ಪಬ್ಜಿ ಆಡಲು ಸಾಧ್ಯವಾಗದಿದ್ದರಿಂದ ಯುವಕ ಆತ್ಮಹತ್ಯೆಗೆ ಶರಣು

ಕೋಲ್ಕತ್ತ: ಪಬ್ಜಿ ಗೇಮ್ ಆಡಲು ಸಾಧ್ಯವಾಗದ ಕಾರಣದಿಂದ 21 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ನಡೆದಿದೆ. ಐಟಿಐ ಕಲಿಯುತ್ತಿದ್ದ ಪ್ರೀತಮ್ ಹಲ್ದರ್ ಮೃತ ವಿದ್ಯಾರ್ಥಿ. ಪಬ್ಜಿ ಗೇಮ್ ಆಡಲು ಅವಕಾಶ ಸಿಗದ ಕಾರಣ ಮನನೊಂದು ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಪ್ರೀತಮ್ ರಾತ್ರಿ ಪಬ್ಜಿ ಆಡುತ್ತಿದ್ದ. ಆ್ಯಪ್ ನಿಷೇಧದ ಬಳಿಕ ಆಡಲು ಸಾಧ್ಯವಾಗದಿರುವುದರಿಂದ ಖಿನ್ನತೆಗೆ ಒಳಗಾಗಿ ಆತ್ಮಹ್ಯತೆಗೆ ಶರಣಾಗಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ. ಕೇಂದ್ರ […]

ಈಜಲು ಹೋಗಿದ್ದ ನಾಲ್ವರು ಯುವಕರು ನದಿಯಲ್ಲಿ ಮುಳುಗಿ ಸಾವು

ಯಾದಗಿರಿ: ನಗರ ಹೊರವಲಯದ ಭೀಮಾ ನದಿಯಲ್ಲಿ ಭಾನುವಾರ ಈಜಲು ತೆರಳಿದ್ದ ನಾಲ್ವರು ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದು, ಸೋಮವಾರ ಬೆಳಿಗ್ಗೆ ಅವರ ಪತ್ತೆಯಾಗಿದೆ. ಮೃತರನ್ನು ನಗರದ ಅಜೀಜ್ ಕಾಲೊನಿಯ ಅಮನ್ (16), ಅಯಾನ್ (16), ರೆಹಮಾನ್ (16), ಕಲಬುರ್ಗಿಯ ರೆಹಮಾನ್ (16) ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಎನ್ ಡಿಆರ್ ಎಫ್ ತಂಡ, ರಾಷ್ಟ್ರೀಯ ಗೃಹ ರಕ್ಷಕ ದಳ, ಸ್ಥಳೀಯ ಮೀನುಗಾರರು ಕಾರ್ಯಾಚರಣೆ ನಡೆಸಿದ್ದಾರೆ. ಭಾನುವಾರ ಕತ್ತಲಾಗುವರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಮೃತದೇಹ ಸಿಕ್ಕಿರಲಿಲ್ಲ, ಮತ್ತೆ […]

ಉಡುಪಿ: ಕೃಷ್ಣಜನ್ಮಾಷ್ಟಮಿ, ವಿಟ್ಲಪಿಂಡಿ ಉತ್ಸವಕ್ಕೆ ಸಾರ್ವಜನಿಕರು ಭಾಗವಹಿಸುವಂತಿಲ್ಲ: ಡಿಸಿ ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಿರುವುದರಿಂದ ಕೃಷ್ಣಮಠದಲ್ಲಿ ಸೆ. 10 ಮತ್ತು 11ರಂದು ನಡೆಯುವ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವದಲ್ಲಿ ಸಾರ್ವಜನಿಕರು ಭಾಗವಹಿಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಕೋವಿಡ್ 19 ಸಂಬಂಧಿಸಿ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಹೊಸ ಮಾರ್ಗಸೂಚಿಯಲ್ಲಿ ಸೆ. 21ರ ಬಳಿಕ 100 ಜನರು ಸೇರಿ ಕಾರ್ಯಕ್ರಮ ನಡೆಸಬಹುದು ಎಂದು ಆದೇಶಿಸಿದೆ. ಆದರೆ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವ ಸೆ. 10 ಹಾಗೂ 11ರಂದು ನಡೆಯುವುದರಿಂದ ಹಳೆಯ ಮಾರ್ಗಸೂಚಿಯೇ […]