ಪಿಪಿಸಿ: ‘ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟಿಕ್’ ಪುಸ್ತಕ ಅನಾವರಣ

ಉಡುಪಿ: ಉಡುಪಿ ಪೂರ್ಣ ಪ್ರಜ್ಞಾ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸೌಮ್ಯ ಲೋಕೇಶ್ ಶೆಟ್ಟಿ ಹಾಗೂ ಡಾ. ಜಿ. ಶಂಕರ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ. ಉಮೇಶ್ ಮಯ್ಯ ಅವರು ಜೊತೆಗೂಡಿ ಬರೆದ ಬಿ.ಕಾಂ ತೃತೀಯ ಸೆಮಿಸ್ಟರ್ ತರಗತಿಯ ಕಾಸ್ಟ್ ಅ್ಯಂಡ್ ಮ್ಯಾನೇಜ್ಮೆಂಟ್ ಅಕೌಂಟಿಕ್ ಪುಸ್ತಕವನ್ನು ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯತೀರ್ಥ ಶ್ರೀಪಾದರು ಬುಧವಾರ ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಮಿನಿ ಆಡಿಟೋರಿಯಂ ನಲ್ಲಿ ಬಿಡುಗಡೆಗೊಳಿಸಿದರು.

ಆ ನಂತರ ಮಾತನಾಡಿದ ಸ್ವಾಮೀಜಿ, ತನ್ನ ಕಾಲೇಜಿನ ಪ್ರತಿಭಾನಿತ್ವ ಪ್ರಾಧ್ಯಾಪಕರಲ್ಲಿ ಒಬ್ಬರಾಗಿರುವ ಸೌಮ್ಯ ಶೆಟ್ಟಿಯವರು ಬರೆದ ಮೊದಲ ಪುಸ್ತಕಕ್ಕೆ ಶುಭಹಾರೈಸಿ, ಇನ್ನಷ್ಟು ಪುಸ್ತಕಗಳನ್ನು ಬರೆಯುವಂತಾಗಲಿ ಎಂದು ಹಾರೈಸಿದರು.

ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ಪುಸ್ತಕವನ್ನು ಬರೆಯುವುದು ಸುಲಭದ ಮಾತಲ್ಲ, ಆಳವಾದ ಅಧ್ಯಯನ ಹಾಗೂ ಪ್ರಖರವಾದ ಆಲೋಚನೆಗಳಿಂದ ಮಾತ್ರ ಪುಸ್ತಕ ಬರೆಯಲು ಸಾಧ್ಯ. ಅಂತಹ ಕೌಶಲ ಸೌಮ್ಯ ಅವರಲ್ಲಿದೆ ಎಂದು ಹೇಳಿದರು.

ಅಧ್ಯಾಪಕಿ ಸೌಮ್ಯ ಶೆಟ್ಟಿ ಮಾತನಾಡಿ, ನನಗೆ ಈ ಪುಸ್ತಕವನ್ನು ಬರೆಯಲು ನನ್ನ ಗುರುಗಳಾದ ಡಾ. ಉಮೇಶ್ ಮಯ್ಯ ಅವರು ಅವಕಾಶವನ್ನು ನೀಡಿದ್ದಾರೆ. ನನ್ನ ಕುಟುಂಬದವರು, ಸ್ನೇಹಿತರು ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಸಹ ಅಧ್ಯಾಪಕರು ತುಂಬಾ ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ, ಡಾ. ಜಿ. ಶಂಕರ್ ಕಾಲೇಜಿನ ಪ್ರಾಧ್ಯಾಪಕ ಡಾ. ಉಮೇಶ್ ಮಯ್ಯ, ಪಿಪಿಸಿಯ ಉಪ ಪ್ರಾಂಶುಪಾಲ ಡಾ. ಪ್ರಕಾಶ್ ರಾವ್ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.

ಕಾಲೇಜಿನ ವಾಣಿಜ್ಯ ವಿಭಾಗದ ಜ್ಯೋತಿ ಆಚಾರ್ಯ ಸ್ವಾಗತಿಸಿದರು. ಸೌಮ್ಯ ಎಲ್. ಶೆಟ್ಟಿ ವಂದಿಸಿದರು. ಮೀನಾಕ್ಷಿ ಆಚಾರ್ಯ ನಿರೂಪಿಸಿದರು.