udupixpress
Home Trending ಕಾರ್ಕಳ ಹಿಂದು ಜಾಗರಣ ವೇದಿಕೆಯ ನೂತನ ಮಿಯ್ಯಾರು ಲವ-ಕುಶ ಘಟಕದ ಉದ್ಘಾಟನೆ

ಕಾರ್ಕಳ ಹಿಂದು ಜಾಗರಣ ವೇದಿಕೆಯ ನೂತನ ಮಿಯ್ಯಾರು ಲವ-ಕುಶ ಘಟಕದ ಉದ್ಘಾಟನೆ

ಕಾರ್ಕಳ: ಹಿಂದು ಜಾಗರಣ ವೇದಿಕೆ, ಕಾರ್ಕಳ ಇದರ ನೂತನ ಮಿಯ್ಯಾರು ಲವ-ಕುಶ ಘಟಕದ ಉದ್ಘಾಟನೆ, ಭಾರತ್ ಮಾತಾ ಪೂಜನ್ ಕಾರ್ಯಕ್ರಮ ಹಾಗೂ ನೂತನ ಧ್ವಜ ಕಟ್ಟೆಯ ಉದ್ಘಾಟನೆ ಸಮಾರಂಭ ಭಾನುವಾರ ಮೀಯ್ಯಾರು ಸಂಕದ ಬಳಿಯ ದಿನೇಶ್ ಭವನ್ ಹೊಟೇಲ್ ಆವರಣದಲ್ಲಿ ನಡೆಯಿತು.

ಮಿಯ್ಯಾರು ಹಿರಿಯ ಮುಖಂಡ ಮಾಧವ ಕಾಮತ್, ಹಿಂಜಾವೇ ಉಡುಪಿ ಜಿಲ್ಲಾ ಭೂ ಸುರಕ್ಷಾ ಸಂಯೋಜಕ್ ರಮೇಶ್ ಕಲ್ಲೊಟ್ಟೆ, ಹಿಂಜಾವೇ ತಾಲೂಕ್ ಮಾತೃ ಸುರಕ್ಷಾ ಪ್ರಮುಖ್ ಹರೀಶ್ ಕಿಚ್ಚ ಮುಡಾರು, ಹಿಂಜಾವೇ ನಗರ ಪ್ರಧಾನ ಕಾರ್ಯದರ್ಶಿ ರಂಜಿತ್ ಆಚಾರ್ಯ, ಹಿಂಜಾವೇ ನಗರ ಉಪಾಧ್ಯಕ್ಷ ಸುಜಿತ್ ಸಫಲಿಗ ಅವರು ಭಾರತ್ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಮೇಶ್ ಕಲ್ಲೊಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಧವ ಕಾಮತ್ ಅವರು ಹಿಂದೂ ಕಾರ್ಯಕರ್ತರಿಗೆ ಹಿತವಚನ ಬೋಧಿಸಿದರು.
ಲವ-ಕುಶ ಘಟಕಕ್ಕೆ ಎಲ್ ಐಸಿ ಶ್ಯಾಮ್ ಶೆಟ್ಟಿ ಮತ್ತು ದಿನೇಶ್ ಶೆಟ್ಟಿ ಅವರು ಧ್ವಜಕಟ್ಟೆಯನ್ನು ಕೊಡುಗೆಯಾಗಿ ನೀಡಿದರು.
ಹಿಂಜಾವೇ ತಾಲೂಕ್ ಪ್ರಚಾರ್ ಪ್ರಮುಖ್ ರಮೇಶ್ ಅಯೋಧ್ಯಾ ನಗರ ಕಾರ್ಯಕ್ರಮ ನಿರೂಪಿಸಿದರು.