ನವದುರ್ಗೆಯರ ಅವತಾರದಲ್ಲಿ ಕಂಗೊಳಿಸುತ್ತಿರುವ ಐದನೇ ತರಗತಿಯ ಬಾಲೆ ಚಾರ್ವಿ ಎಸ್. ದೇವಾಡಿಗ

ಮಂಗಳೂರು: ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ದಸರಾ ಹಬ್ಬವು ಇದೇ 17ರಿಂದ ಶುರುವಾಗಲಿದೆ. ಈ ಪ್ರಯುಕ್ತ ನೃತ್ಯ ಕಲಾವಿದೆ ಚಾರ್ವಿ ಎಸ್. ದೇವಾಡಿಗ ಎಂಬ ಬಾಲಕಿ ಶಾರದೆ, ಲಕ್ಷ್ಮೀ, ದುರ್ಗಾದೇವಿಯ ಅವತಾರದಲ್ಲಿ ಕಂಗೊಳಿಸುತ್ತಿದ್ದಾರೆ.

ಈ ಬಾಲಕಿ ನವದುರ್ಗೆಯರ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ನವರಾತ್ರಿಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿದ್ದಾರೆ.
2010 ರ ಸೆಪ್ಟೆಂಬರ್ 7 ರಂದು ಜನಿಸಿದ ಚಾರ್ವಿಯು, ಸುರತ್ಕಲ್ ಬಳಿಯ ಮುಕ್ಕದ ವಿಜಯಲಕ್ಷ್ಮೀ ಹಾಗೂ ಸುಶೀಲ್ ಕುಮಾರ್ ದಂಪತಿಯ ಮಗಳು. ಎನ್ಐಟಿಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

ನೃತ್ಯ ಶಿಕ್ಷಕರಾದ ಭಾರತಿ ಸುರೇಶ್ ಹಾಗೂ ಶಿವಾನಿ ಸುರತ್ಕಲ್ ಅವರಲ್ಲಿ ಶಾಸ್ತ್ರೀಯ ನೃತ್ಯದ ಆರಂಭಿಕ ಹಂತದ ತರಬೇತಿ ಪಡೆಯುತ್ತಿದ್ದಾರೆ. ನೃತ್ಯದಲ್ಲಿ ಬಹಳ ಆಸಕ್ತಿ ಹೊಂದಿರುವ ಚಾರ್ವಿಯು ನೃತ್ಯದ ಕೆಲ ಪ್ರಕಾರಗಳನ್ನು ತಾನಾಗಿಯೇ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ.

ಇದೀಗ ದಸರಾ ಪ್ರಯುಕ್ತ ದುರ್ಗೆ, ಶಾರದೆ, ಲಕ್ಷ್ಮಿ ಸ್ವರೂಪಿಯಾಗಿ ಕಂಗೊಳಿಸಿರುವ ಚಾರ್ವಿಯ ಈ ಸುಂದರ ಚಿತ್ರಗಳನ್ನು ಛಾಯಾಗ್ರಾಹಕ ಶಶಿ ಹಳೆಯಂಗಡಿ ಸೆರೆ ಹಿಡಿದಿದ್ದಾರೆ. ವಸ್ತ್ರಾಲಂಕಾರವನ್ನು ಉಷಾ ಅಮೀನ್ ಮಾಡಿದ್ದಾರೆ. ಹಾಗೆಯೇ ವಸ್ತ್ರ ಭೂಷಣಗಳ ವ್ಯವಸ್ಥೆಯನ್ನು ಲಲಿತ ಕಲಾ ಆರ್ಟ್ಸ್ ಧನ್ಪಾಲ್ ಮಂಗಳೂರು ಅವರು ಮಾಡಿದ್ದಾರೆ.