ಗಾಯಕಿ ಅನುರಾಧಾ ಪೊಡವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ನಿಧನ

ಮುಂಬೈ: ಹಿರಿಯ ಗಾಯಕಿ ಅನುರಾಧಾ ಪೊಡವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ (35) ಮುಂಬೈನಲ್ಲಿ ನಿಧನ ಹೊಂದಿದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಗಾಯಕ ಹಾಗೂ ಸಂಗೀತ ನಿರ್ದೇಶಕ ಶಂಕರ್‌ ಮಹಾದೇವನ್‌ ಟ್ವೀಟ್‌ ಮಾಡಿದ್ದಾರೆ. ನನ್ನ ಹಲವು ಪ್ರಾಜೆಕ್ಟ್‌ಗಳಲ್ಲಿ ಆದಿತ್ಯ ಕೆಲಸ ಮಾಡಿದ್ದರು. ಅವರ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ದುಖ ಭರಿಸುವ ಶಕ್ತಿ ನೀಡಲಿ ಎಂದು ಶಂಕರ್‌ ಟ್ವೀಟ್‌ […]

ಬಡವರ ಕೈ ಬಲಪಡಿಸುವ ಮೂಲಕ ಬಡತನ ನಿರ್ಮೂಲನೆ ಮಾಡಬೇಕಿದೆ: ಪ್ರಧಾನಿ ಮೋದಿ

ನವದೆಹಲಿ: ಬಡತನವನ್ನು ಹೋಗಲಾಡಿಸಲು ನಾವು ಬಡವರನ್ನು ಬಲಪಡಿಸಬೇಕು. ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪಿಎಂಎವೈ ಅಡಿಯಲ್ಲಿ ಮಧ್ಯಪ್ರದೇಶದ ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಲಾದ 1.75 ಲಕ್ಷ ಮನೆಗಳ ಗೃಹಪ್ರವೇಶದ ವರ್ಚುವಲ್‌ ಸಮಾರಂಭದಲ್ಲಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಯೋಜನೆಯ ಕೆಲವು ಫಲಾನುಭವಿಗಳೊಂದಿಗೆ ಆನ್‌ಲೈನ್‌ ಮೂಲಕ ಸಂವಹನ ನಡೆಸಿದರು.  

ಅರುಣಾಚಲ ಪ್ರದೇಶ: ನಾಪತ್ತೆಯಾಗಿದ್ದ ಐವರು ಯುವಕರನ್ನು ಭಾರತಕ್ಕೆ ಹಸ್ತಾಂತರಿಸಿದ ಚೀನಾ

ಇಟಾನಗರ: ಅರುಣಾಚಲ ಪ್ರದೇಶದ ಸುಬನ್‌ಸಿರಿ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಐವರು ಯುವಕರು ಪತ್ತೆಯಾಗಿದ್ದು, ಇವರನ್ನು ಚೀನಾ ಸೇನೆಯು ಶನಿವಾರ ಬಿಡುಗಡೆ ಮಾಡಿದೆ. ಅರುಣಾಚಲಪ್ರದೇಶದ ಅಪ್ಪರ್‌ ಸುಬನ್‌ಸಿರಿ ಜಿಲ್ಲೆಯ ಮೆಕ್‌ಮೋಹನ್‌ ಗಡಿರೇಖೆ ಬಳಿ ಸೆ. 1ರಂದು ಬೇಟೆಯಾಡಲು ಕಾಡಿಗೆ ತೆರಳಿದ್ದ ಈ ಐವರು ಯುವಕರು ನಾಪತ್ತೆಯಾಗಿದ್ದರು. ಬಳಿಕ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯಿಂದ (ಪಿಎಲ್‌ಎ) ಅಪಹರಣಕ್ಕೊಳಗಾಗಿದ್ದರು ಎನ್ನಲಾಗಿತ್ತು. ಯುವಕರು ನಾಪತ್ತೆಯಾಗಿದ್ದ ವಿಷಯವನ್ನು ಭಾರತೀಯ ಸೇನೆಯು ಪಿಎಲ್‌ಎ ಗಮನಕ್ಕೆ ತಂದಿತ್ತು. ಯುವಕರನ್ನು ಪತ್ತೆ ಮಾಡಿದ ಚೀನಾ, ಅವರು ತಮ್ಮಲ್ಲಿ ಇರುವುದನ್ನು ದೃಢಪಡಿಸಿತ್ತು. […]

ಡ್ರಗ್ಸ್ ಬಗ್ಗೆ ಮಾಹಿತಿ ನೀಡಿ ಸೂಕ್ತ ಬಹುಮಾನ ಪಡೆಯಿರಿ: ಮಣಿಪಾಲ ಪೊಲೀಸರಿಂದ ಬಿಗ್ ಆಫರ್

ಉಡುಪಿ: ಜಿಲ್ಲೆಯಲ್ಲಿ ಡ್ರಗ್ಸ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಜಿಲ್ಲಾ ಪೊಲೀಸರು ಪಣತೊಟ್ಟಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಮಣಿಪಾಲ ಠಾಣೆಯ ಪೊಲೀಸರು ವಿಭಿನ್ನ ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾ, ಡ್ರಗ್ಸ್ ಬಗ್ಗೆ ಮಾಹಿತಿ ನೀಡಿದರೆ ಬಂಪರ್ ಕೊಡುಗೆಯ ಆಫರ್ ಘೋಷಿಸಿದ್ದಾರೆ. ಮಾದಕ ವಸ್ತು ಮಾರಾಟ ಮತ್ತು ಸೇವನೆ ಆರೋಗ್ಯಕ್ಕೆ ಹಾನಿಕರ, ಅಷ್ಟೇ ಅಲ್ಲ ಇಂದಿನ ಯುವ ಪೀಳಿಗೆ ಇದಕ್ಕೆ ಬಲಿ ಆಗಬಾರದು. ಈ ಹಿನ್ನೆಲೆಯಲ್ಲಿ ಯಾವುದೇ ಪ್ರದೇಶದಲ್ಲಿ ಗಾಂಜಾ ಅಥವಾ ಇನ್ನಿತರ ಮಾದಕ ವಸ್ತು ಮಾರಾಟ, ಸಂಗ್ರಹ […]

ಡ್ರಗ್ಸ್ ದಂಧೆ: ಪರೀಕ್ಷೆಗೆ ಮೂತ್ರದ ಬದಲು ನೀರು ತಂದುಕೊಟ್ಟ ರಾಗಿಣಿ

ಬೆಂಗಳೂರು: ಡ್ರಗ್ಸ್ ನಂಟಿನ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಾಗಿಣಿ ದ್ವಿವೇದಿ ವೈದ್ಯಕೀಯ ಪರೀಕ್ಷೆ ವೇಳೆ ರಂಪಾಟ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ರಕ್ತ, ಮೂತ್ರ ಹಾಗೂ ತಲೆಕೂದಲು ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದಿದ್ದ ಸಿಸಿಬಿ ಪೊಲೀಸರು, ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆಗೆ ಸಂಜನಾ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ರಾಗಿಣಿ ಸಹ ಪರೀಕ್ಷೆಗೆ ತಗಾದೆ ತೆಗೆದಿದ್ದರು. ಆಸ್ಪತ್ರೆ ಬೆಡ್‌ ಮೇಲೆಯೇ ಕುಳಿತು ತಮ್ಮ ಪರ ವಕೀಲರನ್ನು […]