ಕಾರ್ಕಳ:ಕಾಬೆಟ್ಟು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಮುದ್ದುಕೃಷ್ಣ ಸ್ಪರ್ಧೆ ಉದ್ಘಾಟನೆ

ಕಾರ್ಕಳ: ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನ ಚೋಲ್ಪಾಡಿ ಕಾಬೆಟ್ಟು ಕಾರ್ಕಳ ,ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆನೆಕೆರೆ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ-2020 ಸೆ.10 ರಂದು ಕಾಬೆಟ್ಟು ವೇಣುಗೋಪಾಲ ದೇವಸ್ಥಾನದಲ್ಲಿ ಜರಗಿತು‌. ಕಾರ್ಯಕ್ರಮಕ್ಕೆ ದೇವಸ್ಥಾನದ ಸಾವಿತ್ರಿ ಉಪಾಧ್ಯಾಯ ,ಸಂಕೇತ್ ಉಪಾದ್ಯಾಯ,ಸಂದೇಶ್ ಉಪಾದ್ಯಾಯ,ಸಂತೋಷ್ ಉಪಾದ್ಯಾಯ, ಜಿ.ಸಮಿತಿಯ ಅಧ್ಯಕ್ಷ ದಿನೇಶ್ ಪ್ರಭು,ಕಾರ್ಯದರ್ಶಿ ಸುದೇಶ್ ಶೆಟ್ಟಿಗಾರ್,ಉಪಾದ್ಯಕ್ಷ ಕೇಸರಿ ಹೆಗ್ಡೆ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪರವಾಗಿ ವರದರಾಯ ಪ್ರಭು ಉಪಸ್ಥಿತರಿದ್ದರು.ಶೋಭಾ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಚಿನ್ನಾಟವಾಡಿದ […]

ಸಾಲ ಮರುಪಾವತಿ ಅವಧಿ ಸೆ. 28ರ ವರೆಗೆ ಮುಂದೂಡಿಕೆ

ನವದೆಹಲಿ: ಕೋವಿಡ್ 19 ಸಂಕಷ್ಟದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ಸಾಲ ಮರುಪಾವತಿ ವಿನಾಯ್ತಿ (ಮೊರಟೊರಿಯಂ ಅವಧಿ) ಅವಧಿಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 28ರ ವರೆಗೆ ವಿಸ್ತರಿಸಿದೆ. ಈ ಹಿಂದೆ ಸಾಲ ಮರುಪಾವತಿ ಅವಧಿಯನ್ನು ಆಗಸ್ಟ್ 31ಕ್ಕೆ ಅಂತಿಮಗೊಳಿಸಲಾಗಿತ್ತು. ಜನರು ಇನ್ನೂ ಕೋವಿಡ್ ಸಂಕಷ್ಟಗಳಲ್ಲಿ ಇದ್ದು, ಮಾರಟೊರಿಯಂ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ. ಸಾಲ ಮರುಪಾವತಿ ಕುರಿತಂತೆ ಸಲ್ಲಿಕೆಯಾಗಿರುವ ಪಿಐಎಲ್ ಗಳನ್ನು ಮನಗಂಡಿರುವ ಸುಪ್ರೀಂ ಕೋರ್ಟ್, ಸಾಲ ಮರುಪಾವತಿ […]

ಕಾಪು: ಮೂರು ಕರುಗಳಿಗೆ ಜನ್ಮನೀಡಿದ ಹಸು

ಕಾಪು: ತಾಲ್ಲೂಕಿನ ಮಜೂರಿನ ಸಾನದ ಮನೆಯಲ್ಲಿ ಹಸುವೊಂದು ಇಂದು ಮೂರು ಕರುಗಳಿಗೆ ಜನ್ಮನೀಡಿದ ಘಟನೆ ಭಾರೀ ಸಂಚಲನ ಮೂಡಿಸಿದೆ. ಕಾಕಾತಾಳಿಯ ಎಂಬಂತೆ ಶ್ರೀಕೃಷ್ಣಜನ್ಮಾಷ್ಟಮಿಯಂದೆ ಹಸು ಮೂರು ಕರುಗಳಿಗೆ ಜನ್ಮನೀಡಿದ್ದು, ಭಾರೀ ಕೌತುಕಕ್ಕೆ ಕಾರಣವಾಗಿದೆ. ಹಸು ಮತ್ತು‌ ಮೂರು ಕರುಗಳು ಆರೋಗ್ಯವಾಗಿವೆ. ಇದೀಗ ಹಸು ಮತ್ತು‌ ಕರುವನ್ನು ನೋಡಲು ಜನಸಾಗರವೇ ಹರಿದುಬರುತ್ತಿದೆ ಎಂದು ತಿಳಿದುಬಂದಿದೆ.

ಭಾರತೀಯ ವಾಯುಪಡೆಗೆ ಐದು ರಫೇಲ್‌ ಯುದ್ಧವಿಮಾನಗಳು ಅಧಿಕೃತವಾಗಿ ಸೇರ್ಪಡೆ

ಅಂಬಾಲಾ: ಭಾರತೀಯ ವಾಯುಪಡೆಗೆ ಇಂದು ಐದು ರಫೇಲ್‌ ಯುದ್ಧವಿಮಾನಗಳು ಅಧಿಕೃತವಾಗಿ ಸೇರ್ಪಡೆಗೊಂಡಿತು. ಇಲ್ಲಿರುವ ವಾಯುನೆಲೆಯಲ್ಲಿ ಯುದ್ಧವಿಮಾನಗಳ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಸರ್ವಧರ್ಮ ಪೂಜೆ ಹಾಗೂ ಜಲಫಿರಂಗಿಗಳಿಂದ ಗೌರವ ಸಮರ್ಪಣೆ ನಂತರ ಈ ಯುದ್ಧವಿಮಾನಗಳ ಸಾಮರ್ಥ್ಯ ಪ್ರದರ್ಶನವೂ ನಡೆಯಿತು. ಗಡಿ ವಿಷಯವಾಗಿ ಚೀನಾದೊಂದಿಗೆ ಸಂಘರ್ಷ ಏರ್ಪಟ್ಟಿರುವ ಸಂದರ್ಭದಲ್ಲಿಯೇ ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಿದ್ದು, ವಾಯುಪಡೆಗೆ ಮತ್ತಷ್ಟು ಬಲ ನೀಡಿದೆ. ಈ ಸಂದರ್ಭದಲ್ಲಿ ಸಚಿವ ರಾಜನಾಥ್‌ಸಿಂಗ್‌, ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲಿ, ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ಜನರಲ್‌ […]

ಕಾರ್ಕಳ: ಭೀಮ ಘರ್ಜನೆ ಸಂಘಟನೆಯ ಶಾಖೆ ಉದ್ಘಾಟನಾ ಕಾರ್ಯಕ್ರಮ

ಕಾರ್ಕಳ: ಭೀಮ ಘರ್ಜನೆ ಸಂಘಟನೆಯ ಶಾಖೆ ಉದ್ಘಾಟನೆ ಕಾರ್ಯಕ್ರಮ ಸೆ.6 ರಂದು  ನಲ್ಲೂರು ಪರಪ್ಪಾಡಿಯಲ್ಲಿ ನಡೆಯಿತು. ಶಾಖೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಇದರ ಸಂಚಾಲಕರಾದ ಉದಯ್ ಕುಮಾರ್ ತಲ್ಲೂರು  ನೆರವೇರಿಸಿ ಮಾತನಾಡಿ, ಮಹಾನಾಯಕರ ಚಿಂತನೆಗಳಿಂದ ಪ್ರಭಾವಿತರಾಗಿ ನಾವು ಬದಲಾಗಬೇಕು. ಹೋರಾಟದ ಹಾದಿಯಲ್ಲಿ ನಡೆಯಬೇಕು. ಸವಲತ್ತುಗಳನ್ನು ಪಡೆದುಕೊಳ್ಳಬೇಕು, ನಮ್ಮ ಹೋರಾಟ ಹೇಗಿರಬೇಕೆಂದರೆ ನಾವು ಮಾಡುವ ಹೋರಾಟ ಇತಿಹಾಸದ ಪುಟದಲ್ಲಿ ಅಚ್ಚೊತ್ತಬೇಕು ಎಂದು ಹೇಳಿದರು. ಮಂಗಳೂರು ಜಿಲ್ಲಾ ಸಂಚಾಲಕರಾದ ಪ್ರಭಾಕರ್ ಮಾತನಾಡಿ, ದೌರ್ಜನ್ಯಕ್ಕೊಳಗಾದವರ ಕಣ್ಣೀರು ಒರೆಸುವ ಕಾರ್ಯವನ್ನು […]