ಬೈಂದೂರು ಬಿಜೆಪಿ ಮಹಿಳಾ ಮೋರ್ಚಾದಿಂದ ಉಚಿತ ನೇತ್ರ ತಪಾಸಣೆ ಶಿಬಿರ

ಬೈಂದೂರು: ಬಿಜೆಪಿ ಬೈಂದೂರು ಮಂಡಲ ಮತ್ತು ಮಹಿಳಾ ಮೋರ್ಚಾದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಾಚರಣೆ ಅಂಗವಾಗಿ ಉಚಿತ ನೇತ್ರ ತಪಾಸಣೆ, ಪೊರೆ ಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಶಿಬಿರವು ಈಚೆಗೆ ಮಹಾಲಸ ಮಾಂಗಲ್ಯ ಆರ್ಕೇಡ್ ನಲ್ಲಿ ನಡೆಯಿತು. ಶಿಬಿರದಲ್ಲಿ 410 ಜನರಿಗೆ ತಪಾಸಣೆ ಮಾಡಲಾಯಿತು. ಅದರಲ್ಲಿ 205 ಜನರಿಗೆ ಉಚಿತ ಕನ್ನಡಕ ಹಾಗೂ ಶಸ್ತ್ರ ಚಿಕಿತ್ಸೆಗೆ 70 ಜನರನ್ನು ನೋಂದಣಿ ಮಾಡಲಾಯಿತು. ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಮಹಿಳಾ […]

ಕಾರ್ಕಳದ ಕೋಟಿ-ಚೆನ್ನಯ ಭಕ್ತವೃಂದದಿಂದ ಕೋಟಿ- ಚೆನ್ನಯರ ಜನ್ಮದಿನ ಆಚರಣೆ

ಕಾರ್ಕಳ: ಕೋಟಿ-ಚೆನ್ನಯ ಭಕ್ತವೃಂದ ಕಾರ್ಕಳ ಇದರ ವತಿಯಿಂದ ಇಂದು ಕೋಟಿ-ಚೆನ್ನಯರ ಜನ್ಮದಿನಾಚರಣೆ ಅಚರಿಸಲಾಯಿತು. ಕಾರ್ಕಳದ ಕೋಟಿ-ಚೆನ್ನಯ ಥೀಮ್ ಪಾರ್ಕ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಪಂಚಾಮೃತ ಅಭಿಷೇಕ, ಅಷ್ಟಗಂಧ ಅಭಿಷೇಕ ಮಾಡಲಾಯಿತು. ಕೋಟಿ ಚೆನ್ನಯ ಭಕ್ತವೃಂದದ ರವಿ ಪೂಜಾರಿ ಪೆರ್ವಾಜೆ, ಯೂತ್ ಬಿಲ್ಲವ ಕಾರ್ಕಳದ ಅಧ್ಯಕ್ಷ ಭರತ್ ಅಂಚನ್, ಸುನೀಲ್ ನೆಲ್ಲಿಗುಡ್ಡೆ, ಗೋಪಾಲ್ ಪೂಜಾರಿ ಇರ್ವತ್ತೂರು, ಬೈದಶ್ರೀ ಗೋಪಾಲ್ ಪೂಜಾರಿ, , ಬೈಲಡ್ಕ ಗರಡಿಯ ಶರತ್ ಕೊಟ್ಯಾನ್, ಯುವವಾಹಿನಿಯ ಕಾರ್ಕಳ ಘಟಕದ ಅಧ್ಯಕ್ಷ ಗಣೇಶ್ ಸಾಲ್ಯಾನ್ ಹಾಗೂ ಯೂತ್ […]

ಪ್ರಸಿದ್ಧ ಜ್ಯೋತಿಷಿ ರಾಜಗೋಪಾಲ ಬಲ್ಲಾಳ ನಿಧನ

ಉಡುಪಿ: ಅಂಬಲಪಾಡಿ ಬಲ್ಲಾಳ ಮನೆತನದ ಹಿರಿಯ ಹಾಗೂ ಪ್ರಸಿದ್ಧ ಜ್ಯೋತಿಷಿ ರಾಜಗೋಪಾಲ ಬಲ್ಲಾಳ (74) ಅವರು ಹೃದಯಾಘಾತದಿಂದ ಮಂಗಳವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ . ಉಡುಪಿಯ ಭಂಡಾರಕೇರಿ ಮಠದ ಆವರಣದಲ್ಲಿ ಶ್ರೀ ಮಾರುತಿ ಜ್ಯೋತಿಷ್ಯಾಲಯವನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದ ಅವರು ಪಂಚಾಂಗ ಕರ್ತೃಗಳಲ್ಲಿ ಒಬ್ಬರಾಗಿದ್ದರು. ಅಸಂಖ್ಯ ಜನರಿಗೆ ಜ್ಯೋತಿಷ್ಯಪ್ರಶ್ನೆಯ ಮೂಲಕ ಸಾಂತ್ವನ ನೀಡುತ್ತಿದ್ದರು. ಬಲ್ಲಾಳರ ನಿಧನಕ್ಕೆ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, […]

ಕಾರ್ಕಳ ಹಿಂದು ಜಾಗರಣ ವೇದಿಕೆಯ ನೂತನ ಮಿಯ್ಯಾರು ಲವ-ಕುಶ ಘಟಕದ ಉದ್ಘಾಟನೆ

ಕಾರ್ಕಳ: ಹಿಂದು ಜಾಗರಣ ವೇದಿಕೆ, ಕಾರ್ಕಳ ಇದರ ನೂತನ ಮಿಯ್ಯಾರು ಲವ-ಕುಶ ಘಟಕದ ಉದ್ಘಾಟನೆ, ಭಾರತ್ ಮಾತಾ ಪೂಜನ್ ಕಾರ್ಯಕ್ರಮ ಹಾಗೂ ನೂತನ ಧ್ವಜ ಕಟ್ಟೆಯ ಉದ್ಘಾಟನೆ ಸಮಾರಂಭ ಭಾನುವಾರ ಮೀಯ್ಯಾರು ಸಂಕದ ಬಳಿಯ ದಿನೇಶ್ ಭವನ್ ಹೊಟೇಲ್ ಆವರಣದಲ್ಲಿ ನಡೆಯಿತು. ಮಿಯ್ಯಾರು ಹಿರಿಯ ಮುಖಂಡ ಮಾಧವ ಕಾಮತ್, ಹಿಂಜಾವೇ ಉಡುಪಿ ಜಿಲ್ಲಾ ಭೂ ಸುರಕ್ಷಾ ಸಂಯೋಜಕ್ ರಮೇಶ್ ಕಲ್ಲೊಟ್ಟೆ, ಹಿಂಜಾವೇ ತಾಲೂಕ್ ಮಾತೃ ಸುರಕ್ಷಾ ಪ್ರಮುಖ್ ಹರೀಶ್ ಕಿಚ್ಚ ಮುಡಾರು, ಹಿಂಜಾವೇ ನಗರ ಪ್ರಧಾನ ಕಾರ್ಯದರ್ಶಿ […]

ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ

ಉಡುಪಿ ಸೆಪ್ಟೆಂಬರ್, 22: ಪ್ರಸ್ತುತ ಸಾಲಿಗೆ ಎನ್‍ಪಿಸಿಡಿಸಿಎಸ್ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಿಗೆ ಸಾಮಾನ್ಯ ಕರ್ತವ್ಯ ವೈದ್ಯರು, ಆಪ್ತ ಸಮಾಲೋಚಕರು ಹಾಗೂ ಎನ್‍ಪಿಹೆಚ್‍ಸಿಇ ಕಾರ್ಯಕ್ರಮದಡಿಯಲ್ಲಿ ಫಿಸಿಯೋಥರಪಿಸ್ಟ್ ಮತ್ತು ರಿಹ್ಯಾಬಿಲಿಟೇಶನ್  ವರ್ಕರ್ ಹುದ್ದೆಗಳ ನೇಮಕಾತಿ ಮಾಡಲು ಅರ್ಜಿ  ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಪಡೆದು, ಭರ್ತಿ ಮಾಡಿ, ಜಿಲ್ಲಾ ಸರ್ವೇಕ್ಷಣಾ ಘಟಕ/ ಎನ್.ಸಿ.ಡಿ.ಘಟಕ, ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು ಉಡುಪಿ ಇವರಿಗೆ ಅಕ್ಟೋಬರ್ 5 ರ ಒಳಗೆ ಸಲ್ಲಿಸುವಂತೆ ಎನ್.ಸಿ.ಡಿ ಘಟಕ ಜಿಲ್ಲಾ […]