ಉಡುಪಿ ಸೀರೆಗಳ ವಿನ್ಯಾಸದಲ್ಲಿ ನಾವು ಯಾರ ಸಹಾಯವನ್ನೂ ಪಡೆದಿಲ್ಲ: ತಾಳಿಪಾಡಿ ನೇಕಾರರ ಸಂಘ ಸ್ಪಷ್ಟನೆ

ಉಡುಪಿ:ಇತ್ತೀಚಿಗೆ  ಕೆಲವು ದೂರದರ್ಶನ ವಾಹಿನಿಗಳಲ್ಲಿ ಮತ್ತು ಸುದ್ದಿ ಪತ್ರಿಕೆಗಳಲ್ಲಿ ಉಡುಪಿ ಸೀರೆ ಬಗ್ಗೆ ಬಂದ ಕೆಲವು ಸುದ್ದಿಗಳ ಕುರಿತು  ಸಭೆ ನಡೆಸಿ ನಾವು  ಈ ಮೂಲಕ ಸೃಷ್ಟಿಕರಣ ನೀಡುತ್ತಿದ್ದೇವೆ. ನಮ್ಮ ಸಂಘದ ಜೊತೆಗೆ ಕಳೆದ ಎರಡುವರೆ ವರುಷಗಳಿಂದ ಕಾರ್ಕಳದ ಕದಿಕೆ ಟ್ರಸ್ಟ್ ಉಡುಪಿ ಸೀರೆ ಪುನಸ್ಚೇತನ ಕಾರ್ಯವನ್ನು ನಡೆಸುತ್ತಿದ್ದು ಇದರಿಂದ ಸಂಘದಲ್ಲಿ  ಬಹಳಷ್ಟು  ಬೆಳವಣಿಗೆ ಆಗಿದೆ. ನೇಕಾರರಿಗೆ ತರಬೇತಿ, ವೃತ್ತಿ ಬಿಟ್ಟು ಹೋದ ನೇಕಾರರನ್ನು ಮತ್ತೆ ಕರೆಸಿ ಅವರು ಮತ್ತೆ ನೇಕಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಕದಿಕೆ ಟ್ರಸ್ಟ್ […]

ಸುಳ್ಳು ಸುದ್ದಿ ಪ್ರಸಾರದ ಆರೋಪ: ಎನ್‌ಡಿಟಿವಿ ಸುದ್ದಿ ವಾಹಿನಿಯ ವಿರುದ್ಧ ದೂರು ದಾಖಲು

ಅಹಮದಾಬಾದ್‌: ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ಎನ್‌ಡಿಟಿವಿ ಸುದ್ದಿ ವಾಹಿನಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಎನ್ ಡಿಟಿವಿಯು ಕಛ್ ಜಿಲ್ಲೆಯ ಗಾಂಧಿಧಾಮದ ತನಿಷ್ಕ್ ಮಳಿಗೆಯ ಮೇಲೆ ಗುಂಪೊಂದು ದಾಳಿ ನಡೆಸಿದೆ ಎಂದು ಸುದ್ದಿ ಮಾಡಿತ್ತು. ಇದು ಸುಳ್ಳು ಸುದ್ದಿ ಎಂದು ಆರೋಪಿಸಿ ರಮೇಶ್ ಅಹಿರ್ (ಮೈತ್ರ) ಎನ್ನುವವರು ಎನ್‌ಡಿಟಿವಿ ವಿರುದ್ಧ ದೂರು ದಾಖಲಿಸಿದ್ದಾರೆ.  

ಬ್ರಹ್ಮಾವರ: ಬಾರ್ಕೂರು ಸೇತುವೆ ಬಳಿ ಬೈಕ್ ಇಟ್ಟು ಹೇರಂಜೆ ಯುವಕ ನಾಪತ್ತೆ

ಬ್ರಹ್ಮಾವರ: ತಾಲ್ಲೂಕಿನ 52ನೇ ಹೇರೂರು ಗ್ರಾಮದ ಹೇರಂಜೆ ನಿವಾಸಿ ಗೌತಮ್ (21) ಎಂಬುವವರು ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದೆ. ಗೌತಮ್ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದನು. ಅ. 15ರ ಗುರುವಾರ ಬೆಳಿಗ್ಗೆ 8 ಗಂಟೆಗೆ ಬೈಕ್ ನಲ್ಲಿ ತನ್ನ ತಾಯಿಯನ್ನು ಚಾಂತಾರು ಗೇರು ಬೀಜ ಫ್ಯಾಕ್ಟರಿಗೆ ಕೆಲಸಕ್ಕೆ ಬಿಟ್ಟಿದ್ದನು. ಬಳಿಕ ಬ್ರಹ್ಮಾವರ ಕಡೆಗೆ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದನು. ಮನೆಯವರು ರಾತ್ರಿ 8 ಗಂಟೆಗೆ ಕರೆ ಮಾಡಿದಾಗ ತಾನು ಬ್ರಹ್ಮಾವರ ವಾರಂಬಳ್ಳಿಯ […]

ಜೀವಕ್ಕಿಂತ ಚುನಾವಣೆ ಮುಖ್ಯವೇ?: ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಏನು ಹೇಳುತ್ತಾರೆ?

ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಪ್ರಧಾನವಾದ ಮಹತ್ವವೂ ಇದೆ. ಆದರೆ ಅದಕ್ಕೂ ಸಮಯ ಸಂದರ್ಭ ಅನ್ನುವುದು ಇಲ್ಲವೇ ಎಂಬ ಪ್ರಶ್ನೆ ಇಂದಿನ ಕೊರೊನಾ ವಿಷಮಸ್ಥಿತಿಯಲ್ಲಿ ಸಹಜವಾಗಿ ಮೂಡುವ ಪ್ರಶ್ನೆ . ಕನಾ೯ಟಕದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಾದ ಆರ್.ಆರ್.ನಗರ ಮತ್ತು ಶಿರಾ ಹಾಗೂ ಕೆಲವೂ ವಿಧಾನ ಪರಿಷತ್ ಗಳಿಗೆ ನಡೆಸುತ್ತಿರುವ ಚುನಾವಣೆ, ಅದೇ ರೀತಿಯಲ್ಲಿ ಗ್ರಾಮ ಪಂಚಾಯತ್ ಗಳಿಗೆ 2020 ಡಿಸೆಂಬರ್ ತಿಂಗಳೊಳಗೆ ಚುನಾವಣೆ ನಡೆಸಲು ಸಿದ್ಧತೆ ನಡೆಯುತ್ತಿವೆ. ಜನರ ಬದುಕೇ ಕೊರೊನಾದಿಂದ ತತ್ತರಿಸಿ ಹೇೂಗಿದೆ. […]

ಸದ್ಯದಲ್ಲೇ ರಂಗಭೂಮಿ ಚಟುವಟಿಕೆಗಳು ಆರಂಭ: ಕೋಡಿಯಾಲ್ ಬೈಲ್

ಮಂಗಳೂರು:ತುಳು ಸಾಹಿತ್ಯ ಅಕಾಡೆಮಿ, ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದೆರ್ ಕುಡ್ಲ ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನ ನಮ್ಮ ಟಿವಿ ಸಹಕಾರದೊಂದಿಗೆ ಮಂಗಳೂರಿನ ತುಳುಭವನ ಆಯೋಜಿಸಿದ್ದ “ನಾಟಕ ಪರ್ಬ” ಮೂರನೇ ದಿನದ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಾಲ್ಸರ್, ಮುಂಬೈ ಕಲಾ ಜಗತ್ತಿನ ಪ್ರಸಿದ್ಧ ನಾಟಕಕಾರ ವಿಜಯ್ ಕುಮಾರ್ ಶೆಟ್ಟಿ ತೋನ್ಸೆ, ತುಳು ರಂಗಭೂಮಿ ಹಾಗೂ ಚಲನಚಿತ್ರದ ಖ್ಯಾತ ನಿರ್ದೇಶಕ, ರಂಗಕರ್ಮಿ ವಿಜಯ್ ಕುಮಾರ್ ಕೋಡಿಯಾಲ್ ಬೈಲ್, ಸಂಗೀತ ನಿರ್ದೇಶಕರಾದ […]