ಗಾಂಜಾ ಮಾರಾಟ ಜಾಲದಲ್ಲಿ ತೊಡಗಿಕೊಂಡಿದ್ದ 38 ಡ್ರಗ್ಸ್ ಪೆಡ್ಲರ್ ಗಳ ಬಂಧನ: 17.89 ಕೆ.ಜಿ. ಗಾಂಜಾ ವಶ

ಬೆಂಗಳೂರು: ನಗರದಲ್ಲಿ ಡ್ರಗ್ಸ್ ಗಾಂಜಾ ಮಾರಾಟದಲ್ಲಿ ಸಕ್ರಿಯರಾಗಿದ್ದ 38 ಜನರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದು, ಅವರಿಂದ 17.89 ಕೆ.ಜಿ. ಗಾಂಜಾ ಮತ್ತು 600 ಎಂ.ಎಲ್. ಗಾಂಜಾ ಆಯಿಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ವಿಭಾಗದ ಪೊಲೀಸ್ ಠಾಣೆ ಸರಹದ್ದಿನಲ್ಲಿ ಗಾಂಜಾ ಮತ್ತು ಇನ್ನಿತರ ಮಾದಕ ಸೇವನೆ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ದ 12 ಪೊಲೀಸ್ ಠಾಣೆಗಳಲ್ಲಿ 30 ಪ್ರಕರಣಗಳನ್ನು ದಾಖಲು ಮಾಡಿಕೊಂಡು 38 ಮಂದಿಯನ್ನು ಬಂಧಿಸಲಾಗಿದೆ. ಆರ್ ಎಂ ಸಿ ಯಾರ್ಡ್ ಪೊಲೀಸರು ಅರುಣ್(29), ವಿಜಯನ್ (27), ದೀಪನ್ […]

ಮೋದಿ ಹುಟ್ಟುಹಬ್ಬ ಆಚರಣೆ: ಜಿಲ್ಲಾ ಬಿಜೆಪಿಯಿಂದ ಸಾಮೂಹಿಕ ಪ್ರಾರ್ಥನೆ-ವಿಶೇಷ ಪೂಜೆ

ಉಡುಪಿ: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ೭೦ನೇ ಜನ್ಮ ದಿನಾಚರಣೆಯ ಪ್ರಯುಕ್ತ ದೇಶದ ಸಮೃದ್ಧಿ ಹಾಗೂ ಪ್ರಧಾನಿ ಮೋದಿಯವರ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಉಡುಪಿ […]

ಉದ್ಯಾವರ: ಸದಿಯ ಸಾಹುಕಾರ್ ರಸ್ತೆಯ ನಾಮಫಲಕ ಅನಾವರಣ

ಉದ್ಯಾವರ: ಉದ್ಯಾವರ ಜಯಲಕ್ಷ್ಮಿ ಸಿಲ್ಕ್ಸ್ ನಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ರಸ್ತೆಗೆ ಇಂದು ‘ಸದಿಯ ಸಾಹುಕಾರ್ ರಸ್ತೆ’ ಎಂದು ನಾಮಕರಣ ಮಾಡಿ ಫಲಕ ಅನಾವರಣಗೊಳಿಸಲಾಯಿತು. ಕಾಪು ಶಾಸಕ ಲಾಲಾಜಿ ಮೆಂಡನ್ ರಸ್ತೆಯ ನಾಮಕರಣ ಫಲಕ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಾಹುಕಾರ್ ಕುಟುಂಬದ ಗಣೇಶ್ ಯು. ಹಾಗೂ ಸುರೇಶ್ ಅವರನ್ನು ಶಾಸಕರು ಗೌರವಿಸಿದರು. ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಪಂಚಾಯತ್ ನಿಕಟಪೂರ್ವ ಸದಸ್ಯರಾದ ಲಾರೆನ್ಸ್ ಡೇಸಾ, ವಿಲ್ಸನ್ ರಾಜ್ ಕುಮಾರ್, ಬಿ.ಜೆ.ಪಿ […]

ಉಡುಪಿಯ ‘ರಾಯಲ್ ಮಹಲ್’ ಬಹುಮಹಡಿ ಕಟ್ಟಡದ ಪಾರ್ಶ್ವ ಭಾಗ ಕುಸಿತ: ತಪ್ಪಿದ ಭಾರೀ ದುರಂತ

ಉಡುಪಿ: ಚಿತ್ತರಂಜನ್ ಸರ್ಕಲ್ ಬಳಿಯ ಸುಮಾರು ಐವತ್ತು ವರ್ಷದ ಹಳೆಯ ರಾಯಲ್ ಮಹಲ್ ಬಹುಮಹಡಿ ಕಟ್ಟಡದ ಪಾರ್ಶ್ವ ಭಾಗ ಕುಸಿದಿದ್ದು, ಅದೃಷ್ಟವಶಾತ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಏಕಾಏಕಿಯಾಗಿ ಕಟ್ಟಡ ಕುಸಿದು ಬಿದಿದ್ದು, ಕಟ್ಟಡ ಕುಸಿದು ಬೀಳುವ ಸದ್ದು ಕೇಳಿ ತಳಮಹಡಿಯಲ್ಲಿದ್ದ ಭಾರತೀಯ ಜನ ಔಷಧಿ ಕೇಂದ್ರ, ಹೋಟೆಲ್, ಚಿಪ್ಸ್ ಬೇಕರಿ ಅಂಗಡಿಯ ಸಿಬ್ಬಂದಿ ಹೊರಗಡೆ ಓಡಿ ಬಂದಿದ್ದಾರೆ. ಹಾಗಾಗಿ ಯಾರಿಗೂ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. ಕಟ್ಟಡದ ಒಂದು ಭಾಗ ಸಂಪೂರ್ಣ ಕುಸಿದಿರುವುದರಿಂದ ಹೆಚ್ಚಿನ […]

ಕರಾವಳಿ ಕಾವಲು ಪಡೆ ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದ ಕಿಡಿಗೇಡಿಗಳು

ಉಡುಪಿ: ಮಲ್ಪೆಯ ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ಕುಮಾರ್ ಆರ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದ ಪ್ರಕರಣ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಎಸ್ಪಿ ಸಿಂಗ್ ಎಂಬ ಹೆಸರಿನಲ್ಲಿ ನಕಲಿ ಖಾತೆಯನ್ನು ಶುಕ್ರವಾರ ಸೃಷ್ಟಿಸಿದ್ದು, ಅದಕ್ಕೆ ಉಡುಪಿಯ ಕರಾವಳಿ ಕಾವಲು ಪಡೆ ಎಸ್ಪಿ ಚೇತನ್ ಕುಮಾರ್ ಅವರ ಫೊಟೋ ಬಳಕೆ ಮಾಡಿದ್ದಾರೆ. ಆದರೆ ನಕಲಿ ಖಾತೆ ತೆರೆದ ಅರ್ಧ ಗಂಟೆಯಲ್ಲಿಯೇ ಎಸ್ಪಿ ಚೇತನ್ ಕುಮಾರ್ ಅವರಿಗೆ ಮಾಹಿತಿ ಲಭಿಸಿದ್ದು, ಅವರು ತಕ್ಷಣವೇ ಸ್ಥಳೀಯ […]