ಕಾಬುಲ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಮಕ್ಕಳು ಸಹಿತ 30 ಮಂದಿ ಸಾವು

ಕಾಬುಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನಲ್ಲಿ ಶಿಕ್ಷಣ ಸಂಸ್ಥೆಯ ಬಳಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಮಕ್ಕಳು ಸೇರಿದಂತೆ 30 ಮಂದಿ ಮೃತಪಟ್ಟಿದ್ದಾರೆ. 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಆತ್ಮಾಹುತಿ ದಾಳಿಕೋರರು ಕಾಬೂಲ್‌ನ ಪಶ್ಚಿಮ ದಶ್-ಎ-ಬಾರ್ಚಿ ನೆರೆಹೊರೆಯ ಪುಲ್-ಎ-ಖೋಷ್ಕ್ ಪ್ರದೇಶದ ಶಿಕ್ಷಣ ಕೇಂದ್ರದ ಬಳಿ ಶನಿವಾರ ಬಾಂಬ್ ಸ್ಫೋಟಿಸಿದ್ದಾರೆ.

ಸ್ಫೋಟ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಗಾಯಾಳುಗಳನ್ನು ಕಾಬೂಲ್‌ನ ಜಿನ್ನಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.