ಉಡುಪಿ: ಮಾಸ್ಕ್ ಹಾಕದ ಸರ್ಕಾರಿ ಬಸ್ ಕಂಡಕ್ಟರ್‌ಗೆ ದಂಡ ವಿಧಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ: ಮಾಸ್ಕ್ ಧರಿಸದಿದ್ದ ಸರ್ಕಾರಿ ಬಸ್ ಕಂಡಕ್ಟರ್ ಒಬ್ಬರಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಇಂದು ದಂಡ ವಿಧಿಸಿ, ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಗರದ ಕೋರ್ಟ್ ರಸ್ತೆಯ ಸಮೀಪ ನಡೆದಿದೆ. ಡಿಸಿಯವರು ಉಡುಪಿ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಇಂದು ನಡೆದ ಕೋವಿಡ್ ಜನಾಂದೋಲನ ಮಾಹಿತಿ ಕಾರ್ಯಕ್ರಮದ ನಂತರ, ಸಮೀಪದ ವಸತಿ ಸಂಕೀರ್ಣದ ಮನೆಗೆ “ನನ್ನ ಕುಟುಂಬ ನನ್ ಜವಾಬ್ದಾರಿ” ಅಭಿಯಾನ ಕಾರ್ಯಕ್ರಮದ ಸ್ಟಿಕರ್ ಅಳವಡಿಸಿ ಹೊರಬರುತ್ತಿದ್ದರು. ಈ ವೇಳೆ ರಸ್ತೆ ದಾಟುವಾಗ ಮುಂದೆ ಹಾದು […]

ನ. 27ರಿಂದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದ ಪ್ರದರ್ಶನ ಆರಂಭ

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಮೇರು ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ನೂತನ ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೇಳದ ಪ್ರದರ್ಶನ ನವೆಂಬರ್ 27 ರಿಂದ ಆರಂಭವಾಗಲಿದೆ. ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾಹಿತಿ ನೀಡಿದರು. ಪಾವಂಜೆ ದೇವಳದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ನೂತನ ಮೇಳದ ಬಗ್ಗೆ ಮಾಹಿತಿ ನೀಡಿ, ಸೀಮಿತ ಕಾಲಮಿತಿಯಲ್ಲಿ ಮೇಳದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 6 ಗಂಟೆಯಿಂದ 11ರ ವರೆಗಿನ ಅವಧಿಯಲ್ಲಿ […]

ಉಡುಪಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: 73.39 ಲಕ್ಷ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶ, ನಾಲ್ವರ ಬಂಧನ

ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಡ್ರಗ್ಸ್ ಚಟುವಟಿಕೆಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಮುಖ ಮೂರು ಪ್ರಕರಣಗಳಲ್ಲಿ ಬರೋಬ್ಬರಿ 73,39,500 ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ತಿಳಿಸಿದ್ದಾರೆ. ಉಡುಪಿ ಎಸ್ಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರಸ್ತಕ ವರ್ಷದಲ್ಲಿ ಗಾಂಜಾ ಸೇವನೆ ಹಾಗೂ ಸಾಗಾಟಕ್ಕೆ ಸಂಬಂಧಿಸಿದಂತೆ 209 ಪ್ರಕರಣಗಳು ದಾಖಲಾಗಿವೆ. ಇದು ಕಳೆದ ಐದು ವರ್ಷಗಳಲ್ಲಿ ದಾಖಲಿಸಿದ ಅತೀ ಹೆಚ್ಚು […]

ಭಯೋತ್ಪಾದನೆ ವಿರುದ್ಧದ ಹೋರಾಟಗಾರ ಬಲ್ವಿಂದರ್ ಸಿಂಗ್ ರನ್ನು ಗುಂಡಿಕ್ಕಿ ಹತ್ಯೆಗೈದ ಹಂತಕರು

ಅಮೃತಸರ: ಶೌರ್ಯ ಚಕ್ರ ಪುರಸ್ಕೃತ ಬಲ್ವಿಂದರ್‌ ಸಿಂಗ್‌ (62) ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಪಂಜಾಬ್ ನ ಅಮೃತಸರದ ತರನ್‌ ತಾರನ್‌ ಭಿಖಿವಿಂಡ್‌ ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದೆ. ಬಲ್ವಿಂದರ್‌ ಸಿಂಗ್‌ ತಮ್ಮ ಮನೆಗೆ ಹೊಂದಿಕೊಂಡಿರುವ ಕಚೇರಿಯಲ್ಲಿದ್ದ ಇದ್ದರು. ಈ ವೇಳೆ ಅವರ ಮೇಲೆ ಬೈಕ್ ನಲ್ಲಿ ಬಂದ ಹಂತಕರು ಗುಂಡಿನ ಸುರಿಮಳೆ ಗರೆದಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಲ್ವಿಂದರ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಲ್ವಿಂದರ್‌ […]

ಪಡುಬಿದ್ರಿ: ಪಲಿಮಾರು ನಿವಾಸಿ ಆತ್ಮಹತ್ಯೆಗೆ ಶರಣು

ಪಡುಬಿದ್ರಿ: ಕೋಣೆಯ ಮರದ ಜಂತಿಗೆ ನೇಣು ಬಿಗಿದುಕೊಂಡು ಪಲಿಮಾರು ಗ್ರಾಮದ ನಿವಾಸಿ ದೀಪಕ್ ದೇವಾಡಿಗ(30) ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೀಪಕ್ ಕಳೆದ ಒಂದು ತಿಂಗಳಿನಿಂದ ಎಲ್ಲೂರಿನ ಯುಪಿಸಿಎಲ್ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡಿಕೊಂಡಿದ್ದರು. ಅ. 16 ರಂದು ಮನೆಯಲ್ಲಿ ಊಟ ಮಾಡಿದ ಬಳಿಕ ಕೋಣೆಗೆ ಹೋಗಿ‌ ಮಲಗುವುದಾಗಿ ಹೇಳಿ ಹೋದವರು, ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.