ಉಡುಪಿ: ಅ. 12ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗ್ರಾಹಕ ಸೇವಾ ಕೇಂದ್ರ ಶುಭಾರಂಭ:ಬ್ಯಾಂಕ್ ಸೇವೆ ಈಗ ಇನ್ನಷ್ಟು ಹತ್ತಿರ

ಉಡುಪಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗ್ರಾಹಕ ಸೇವಾ ಕೇಂದ್ರವು ಉಡುಪಿಯ ಹಳೆಯ ತಾಲ್ಲೂಕು ಪಂಚಾಯತ್ ಸರ್ಕಲ್ ಬಳಿಯ ಸೆಂಚುರಿ ಚೇಂಬರ್ ಕಟ್ಟಡದ ಮೊದಲ ಮಹಡಿಯಲ್ಲಿ ಇದೇ ಅಕ್ಟೋಬರ್ 12ರಂದು (ಸೋಮವಾರ) ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ.

ಉಡುಪಿ ಸಿಎಂಸಿಎಸ್ (ಆರ್ ಬಿಒ-3) ಚೀಫ್ ಮ್ಯಾನೇಜರ್ ಪ್ರಜ್ಞಾ ಎಂ. ಕಾಮತ್ ಕೇಂದ್ರವನ್ನು ಉದ್ಘಾಟಿಸುವರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಪ್ರಧಾನ ಶಾಖೆಯ ಚೀಫ್ ಮ್ಯಾನೇಜರ್ ಕಿರಣ್ ಕುಮಾರ್ ಪಿ.ಎನ್, ಉಡುಪಿ ಆರ್ ಬಿಒ 3 (ಎಫ್ ಐ ಅಂಡ್ ಎಂಎಫ್ ) ಮ್ಯಾನೇಜರ್ ಎಂ.ಎಸ್. ದೇಶಪಾಂಡೆ, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಯಾವ ಯಾವ ಸೌಲಭ್ಯ?
* ಪ್ರಧಾನ ಮಂತ್ರಿ ಜನಧನ್ ಬ್ಯಾಂಕ್ ಖಾತೆಯನ್ನು ತೆರೆಯಬಹುದು.
*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಖಾತೆಗೆ ಹಣ ಜಮಾ ಮಾಡಬಹುದು.
*ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿಯ ಖಾತೆಯಿಂದ ಹಣ ಡ್ರಾ ಮಾಡಬಹುದು.
*ಅಟಲ್ ಪೆನ್ಶನ್ ಯೋಜನೆ ಮಾಡಿಕೊಡಲಾಗುವುದು.
*ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆ (ರೂ. 12), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ (ರೂ. 330) ಮೂಲಕ 2 ಲಕ್ಷ ರೂಪಾಯಿ ವಿಮಾ ಸೌಲಭ್ಯ ಇಲ್ಲಿಿ ಲಭ್ಯ ಎಂದು KIOSK ಓಪರೇಟರ್ ಮೊಹಮ್ಮದ್ ನಬೀಲ್ ತಿಳಿಸಿದ್ದಾರೆ