ಶತಮಾನ ಕಂಡ ಹಿರಿಯ ಮದ್ದಲೆ ವಾದಕ ಹಿರಿಯಡಕ ಗೋಪಾಲ್ ರಾವ್ ನಿಧನ
ಉಡುಪಿ: ಹಿರಿಯ ಮದ್ದಲೆ ವಾದಕ ಹಿರಿಯಡಕ ಗೋಪಾಲ್ ರಾವ್ (101) ಇಂದು ರಾತ್ರಿ 8.30ರ ಸುಮಾರಿಗೆ ನಿಧನ ಹೊಂದಿದರು. ನಾಳೆ ಅವರ ಅಂತ್ಯಸಂಸ್ಕಾರ ನಡೆಯಲಿದೆ.
ಆಸ್ಟ್ರೊ ಮೋಹನ್ ಅವರಿಗೆ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಪುರಸ್ಕಾರ
ಉಡುಪಿ: ಆಂಧ್ರಪ್ರದೇಶ ಫೋಟೋಗ್ರಾಫರ್ಸ್ ಅಸ್ಸೊಸಿಯೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರು ಸೆರೆ ಹಿಡಿದಿರುವ ಛಾಯಾಚಿತ್ರಕ್ಕೆ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಪುರಸ್ಕಾರ ಲಭಿಸಿದೆ. ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಕಾಲವಾದ ಸಂದರ್ಭದಲ್ಲಿ ಅವರಿಗೆ ಸಲ್ಲಿಸಲಾದ ಸರಕಾರಿ ಗೌರವವನ್ನು ಸೂಚಿಸುವ ಛಾಯಾಚಿತ್ರಕ್ಕೆ ಈ ಪ್ರಶಸ್ತಿ ಸಿಕ್ಕಿದೆ.
ಲೈಂಗಿಕ ದೌರ್ಜನ್ಯ ಎಸಗಿದ ಪ್ರೊ. ಅರಬಿ, ತನಿಖಾ ವರದಿ ಮುಚ್ಚಿಟ್ಟ ಡಾ. ಎ.ಎಂ. ಖಾನ್ ವಿರುದ್ಧ ಕಾನೂನು ಕ್ರಮಕೈಗೊಳ್ಳಿ: ಎಬಿವಿಪಿ ಉಡುಪಿ ನಗರ ಆಗ್ರಹ
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರೊ. ಅರಬಿ ಹಾಗೂ ಇದರ ತನಿಖಾ ವರದಿ ಮುಚ್ಚಿಟ್ಟ ಮಾಜಿ ಕುಲಸಚಿವ ಡಾ. ಎ.ಎಂ. ಖಾನ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಬಿವಿಪಿ ಉಡುಪಿ ನಗರ ಕಾರ್ಯದರ್ಶಿ ಅನಿಲ್ ಶೆಣೈ ಆಗ್ರಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಂದ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ವಿಶ್ವವಿದ್ಯಾಲಯದ ಕೊಠಡಿಯಲ್ಲಿ ಈ ಹಿಂದೆ ದೌರ್ಜನ್ಯ ನಡೆಸಿರುವುದನ್ನು ಮತ್ತು ಸದರಿ ಪ್ರಕರಣದ ವಿಚಾರಣೆ ನಡೆದು ವರದಿ ನೀಡಿ 2 ವರ್ಷಗಳು ಸಾಗುತ್ತಾ ಬಂದಿದ್ದರೂ, ಈವರೆಗೆ […]
ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಬೆಂಗಳೂರು: ಇಲ್ಲಿನ ಬ್ರಿಗೇಡ್ ರಸ್ತೆ ಸಮೀಪದ ಡ್ಯೂಯೇಟ್ ಬಾರ್ ಮಾಲೀಕ ಮನೀಶ್ ಶೆಟ್ಟಿ (45)ಯನ್ನು ಕೊಲೆ ಮಾಡಿದ ನಾಲ್ವರು ಹಂತಕರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೊಡಗಿನ ಸೋಮವಾರಪೇಟೆಯ ಶಶಿಕಿರಣ ಅಲಿಯಾಸ್ ಮುನ್ನಾ (45), ನಿತ್ಯ (29), ಮಂಗಳೂರಿನ ಗಣೇಶ್ (39) ಹಾಗೂ ಬಂಟ್ವಾಳದ ಅಕ್ಷಯ್ (32) ಎಂದು ಗುರುತಿಸಲಾಗಿದೆ. ಹತ್ಯೆ ಬಳಿಕ ಆರೋಪಿಗಳು ಬೆಂಗಳೂರಿನ ಗಾಂಧಿನಗರದ ವಸತಿಗೃಹವೊಂದರಲ್ಲಿ ತಲೆ ಮರೆಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ಮೇಲೆ […]
ಬ್ರಹ್ಮಾವರ: ನಾಪತ್ತೆಯಾಗಿದ್ದ ಹೇರಂಜೆ ಯುವಕ ಶವವಾಗಿ ಪತ್ತೆ
ಬ್ರಹ್ಮಾವರ: ನಾಪತ್ತೆಯಾಗಿದ್ದ 52ನೇ ಹೇರೂರು ಗ್ರಾಮದ ಹೇರಂಜೆಯ ಗೌತಮ್ (21) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹ ಬಾರ್ಕೂರು ಹಂದಾಡಿ ಮರ್ಬು ಹೊಳೆಯ ನೀರಿನಲ್ಲಿ ಇಂದು ಮಧ್ಯಾಹ್ನ ಪತ್ತೆಯಾಗಿದೆ. ಗೌತಮ್ ಅ. 15ರ ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದ. ಅ. 15ರ ಗುರುವಾರ ಬೆಳಿಗ್ಗೆ 8 ಗಂಟೆಗೆ ಬೈಕ್ ನಲ್ಲಿ ತನ್ನ ತಾಯಿಯನ್ನು ಚಾಂತಾರು ಗೇರು ಬೀಜ ಫ್ಯಾಕ್ಟರಿಗೆ ಕೆಲಸಕ್ಕೆ ಬಿಟ್ಟಿದ್ದನು. ಬಳಿಕ ಬ್ರಹ್ಮಾವರ ಕಡೆಗೆ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದನು. ಮನೆಯವರು ರಾತ್ರಿ 8 ಗಂಟೆಗೆ ಕರೆ […]