udupixpress
Home Trending ಗಾಂಜಾ ಮಾರಾಟ ಜಾಲದಲ್ಲಿ ತೊಡಗಿಕೊಂಡಿದ್ದ 38 ಡ್ರಗ್ಸ್ ಪೆಡ್ಲರ್ ಗಳ ಬಂಧನ: 17.89 ಕೆ.ಜಿ. ಗಾಂಜಾ...

ಗಾಂಜಾ ಮಾರಾಟ ಜಾಲದಲ್ಲಿ ತೊಡಗಿಕೊಂಡಿದ್ದ 38 ಡ್ರಗ್ಸ್ ಪೆಡ್ಲರ್ ಗಳ ಬಂಧನ: 17.89 ಕೆ.ಜಿ. ಗಾಂಜಾ ವಶ

ಬೆಂಗಳೂರು: ನಗರದಲ್ಲಿ ಡ್ರಗ್ಸ್ ಗಾಂಜಾ ಮಾರಾಟದಲ್ಲಿ ಸಕ್ರಿಯರಾಗಿದ್ದ 38 ಜನರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದು, ಅವರಿಂದ 17.89 ಕೆ.ಜಿ. ಗಾಂಜಾ ಮತ್ತು 600 ಎಂ.ಎಲ್. ಗಾಂಜಾ ಆಯಿಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ವಿಭಾಗದ ಪೊಲೀಸ್ ಠಾಣೆ ಸರಹದ್ದಿನಲ್ಲಿ ಗಾಂಜಾ ಮತ್ತು ಇನ್ನಿತರ ಮಾದಕ ಸೇವನೆ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ದ 12 ಪೊಲೀಸ್ ಠಾಣೆಗಳಲ್ಲಿ 30 ಪ್ರಕರಣಗಳನ್ನು ದಾಖಲು ಮಾಡಿಕೊಂಡು 38 ಮಂದಿಯನ್ನು ಬಂಧಿಸಲಾಗಿದೆ.

ಆರ್ ಎಂ ಸಿ ಯಾರ್ಡ್ ಪೊಲೀಸರು ಅರುಣ್(29), ವಿಜಯನ್ (27), ದೀಪನ್ ಎಂಬುವವರನ್ನು ಬಂಧಿಸಿ, 13.8 ಕೆಜಿ ಗಾಂಜಾ ವಶಪಡಿಸಿಕೊಂಡು ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ‌‌.

ಅಚ್ಚುತನಗರದ 5ನೇ ಕ್ರಾಸ್ ರಸ್ತೆ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ವಿನಯ್‍ಕುಮಾರ್(22) ಎಂಬಾತನನ್ನುಬಂಧಿಸಿ 4 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸೆಂಟ್ ಕ್ಲಾರೆಟ್ ಕಾಲೇಜು ಬಳಿ ಗಾಂಜಾ ಆಯಿಲ್‍ನ್ನು ತಂದು ಮಾರಾಟ ಮಾಡುತ್ತಿದ್ದ ತವನೀಶ್ ಎಂಬಾತನನ್ನು ಬಂಧಿಸಿ 600 ಎಂಎಲ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.