udupixpress
Home Trending ಪ್ರಸಿದ್ಧ ಜ್ಯೋತಿಷಿ ರಾಜಗೋಪಾಲ ಬಲ್ಲಾಳ ನಿಧನ

ಪ್ರಸಿದ್ಧ ಜ್ಯೋತಿಷಿ ರಾಜಗೋಪಾಲ ಬಲ್ಲಾಳ ನಿಧನ

ಉಡುಪಿ: ಅಂಬಲಪಾಡಿ ಬಲ್ಲಾಳ ಮನೆತನದ ಹಿರಿಯ ಹಾಗೂ ಪ್ರಸಿದ್ಧ ಜ್ಯೋತಿಷಿ ರಾಜಗೋಪಾಲ ಬಲ್ಲಾಳ (74) ಅವರು ಹೃದಯಾಘಾತದಿಂದ ಮಂಗಳವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ .
ಉಡುಪಿಯ ಭಂಡಾರಕೇರಿ ಮಠದ ಆವರಣದಲ್ಲಿ ಶ್ರೀ ಮಾರುತಿ ಜ್ಯೋತಿಷ್ಯಾಲಯವನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದ ಅವರು ಪಂಚಾಂಗ ಕರ್ತೃಗಳಲ್ಲಿ ಒಬ್ಬರಾಗಿದ್ದರು.

ಅಸಂಖ್ಯ ಜನರಿಗೆ ಜ್ಯೋತಿಷ್ಯಪ್ರಶ್ನೆಯ ಮೂಲಕ ಸಾಂತ್ವನ ನೀಡುತ್ತಿದ್ದರು. ಬಲ್ಲಾಳರ ನಿಧನಕ್ಕೆ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಅಂಬಲಪಾಡಿ ಬ್ರಾಹ್ಮಣ ಸಮಿತಿ ಶಾಸಕ ಕೆ ರಘುಪತಿ ಭಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.