ಹುಲಿಯಾದನು ಹಿರಿಯಡ್ಕದ ಈ ಹುಡುಗ: ವಿತಿನ್ ಅನ್ನೋ ಹುಲಿ ವೇಷದಾರಿ ಹೇಗೆ ಕುಣಿತಾನೆ ಅಂದ್ರೆ..

ಸರತಿಸಾಲಿನಲ್ಲಿ ಹಬ್ಬಗಳು ಮೇಳೈಸುತಿದ್ದರೆ ಇತ್ತ ಮಂಗಳೂರು ಸುತ್ತಮುತ್ತ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಒಂದೆರಡು ಹುಲಿ ಕುಣಿತದ ತಾಸೆಯ ಸದ್ದುಗಳು ಕೇಳುತ್ತಿವೆ. ಈ ವರುಷ ಕೊರೋನ ಲಾಕ್ಡೌನ್ ಎಫೆಕ್ಟ್ ನಿಂದ ಹುಲಿವೇಷಕ್ಕೆ ಅನುಮತಿ ಸಿಕ್ಕರೂ ದೇವಾಲಯದ ಕೆಲವು ಭಾಗಗಳಲ್ಲಿ ಮಾತ್ರ ತಾಸೆಯ ಸದ್ದು ಕೇಳಿಸುತ್ತಿದೆ. ಮೈಗೆ ಹಳದಿ, ಕಪ್ಪು ಬಣ್ಣಗಳ ಪಟ್ಟೆ ಬಳಿದುಕೊಂಡು, ತಲೆಗೆ ಹುಲಿ ವೇಷದ ಮುಖವಾಡ ಹಾಕಿಕೊಂಡ ನಾಲ್ಕಾರು ಮಂದಿಯ ತಂಡ, ಕಾಲು–ಕೈಗಳನ್ನು ಆಡಿಸುತ್ತಾ ತಾಸೆ ಪೆಟ್ಟಿನ ಹೆಜ್ಜೆ ಹಾಕುತ್ತಿದ್ದರೆ, ಅಲ್ಲಿಗೆ ಕರಾವಳಿಯಲ್ಲಿ ದಸರಾ ಸಡಗರ […]

ಕೋಟ: ಸಾಲದ ಸುಳಿಗೆ ಸಿಲುಕಿದ ಬಿಲ್ಡಿಂಗ್ ಕಂಟ್ರಾಕ್ಟರ್ ಬಾವಿಗೆ ಹಾರಿ ಆತ್ಮಹತ್ಯೆ

ಕೋಟ: ಸಾಲದ ಸುಳಿಗೆ ಸಿಲುಕಿದ ಬಿಲ್ಡಿಂಗ್ ಕಂಟ್ರಾಕ್ಟರ್ ಒಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನದ ಪಾಂಡೇಶ್ವರ ಶಾಲೆಯ ಬಳಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನದ ಪಾಂಡೇಶ್ವರ ನಿವಾಸಿ ಬಿಲ್ಡಿಂಗ್ ಕಂಟ್ರಾಕ್ಟರ್ ಅಬ್ಬಾಸ್ (53) ಎಂದು ಗುರುತಿಸಲಾಗಿದೆ. ಅಬ್ಬಾಸ್ ವ್ಯವಹಾರದಲ್ಲಿ ಆದ ನಷ್ಟದಿಂದ ಸಾಲದ ಸುಳಿಗೆ ಸಿಲುಕಿಕೊಂಡಿದ್ದರು. ಸಾಲ ತೀರಿಸಲಾಗದೆ ತುಂಬಾ ನೊಂದುಕೊಂಡಿದ್ದು, ಇದೇ ಕಾರಣದಿಂದ ಅ. 22ರಂದು ಮಧ್ಯಾಹ್ನ 3.30ರ ಸುಮಾರಿಗೆ ಪಾಂಡೇಶ್ವರ ಶಾಲೆಯ ಪಕ್ಕದಲ್ಲಿರುವ ಬಾವಿಗೆ […]

ಕೋಟ: ಲಾರಿ ಡಿಕ್ಕಿ ಹೊಡೆದು ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಸಾವು

ಕೋಟ: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ಮಣೂರಿನ ಇಂದ್ರಪ್ರಸ್ಥ ಹೋಟೆಲ್ ನ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮಣೂರಿನ ಇಂದ್ರಪ್ರಸ್ಥ ಹೋಟೆಲ್ ನಲ್ಲಿ ವಾಚ್ ಮೆನ್ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಪೂಜಾರಿ (47) ಮೃತಪಟ್ಟ ವ್ಯಕ್ತಿ. ಇವರು ಗುರುವಾರ ಕೆಲಸ ಮುಗಿಸಿಕೊಂಡು ಸಂಜೆ 7.10ರ ಸುಮಾರಿಗೆ ಹೋಟೆಲ್ ಎದುರಿನ ರಾ.ಹೆ. 66ರಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದರು. ಈ ವೇಳೆ ಬ್ರಹ್ಮಾವರದಿಂದ ಕುಂದಾಪುರ ಕಡೆಗೆ ಹಾದು ಹೋಗುವ […]

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಆಡಳಿತ ಮಂಡಳಿ ಸ್ಪಷ್ಟನೆ

ಸುಬ್ರಹ್ಮಣ್ಯ: ಕಡಬ ತಾಲ್ಲೂಕಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಮಾನವ ಹಕ್ಕು ಹೋರಾಟಗಾರ ಟಿ.ಎಸ್. ಶ್ರೀನಾಥ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಶ್ರೀನಾಥ್ ದೇಗುಲದಲ್ಲಿ ಸರ್ಪ ಸಂಸ್ಕಾರ ಮಾಡುವ ಕ್ರಿಯಾಕರ್ತರಾಗಿದ್ದರು. ಆದರೆ ಅವರು ಈ ಸೇವೆಗಾಗಿ ಭಕ್ತರಿಂದ 800 ದಕ್ಷಿಣೆ ಕೇಳುತ್ತಿದ್ದರು. ಹೀಗಾಗಿ ಅವರನ್ನು ಕ್ರಿಯಾಕರ್ತಕಾರ್ಯದಿಂದ ಕೈಬಿಡಲಾಗಿತ್ತು. ಇದೇ ದ್ವೇಷದಿಂದ ಅವರು ಎಸಿಬಿಗೆ ದೂರು ನೀಡಿದ್ದಾರೆ ಎಂದು ತಿಳಿಸಿದೆ. ದೇಗುಲದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಶ್ರೀನಾಥ್ […]