ಉಡುಪಿ ಆಚಾರ್ಯಾಸ್ ಏಸ್: ಕಾಮರ್ಸ್, ಬ್ಯಾಂಕಿಂಗ್ ಪರೀಕ್ಷೆಗೆ ದೈನಂದಿನ ತರಬೇತಿ

ಉಡುಪಿ: ಒಂಭತ್ತನೇ, ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೇನ್ಸ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್ ಏಸ್ ಸಂಸ್ಥೆಯು ಬ್ಯಾಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಗರಿಷ್ಠ ಫಲಿತಾಂಶಕ್ಕಾಗಿ ವಿನೂತನ ರೀತಿಯ ತರಬೇತಿಯನ್ನು ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಹಮ್ಮಿಕೊಂಡಿದೆ. ಅಕ್ಟೋಬರ್ 19ರಿಂದ ಆರಂಭವಾಗಲಿರುವ ಈ ತರಬೇತಿಯಲ್ಲಿ ಅಕೌಂಟನ್ಸಿ, ಸ್ಟಟಿಸ್ಟಿಕ್ಸ್, ಬೇಸಿಕ್ ಮ್ಯಾಥ್ಸ್ ಬಗ್ಗೆ ತರಗತಿಗಳನ್ನು ನಡೆಸಲಾಗುವುದು. ಪ್ರತಿಭಾನ್ವಿತ ಪ್ರಾಧ್ಯಾಪಕ ವೃಂದದಿಂದ ಉಪನ್ಯಾಸ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಲಾಗುವ ಪ್ರಮುಖ ಅಧ್ಯಯನ ಮತ್ತು […]

ಮಹಾಮಳೆಗೆ ನಲುಗಿದ ಆಂಧ್ರ, ತೆಲಂಗಾಣ: 47 ಮಂದಿ ಸಾವು

ಹೈದರಾಬಾದ್‌: ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ವರ್ಷಾಧರೆಗೆ ತೆಲಂಗಾಣ ರಾಜಧಾನಿ ಹೈದರಾಬಾದ್‌ ಹಾಗೂ ಆಂಧ್ರ ಪ್ರದೇಶದ ವಿವಿಧ ಭಾಗಗಳು ಮುಳುಗಡೆಯಾಗಿವೆ. ಬುಧವಾರ ಸುರಿದ ಭಾರಿ ಮಳೆಗೆ 47 ಜನರು ಮೃತಪಟ್ಟಿದ್ದಾರೆ. ತೆಲಂಗಾಣದಲ್ಲಿ ರಾಜ್ಯದಲ್ಲಿ 32 ಜನರು ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ ಮೃತಪಟ್ಟಿದ್ದಾರೆ. ರಾಜಧಾನಿ ಹೈದಾರಬಾದ್‌ನಲ್ಲೇ 15 ಜನರು ಸಾವನ್ನಪ್ಪಿದ್ದಾರೆ. ಆಂಧ್ರದ ವಿವಿಧ ಭಾಗಗಳಲ್ಲಿ 15 ಜನರು ಮೃತಪಟ್ಟಿದ್ದಾರೆ. ಹೈದರಾಬಾದ್ ನಲ್ಲಿ ಮಳೆಯ ಅವಾಂತರ: ಮಹಾಳೆಯಿಂದ ಹೈದರಾಬಾದ್‌ನ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿದ್ದು […]

ನವದುರ್ಗೆಯರ ಅವತಾರದಲ್ಲಿ ಕಂಗೊಳಿಸುತ್ತಿರುವ ಐದನೇ ತರಗತಿಯ ಬಾಲೆ ಚಾರ್ವಿ ಎಸ್. ದೇವಾಡಿಗ

ಮಂಗಳೂರು: ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ದಸರಾ ಹಬ್ಬವು ಇದೇ 17ರಿಂದ ಶುರುವಾಗಲಿದೆ. ಈ ಪ್ರಯುಕ್ತ ನೃತ್ಯ ಕಲಾವಿದೆ ಚಾರ್ವಿ ಎಸ್. ದೇವಾಡಿಗ ಎಂಬ ಬಾಲಕಿ ಶಾರದೆ, ಲಕ್ಷ್ಮೀ, ದುರ್ಗಾದೇವಿಯ ಅವತಾರದಲ್ಲಿ ಕಂಗೊಳಿಸುತ್ತಿದ್ದಾರೆ. ಈ ಬಾಲಕಿ ನವದುರ್ಗೆಯರ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ನವರಾತ್ರಿಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿದ್ದಾರೆ. 2010 ರ ಸೆಪ್ಟೆಂಬರ್ 7 ರಂದು ಜನಿಸಿದ ಚಾರ್ವಿಯು, ಸುರತ್ಕಲ್ ಬಳಿಯ ಮುಕ್ಕದ ವಿಜಯಲಕ್ಷ್ಮೀ ಹಾಗೂ ಸುಶೀಲ್ ಕುಮಾರ್ ದಂಪತಿಯ ಮಗಳು. ಎನ್ಐಟಿಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಐದನೇ […]