ಕಾಂಗ್ರೆಸ್ ಶಾಸಕ ಕೋವಿಡ್ ಗೆ ಬಲಿ
ಬೀದರ್: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ (67) ನಿಧನ ಹೊಂದಿದರು. ಕೋವಿಡ್-19 ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಡ್ರಗ್ಸ್ ನಂಟಿನ ಆರೋಪ: ಕನ್ನಡದ ಖ್ಯಾತ ನಿರೂಪಕಿ ಕಮ್ ನಟಿಗೆ ಸಿಸಿಬಿಯಿಂದ ಸಮನ್ಸ್
ಮಂಗಳೂರು: ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕೋರಿ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಅನುಶ್ರೀ ಅವರಿಗೆ ಪೊಲೀಸರು ವಾಟ್ಸಾಪ್ನಲ್ಲಿ ನೋಟಿಸ್ ನೀಡಿದ್ದಾರೆ. ಡ್ರಗ್ಸ್ ಸೇವನೆ, ಬಳಕೆ ಆರೋಪದಡಿ ಇತ್ತೀಚೆಗೆ ಸಿಸಿಬಿ ಪೊಲೀಸರಿಂದ ಬಂಧನಕೊಳ್ಳಗಾದ ಡ್ಯಾನ್ಸರ್ ಕಿಶೋರ್ ಶೆಟ್ಟಿ ಜತೆ ಸಂಪರ್ಕ ಇರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಕಿಶೋರ್ ಶೆಟ್ಟಿ ತನಗೆ ಅನುಶ್ರಿ ಪರಿಚಯ ಇರುವ ಬಗ್ಗೆ ಹಾಗೂ ಆಕೆ ಮಂಗಳೂರಿನಲ್ಲಿ […]
ತಾಯ್ನಾಡಿಗೆ ಕ್ಷೇಮವಾಗಿ ಮರಳಿ ಬಂದ ಕುವೈಟ್ ನಲ್ಲಿ ಬಂಧನಕ್ಕೊಳಗಾಗಿದ್ದ ಉಡುಪಿಯ ಮಹಿಳೆ
ಉಡುಪಿ: ತಾಯ್ನಾಡಿಗೆ ಮರಳುತ್ತಿದ್ದ ಮಾಲೀಕನ ಎಡವಟ್ಟಿನಿಂದ ಕುವೈಟ್ ನಲ್ಲಿ ಬಂಧನವಾಗಿದ್ದ ಉಡುಪಿ ಶಿರ್ವ ಮೂಲದ ಗಿರಿಜಾ(63) ಎಂಬುವವರು ಇಂದು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಕ್ಷೇಮವಾಗಿ ಬಂದಿಳಿದ್ದಾರೆ. ಗಿರಿಜಾ ಅವರು ಕಳೆದ 28 ವರ್ಷಗಳಿಂದ ಕುವೈಟ್ ನಲ್ಲಿ ಮನೆಗೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಹಾಗೂ ಅನಾರೋಗ್ಯದ ಕಾರಣದಿಂದ ಅವರು ಊರಿಗೆ ಮರಳಲು ನಿರ್ಧರಿಸಿದ್ದರು. ಸೆ.13ರಂದು ಇಂಡಿಗೋ ವಿಮಾನದ ಟಿಕೆಟ್ ತಾಯ್ನಾಡಿಗೆ ಬರುವ ಸಂಭ್ರಮದಲ್ಲಿದ್ದ ಗಿರಿಜಾಗೆ ಕುವೈಟ್ ಪೊಲೀಸರು ವಿಮಾನ ನಿಲ್ದಾಣದಲ್ಲಿ ದಿಢೀರ್ ಆಗಿ ಬಂಧಿಸುವ ಮೂಲಕ ಆಘಾತ […]
ಹಿರಿಯಡಕ: ಮಾರ್ಗ ಮಧ್ಯೆಯೇ ರೌಡಿಶೀಟರ್ ಹತ್ಯೆ
ಹಿರಿಯಡಕ: ರೌಡಿ ಶೀಟರ್ ಒಬ್ಬನನ್ನು ದುಷ್ಕರ್ಮಿಗಳ ತಂಡ ಲಾಂಗ್ ನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಹಿರಿಯಡಕದ ಸಿಂಡಿಕೇಟ್ ಬ್ಯಾಂಕ್ ಎದುರಿನಲ್ಲಿ ಇಂದು ಮಧ್ಯಾಹ್ನ ವೇಳೆಗೆ ನಡೆದಿದೆ. ಮೃತನನ್ನು ಪಡುಬಿದ್ರಿ ಇನ್ನಾದ ಕಿಶನ್ ಹೆಗ್ಡೆ (42) ಎಂದು ಗುರುತಿಸಲಾಗಿದೆ. ಈತ ರೌಡಿ ಶೀಟರ್ ಆಗಿದ್ದು, ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಳಿವೆ ಎಂದು ತಿಳಿದುಬಂದಿದೆ. ಕಿಶನ್ ತನ್ನ ಕಾರಿನಲ್ಲಿ ಬರುತ್ತಿರುವ ಸಂದರ್ಭದಲ್ಲಿ ಇನೋವಾ ಮತ್ತು ರಿಡ್ಜ್ ಕಾರಿನಲ್ಲಿ ಬಂದಂತಹ ಎರಡು ದುಷ್ಕರ್ಮಿಗಳ ತಂಡ, ಹಿರಿಯಡಕದ ಸಿಂಡಿಕೇಟ್ ಬ್ಯಾಂಕ್ […]
ಪಿಪಿಸಿ: ‘ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟಿಕ್’ ಪುಸ್ತಕ ಅನಾವರಣ
ಉಡುಪಿ: ಉಡುಪಿ ಪೂರ್ಣ ಪ್ರಜ್ಞಾ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸೌಮ್ಯ ಲೋಕೇಶ್ ಶೆಟ್ಟಿ ಹಾಗೂ ಡಾ. ಜಿ. ಶಂಕರ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ. ಉಮೇಶ್ ಮಯ್ಯ ಅವರು ಜೊತೆಗೂಡಿ ಬರೆದ ಬಿ.ಕಾಂ ತೃತೀಯ ಸೆಮಿಸ್ಟರ್ ತರಗತಿಯ ಕಾಸ್ಟ್ ಅ್ಯಂಡ್ ಮ್ಯಾನೇಜ್ಮೆಂಟ್ ಅಕೌಂಟಿಕ್ ಪುಸ್ತಕವನ್ನು ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯತೀರ್ಥ ಶ್ರೀಪಾದರು ಬುಧವಾರ ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಮಿನಿ ಆಡಿಟೋರಿಯಂ ನಲ್ಲಿ ಬಿಡುಗಡೆಗೊಳಿಸಿದರು. ಆ ನಂತರ ಮಾತನಾಡಿದ ಸ್ವಾಮೀಜಿ, ತನ್ನ ಕಾಲೇಜಿನ […]