udupixpress
Home Trending ಗಾಯಕಿ ಅನುರಾಧಾ ಪೊಡವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ನಿಧನ

ಗಾಯಕಿ ಅನುರಾಧಾ ಪೊಡವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ನಿಧನ

ಮುಂಬೈ: ಹಿರಿಯ ಗಾಯಕಿ ಅನುರಾಧಾ ಪೊಡವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ (35) ಮುಂಬೈನಲ್ಲಿ ನಿಧನ ಹೊಂದಿದರು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಗಾಯಕ ಹಾಗೂ ಸಂಗೀತ ನಿರ್ದೇಶಕ ಶಂಕರ್‌ ಮಹಾದೇವನ್‌ ಟ್ವೀಟ್‌ ಮಾಡಿದ್ದಾರೆ.

ನನ್ನ ಹಲವು ಪ್ರಾಜೆಕ್ಟ್‌ಗಳಲ್ಲಿ ಆದಿತ್ಯ ಕೆಲಸ ಮಾಡಿದ್ದರು. ಅವರ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ದುಖ ಭರಿಸುವ ಶಕ್ತಿ ನೀಡಲಿ ಎಂದು ಶಂಕರ್‌ ಟ್ವೀಟ್‌ ಮಾಡಿದ್ದಾರೆ.