ-ಬಾರ್ಚಿ ನೆರೆಹೊರೆಯ ಪುಲ್-ಎ-ಖೋಷ್ಕ್ ಪ್ರದೇಶದ ಶಿಕ್ಷಣ ಕೇಂದ್ರದ ಬಳಿ ಶನಿವಾರ ಬಾಂಬ್ ಸ್ಫೋಟಿಸಿದ್ದಾರೆ. ಸ್ಫೋಟ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಗಾಯಾಳುಗಳನ್ನು ಕಾಬೂಲ್‌ನ ಜಿನ್ನಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.