ಹತ್ರಾಸ್ ಘಟನೆಯಲ್ಲಿ ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳ ಕೈವಾಡವಿದೆ: ಸಂಸದೆ ಶೋಭಾ ಕರಂದ್ಲಾಜೆ ಆರೋಪ

ಉಡುಪಿ: ಉತ್ತರ ಪ್ರದೇಶದ ಹತ್ರಾಸ್ ಗ್ರಾಮದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಪ್ರಕರಣ ಹಾಗೂ ಬಳಿಕ ನಡೆದ ಪ್ರತಿಭಟನೆಗಳ ಹಿಂದೆ ಎಸ್‍ಡಿಪಿಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕೈವಾಡ ಇದೆ. ಈ ಸಂಘಟನೆಗಳು ದೊಡ್ಡಮಟ್ಟದ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದವು ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಉಡುಪಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಎರಡು ಸಂಘಟನೆಗಳು ಹತ್ರಾಸ್ ಪ್ರಕರಣವನ್ನು ಮುಂದಿಟ್ಟುಕೊಂಡು ಗಲಭೆ ನಡೆಸಲು ಸಂಚು ರೂಪಿಸಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ಲಭ್ಯವಾಗಿದೆ. ಈ […]

ಕಾಂಟ್ರಾಕ್ಟ್ ಫಾರ್ಮಿಂಗ್ ನಲ್ಲಿ ರೈತರಿಗೆ ನಿರ್ಧಾರ ಕೈಗೊಳ್ಳಲು ಮುಕ್ತ ಅವಕಾಶವಿದೆ: ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಕಾಂಟ್ರಾಕ್ಟ್ ಫಾರ್ಮಿಂಗ್ ನಲ್ಲಿ ರೈತರ ಸಹಮತವಿಲ್ಲದೆ ಖಾಸಗಿ ಸಂಸ್ಥೆಗಳು ಬೆಲೆ ನಿಗದಿಪಡಿಸಲು ಆಗಲ್ಲ. ಹಾಗಾಗಿ ಇದು ರೈತರ ಮೇಲೆ ಹೇರಿಕೆ ಆಗುವುದಿಲ್ಲ. ಇದರಲ್ಲಿ ರೈತರಿಗೆ ಮುಕ್ತವಾದ ನಿರ್ಧಾರ ಕೈಗೊಳ್ಳಲು ಅವಕಾಶವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್‌ನಲ್ಲಿ ಖಾಸಗಿ ಸಂಸ್ಥೆಗಳು ರೈತನ ಮೇಲೆ ಒತ್ತಡ ಹೇರುತ್ತದೆ ಎಂಬ ಆರೋಪಕ್ಕೆ ಉತ್ತರಿಸಿದರು. ರೈತರ ರಕ್ಷಣೆ ಹಾಗೂ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ […]

ಹವ್ಯಾಸಿ ನಾಣ್ಯ ಸಂಗ್ರಹಕಾರ ಮಂಜುನಾಥ್ ಸಂಗ್ರಹದಲ್ಲಿದೆ ರೂ.20 ನಾಣ್ಯ

ಪ್ರಾಚ್ಯ ವಸ್ತು ಸಂಗ್ರಾಹಕಾರರಾದ ಕುಕ್ಕುಂದೂರಿನ ಕೆ. ಮಂಜುನಾಥ್ ಇವರ ಹವ್ಯಾಸಿ ಸಂಗ್ರಹಕ್ಕೆ ಎಂದಿನಂತೆ ಈ ಬಾರಿಯೂ ಕೂಡಾ ಹೊಸ ಮಾದರಿ ಹಾಗೂ ವಿನ್ಯಾಸದ ರೂಪಾಯಿ 2, 5, 10 ಮತ್ತು ಭಾರತದ ನಾಣ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಲಾವಣೆಗೆ ಬಿಡುವಂತಹ ರೂ. 20ರ ನಾಣ್ಯವನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ. ಈ ನಾಣ್ಯವು ಸದ್ಯದಲ್ಲೇ ಸಾರ್ವಜನಿಕರಿಗೆ ಚಲಾವಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಗೆ ಬಿಡುತ್ತದೆ. ಮೂಲತಃ ಬ್ಯಾಂಕ್ ಉದ್ಯೋಗಿಯಾಗಿರುವ ಇವರು ತನ್ನ ಹವ್ಯಾಸಿ ಸಂಗ್ರಹದಲ್ಲಿ ಈ ಮೊದಲು ಕೂಡ […]

ಸಾಲದ ಕಂತು ಮತ್ತೆ ಮುಂದೂಡಲು ಆರ್ ಬಿಐ ನಿರಾಕರಣೆ

ನವದೆಹಲಿ: ಸಾಲದ ಕಂತು ಮುಂದೂಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿರಾಕರಿಸಿದೆ. ಸಾಲದ ಕಂತನ್ನು ಆರು ತಿಂಗಳಿಗೂ ಹೆಚ್ಚು ಕಾಲ ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ. ವಿಸ್ತರಿಸಿದರೆ ಸಾಲ ಪಾವತಿಸುವ ವ್ಯವಸ್ಥೆ ಹದಗೆಡಲಿದೆ. ಸಾಲದ ಪ್ರಮಾಣ ಹೆಚ್ಚಾಗಿ ಆರ್ಥಿಕತೆಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆರ್ ಬಿಐ ತಿಳಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ವಿವಿಧ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದರಿಂದ ಸಾಲ ಮರುಪಾವತಿಸುವ ಕುರಿತಂತೆ ವಿವರ ಸಲ್ಲಿಸುವಂತೆ ಅಕ್ಟೋಬರ್‌ 5ರಂದು ನ್ಯಾಯಾಲಯವು ಕೇಂದ್ರ ಸರ್ಕಾರ ಮತ್ತು […]

ಉಡುಪಿ: ಅ. 12ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗ್ರಾಹಕ ಸೇವಾ ಕೇಂದ್ರ ಶುಭಾರಂಭ:ಬ್ಯಾಂಕ್ ಸೇವೆ ಈಗ ಇನ್ನಷ್ಟು ಹತ್ತಿರ

ಉಡುಪಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗ್ರಾಹಕ ಸೇವಾ ಕೇಂದ್ರವು ಉಡುಪಿಯ ಹಳೆಯ ತಾಲ್ಲೂಕು ಪಂಚಾಯತ್ ಸರ್ಕಲ್ ಬಳಿಯ ಸೆಂಚುರಿ ಚೇಂಬರ್ ಕಟ್ಟಡದ ಮೊದಲ ಮಹಡಿಯಲ್ಲಿ ಇದೇ ಅಕ್ಟೋಬರ್ 12ರಂದು (ಸೋಮವಾರ) ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ. ಉಡುಪಿ ಸಿಎಂಸಿಎಸ್ (ಆರ್ ಬಿಒ-3) ಚೀಫ್ ಮ್ಯಾನೇಜರ್ ಪ್ರಜ್ಞಾ ಎಂ. ಕಾಮತ್ ಕೇಂದ್ರವನ್ನು ಉದ್ಘಾಟಿಸುವರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಪ್ರಧಾನ ಶಾಖೆಯ ಚೀಫ್ ಮ್ಯಾನೇಜರ್ ಕಿರಣ್ ಕುಮಾರ್ ಪಿ.ಎನ್, ಉಡುಪಿ ಆರ್ ಬಿಒ 3 […]