udupixpress
Home Trending ಪಬ್ಜಿ ಆಡಲು ಸಾಧ್ಯವಾಗದಿದ್ದರಿಂದ ಯುವಕ ಆತ್ಮಹತ್ಯೆಗೆ ಶರಣು

ಪಬ್ಜಿ ಆಡಲು ಸಾಧ್ಯವಾಗದಿದ್ದರಿಂದ ಯುವಕ ಆತ್ಮಹತ್ಯೆಗೆ ಶರಣು

ಕೋಲ್ಕತ್ತ: ಪಬ್ಜಿ ಗೇಮ್ ಆಡಲು ಸಾಧ್ಯವಾಗದ ಕಾರಣದಿಂದ 21 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ನಡೆದಿದೆ.

ಐಟಿಐ ಕಲಿಯುತ್ತಿದ್ದ ಪ್ರೀತಮ್ ಹಲ್ದರ್ ಮೃತ ವಿದ್ಯಾರ್ಥಿ. ಪಬ್ಜಿ ಗೇಮ್ ಆಡಲು ಅವಕಾಶ ಸಿಗದ ಕಾರಣ ಮನನೊಂದು ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಪ್ರೀತಮ್ ರಾತ್ರಿ ಪಬ್ಜಿ ಆಡುತ್ತಿದ್ದ. ಆ್ಯಪ್ ನಿಷೇಧದ ಬಳಿಕ ಆಡಲು ಸಾಧ್ಯವಾಗದಿರುವುದರಿಂದ ಖಿನ್ನತೆಗೆ ಒಳಗಾಗಿ ಆತ್ಮಹ್ಯತೆಗೆ ಶರಣಾಗಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಈಚೆಗೆ ಪಬ್ಜಿ, ಪಬ್ಜಿ ಮೊಬೈಲ್ ಲೈಟ್, ವಿಚಾಟ್ ವರ್ಕ್‌, ಸೇರಿದಂತೆ 118 ಚೀನಾ ದೇಶದ ಆ್ಯಪ್‌ಗಳನ್ನು ನಿಷೇಧ ಮಾಡಿತ್ತು.

error: Content is protected !!